Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on march 27

ಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ಆಸ್ಪತ್ರೆಯಲ್ಲೇ ಹುಟ್ಟಿದ್ದು ದಾಖಲಾತಿಗಳ ಪರಿಶೀಲಿಸಲಿ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಬಾರದು. ವಿನಯ್ ಕುಮಾರ್ ಜಿ .ಬಿ
———————————— ಹೊನ್ನಾಳಿ ಮಾ.27.
ಹೊನ್ನಾಳಿ ತಾಲ್ಲೂಕಿನ ದಿಡಗೊರು . ಹರಳಹಳ್ಳಿ ಗ್ರಾಮದಲ್ಲಿ ಜನಾಭಿಪ್ರಾಯ ಸಮಾರಂಭದಲಿ ಮಾತನಾಡಿದವರು. ಜಿಲ್ಲಾ ಉಸ್ತುವಾರಿ ಸಚಿವರ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು
ಕ್ಷೇತ್ರದ ಮತದಾರರ ಪರಿಚಯವಿಲ್ಲದೆ ಹಾಗೂ ಕ್ಷೇತ್ರದ ಹಳ್ಳಿಗಳ ಪರಿಚಯವಿಲ್ಲದಂತಹ ವ್ಯಕ್ತಿಗೆ ಪಕ್ಷವು ಮನ್ನಣೆ ನೀಡುತ್ತದೆ ಎಂದರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ನೀಡಿದಂತಾಗುತ್ತದೆ ಎಂದು ಹೇಳಿದರು. ಜನ ಅಭಿಪ್ರಾಯದ ಪರವಾಗಿ ಅವರ ಅಪೇಕ್ಷೆಯಂತೆ ಅಭ್ಯರ್ಥಿ ಇದ್ದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಕ್ರಾಂತಿಯಾಗಲು ಸಾಧ್ಯವಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉದ್ಯೋಗಸೃಷ್ಠಿಯ ಅವಕಾಶಗಳಿದ್ದರೂ ಕುಟುಂಬ ರಾಜಕಾರಣ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೇವಲ ಸ್ಥಾನಮಾನಗಳಿಗೆ ಮಾತ್ರ ಮೀಸಲಾಗಿರುವುದು ದುರಂತವಾಗಿದೆ. ಜಿಲ್ಲೆಯಲ್ಲಿ ಬಡತನ ನಿರುದ್ಯೋಗ . ಜನರ ನಾಡಿ ಮಿಡಿತ ಅರಿತವರಿಗೆ ಮಾತ್ರ ಇಂತಹ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಸಮಸ್ಯೆಗಳಿಗೆ ಪರಿಹಾರವನ್ನು ಕೊಡಿಸಿದಾಗ ಮಾತ್ರ
ಮತದಾರರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಅವಕಾಶಗಳು ಸಾಕಷ್ಟಿವೆ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಮಠದ ಶಿಕ್ಷಣ ದೊರೆಯದೆ ಹಾಗೂ ವಿದ್ಯಾವಂತ ಯುವಕ ಯುವತಿಯರಿಗೆ ಅವಕಾಶಗಳು ಸಿಗದೇ ಹಳ್ಳಿಗಳಲ್ಲಿ ಉಳಿದುಕೊಂಡಿರುವುದು ಪ್ರಜಾಪ್ರಭುತ್ವದ ದೊಡ್ಡ ದುರಂತವಾಗಿದೆ. ಜನಸಾಮಾನ್ಯರಿಗೆ ಪರಿಚಯವಿಲ್ಲದಂತ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ನಾವು ಮನಗಣ ಬೇಕಾಗಿದೆ. ಇದೇ ವ್ಯವಸ್ಥೆಯಲ್ಲಿ ನಾವು ಮುಂದುವರೆದರೆ ಇದರ ಫಲಾಪೇಕ್ಷೆಯನ್ನು ಮುಂದೊಂದು ದಿನ ನಾವು ಅನುಭವಿಸಲೇ ಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದಿಡಗೂರು ಗ್ರಾಮಸ್ಥರು ಮಾತನಾಡಿ ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕು ಮಣಿಯದೆ ಚುನಾವಣಾ ಸ್ಪರ್ಧೆಯಿಂದ ನೀವು ಹಿಂದೆ ಸರಿಯಬಾರದು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಒತ್ತಡ ಹಾಕಿದರು ನಮಗೆ ನಿಮ್ಮಂತ ಅಭಿವೃದ್ಧಿಯ ಕನಸನ್ನು ಹೊತ್ತು ಅಭಿವೃದ್ಧಿಯ ಕ್ಷೇತ್ರವನ್ನು ಮಾಡುವಂತ ಯುವ ನಾಯಕರು ಬೇಕಾಗಿದ್ದಾರೆ ಕೇವಲ ಸ್ಥಾನಮಾನಗಳಿಗೆ ಸೀಮಿತವಾಗಿ ಕ್ಷೇತ್ರವೇ ಮರೆಯುವಂತಹ ಅಭ್ಯರ್ಥಿಗಳು ನಮಗೆ ಬೇಕಾಗಿಲ್ಲ ಸುಮಾರು 30 ವರ್ಷಗಳಿಂದ ಯಾವೊಬ್ಬ ಸಂಸದರು ನಮ್ಮ ಹಳ್ಳಿಗಳಿಗೆ ಭೇಟಿ ನೀಡಿಲ್ಲ ಹಾಗೂ ಕ್ಷೇತ್ರದ ಜನರ ನಾಡಿಮಿಡಿತ ಅರಿತವರಿಲ್ಲ ಅಂತವರಿಗೆ ನಾವು ಯಾಕೆ ಚುನಾವಣೆಯಲ್ಲಿ ಬೆಂಬಲಿಸಬೇಕು ಆದ್ದರಿಂದ ನಿಮ್ಮಂತ ಯುವಕರು ಅತ್ಯವಶ್ಯಕವಾಗಿ ಈ ಕ್ಷೇತ್ರಕ್ಕೆ ಈ ಕ್ಷೇತ್ರದ ಅಭಿವೃದ್ಧಿಗಾಗಿ ಬೇಕಾಗಿದೆ ನೀವು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಒತ್ತಾಯ
ಕೇಳಿ ಬಂತು.
ವಿನಯ್ ರವರ ಜೊತೆಯಲ್ಲಿ
ಹೊನ್ನಾಳಿ, ನ್ಯಾಮತಿ, ಭಾಗದ
ಮುಖಂಡರಾದ ನಾಗೇಶ್ ಗಂಜೀನ್ಹಲ್ಲಿ, ಹಾಳಾದಪ್ಪ ಸುರಹೊಂನ್ನೇ, ಸುರೇಶ ಕುಂಕುವ, ವಸಂತ್ ಕುಮಾರ್,
ಕುದುರೆ ಕೊಂಡ, ಗೋಪಿ ಕುಂಕುವ, ಧರ್ಮ ರಾಜ್, ಗಡೆಕಟ್ಟೆ, ಹಬ್ಬುಸಬ್ ಗಂಗನ ಕೋಟೆ, ಹನುಮoತಪ್ಪ, ಒಡೆಯರ್ ಹತ್ತುರ್, ವಾಸಪ್ಪ ಆರ್ಮಿ,ಹೊನ್ನಾಳಿ, ದಾವಣಗೆರೆ ಯುವ ಮುಂಖಂಡರಾದ ಶರತ್ ಕುಮಾರ್, ಪುರಂದರ ಲೋಕಿಕೆರೆ, ಪ್ರಜಾ ಪ್ರಗತಿ ಚನ್ನವೀರಯ್ಯ, ರಂಗನಾಥ್, ಚನ್ನಗಿರಿ ನೂರಾರು ಕಾರ್ಯಕರ್ತರು ರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!