ಗೆಲುವಿನ ನಂತರ ಜಗಳೂರು ಕ್ಷೇತ್ರದಲ್ಲಿ ಕೈಗಾರಿಕೋದ್ಯಮ ಸ್ಥಾಪನೆಗೆ ಆದ್ಯತೆ:ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ.

ಜಗಳೂರು ಸುದ್ದಿ:ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಡಬಲ್ ಇಂಜಿನ್ ಸರಕಾರದಲ್ಲಿ ಒಂದು ಇಂಜಿನ್ ಕಳಚಿದೆ.ಕ್ಷೇತ್ರದಲ್ಲಿ ಪ್ರಬುದ್ದ ಮತದಾರರು ಕಾಂಗ್ರೆಸ್ ಕೈ ಹಿಡಿದು ಗೆಲ್ಲಿಸಿದರೆ ನಾನು ಕ್ಷೇತ್ರದ ಸಮಸ್ಯೆಗಳ ಧ್ವನಿಯಾಗುವೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಪಟ್ಟಣದ ತರಳಬಾಳು ಭವನದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಧಿಕೃತ ಚುನಾವಣೆ ಪ್ರಚಾರದ ಅಂಗವಾಗಿ ಆಯೋಜಿಸಿದ್ದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು,ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದ ಕಕ್ಕರಗೊಳ್ಳ ಗ್ರಾಮದ ಮಗಳಾಗಿ,ಶಾಮನೂರು ಕುಟುಂಬದ ಸೊಸೆಯಾಗಿ ಕಳೆದ 25 ವರ್ಷಗಳಿಂದ ಜನತೆಯ ನಾಡಿಮಿಡಿತ ಅರ್ಥೈಸಿಕೊಂಡಿದ್ದು.ಕಾಂಗ್ರೆಸ್ ಪಕ್ಷದ ಗೆಲುವಿನ ನಿರೀಕ್ಷೆಯಲ್ಲಿದ್ದು ಗೆಲುವಿನ ನಂತರ ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಮೂರು ಬಾರಿ ಆಗಮಿಸಿರುವೆ ಸ್ಥಳೀಯ ರೈತರ ಸಮಸ್ಯೆ ಮನಗಂಡು ಕನಸಿನ ನೀರಾವರಿ ಯೋಜನೆಗಳಾದ 57ಕೆರೆ ತುಂಬಿಸುವ ಯೋಜನೆ,ಭದ್ರಾಮೇಲ್ದಂಡೆ ಯೋಜನೆ ಸಾಕಾರಕ್ಕೆ ಕೈಜೋಡಿಸುವೆ.ಹಾಗೂ ಉದ್ಯೋಗ ಹರಸಿ ನಗರಪ್ರದೇಶದತ್ತ ಸಾಗುತ್ತಿರುವ ಮಹಿಳೆಯರಿಗೆ ಸ್ಥಳೀಯವಾಗಿ ಗಾರ್ಮೆಂಟ್ಸ್,ಯವಕರಿಗೆ ಕೈಗಾರಿಕೋದ್ಯಮ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಕ್ಯಾನ್ಸರ್,ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್,ಸೇರಿದಂತೆ ಎಸ್ ಎಸ್ ಟ್ರಸ್ಟನಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗುವುದು.ನಮ್ಮ ಮೇಲಿನ ವಿಶ್ವಾಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು.ಮತದಾರರಿಗೆ ಚಿರ ಋಣಿ ಯಾಗಿರುವೆ ಎಂದರು.

ಶಾಸಕ‌ ಬಿ.ದೇವೇಂದ್ರಪ್ಪ ಮಾತನಾಡಿ,57ಕೆರೆ ಏತ ನೀರಾವರಿ ಯೋಜನೆ ಚಾಲನೆಗೆ ಸ್ವಂತ ಖರ್ಚಿನಲ್ಲಿ ಮೋಟಾರ್ ಪೂರೈಕೆಮಾಡಿದ ಹೃದಯ ಶ್ರೀಮಂತಿಕೆ ಅವರದ್ದು.ಶಾಮನೂರು ಕುಟುಂಬದಲ್ಲಿ ರಾಜಕಾರಣಕ್ಕೆ ಬೆನ್ನೆಲುಬಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸಂಸದರನ್ನಾಗಿ ಆಯ್ಕೆಮಾಡಬೇಕಿದೆ‌.ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತೊರೆದು ಹೋದವರು ಇದೀಗ ಮರಳಿ ಪಕ್ಷಕ್ಕೆ‌ ಸೇರ್ಪಡೆಯಾಗಿದ್ದು.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಋಣ ತೀರಿಸಬೇಕಿದೆ ಎಂದು ಕರೆ ನೀಡಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ,ಮಾಜಿ ಸಂಸದ ಹಾಗೂ ಸಚಿವ ಜಿ.ಎಂ.ಸಿದ್ದೇಶ್ವರ್ ಅವರು ದಾವಣಗೆರೆ ಸ್ಮಾರ್ಟ್ ಸಿಟಿ ಹೆಸರಿನಲ್ಲಿ‌ ಕೋಟಿ ಕೋಟಿ ಲೂಟಿ ಹೊಡೆದರು.ಕೇಂದ್ರದ ವಿಮಾನ ಯಾನಖಾತೆ ಸವಿರಾಗಿದ್ದ ವೇಳೆ ಏರ್ ಪೋರ್ಟ್ ಇರಲಿ ಒಂದು ಸುಸಜ್ಜಿತ ರಸ್ತೆ ಕಾಮಗಾರಿ ಕೈಗೊಂಡಿಲ್ಲ.ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರಾಗಿದ್ದ ವೇಳೆ ಕೈಗೊಂಡ ಕುಂದುವಾಡ ಕೆರೆ ನಿರ್ಮಾಣ ಕಾಮಗಾರಿ ವೆಚ್ಚದ ₹3ಕೋಟಿ ಅನುದಾನದಲ್ಲಿ ಅವ್ಯವಹಾರ ನಡೆದಿದೆ.ಇದೀಗ ಬಿಜೆಪಿ ಮನೆಯೊಂದು 6 ಬಾಗಿಲುಗಳಾಗಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಒಗ್ಗಟ್ಟು ಕುಸಿತಗೊಂಡಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ,ದೇಶದಲ್ಲಿ ಲೋಕಸಭಾ ಚುನಾವಣೆ ಧರ್ಮ ಅಧರ್ಮದ ಮಧ್ಯೆ ನಡೆಯುವ ಸಮರವಾಗಿದೆ.ದೇವರು ಧರ್ಮದ ಹೆಸರಿನಲ್ಲಿ,ಹುಸಿ ಭರವಸೆಗಳ ರಾಜಕಾರಣ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ‌ ತಕ್ಕ ಪಾಠ ಕಲಿಸಬೇಕಿದೆ.ಸಂವಿಧಾನದ ಉಳಿವಿಗಾಗಿ,ಸುಭೀಕ್ಷೆಗಾಗಿ ಕಾಂಗ್ರೆಸ್ ಪಕ್ಷ ಅನಿವಾರ್ಯ.ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಗೆಲುವಿಗೆ ಸಂಕಲ್ಪ‌ಅಗತ್ಯ.ಕಾರ್ಯಕರ್ತರು ವೈಮನಸ್ಸು ತೊರೆದು ವಿಧಾನ ಸಭಾ ಕ್ಷೇತ್ರದಿಂದ ಬಹುಮತ ಸಾಬೀತು ಪಡಿಸಿ ಜಿಲ್ಲೆಯನ್ನು ಅಭಿವೃದ್ದಿಗೊಳಿಸಿದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಕೈ ಬಲಪಡಿಸಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ,ಪ್ರಣಾಳಿಕೆಯಂತೆ ರಾಜ್ಯದಲ್ಲಿ ಯಶಸ್ವಿಗೊಳಿಸಿದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮತದಾರರಿಗೆ ಪಕ್ಷದ ಕಾರ್ಯಕರ್ತರು ಮನವರಿಕೆಮಾಡುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು.ಜಗಳೂರಿಗೆ ನೀರು ಹರಿಸದೆ ಚಿತ್ರದುರ್ಗಕ್ಕೆ ನೀರು ಹರಿಸಿದ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಪ್ರಧಾನಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಮಾತನಾಡಿ,ವಿಧಾನ ಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ಪ್ರಣಾಳಿಕೆ ಈಡೇರಿಸಿದ ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರಲ್ಲಿಯೂ ಕಾಂಗ್ರೆಸ್ ಪಕ್ಷದ ಆಡಳಿತ ತರಬೇಕಿದೆ 10 ವರ್ಷಗಳಲ್ಲಿ ಕನಿಷ್ಠ ಪಕ್ಷ ಸೂರು ನೀಡದ ಬಿಜೆಪಿ ಆಡಳಿತಕ್ಕೆ ಅಂತ್ಯಹಾಡಬೇಕಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗಾಣಗಟ್ಟೆ ಮಾಯಮ್ಮದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ನಂತರ ತಾಲೂಕಿನ ಈಶಾನ್ಯ ದಿಕ್ಕಿನ ಚಿಕ್ಕ‌ಉಜ್ಜಿನಿ ಗ್ರಾಮದಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜುನಾಥ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಅರಸೀಕೆರೆ ಕೊಟ್ರೇಶ್,ಶಿವಣ್ಣಗೌಡ,ತಿಪ್ಪೇಸ್ವಾಮಿಗೌಡ,ಬಿ.ಮಹೇಶ್ವರಪ್ಪ,ವೀರಣ್ಣಗೌಡ,ಪಲ್ಲಾಗಟ್ಟೆ ಶೇಖರಪ್ಪ,ನಾಗರತ್ನಮ್ಮ,ಯಶವಂತಗೌಡ,ಸಿ.ತಿಪ್ಪೇಸ್ವಾಮಿ,ಜೀವಣ್ಣ,ಅಂಜಿನಪ್ಪ,ಹರೀಶ್,ಚಂದ್ರಪ್ಪ,ಯುಜಿ ಶಿವಕುಮಾರ್,ಪ್ರಕಾಶ್ ರೆಡ್ಡಿ,ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!