ಜಗಳೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ  ಪ್ರಭಾಮಲ್ಲಿಕಾರ್ಜನ್ ರವರು ರಣ ಬಿಸಿಲಿನಲ್ಲಿಯೆ ಬಿರುಸಿನ ಪ್ರಚಾರ ನಡೆಸಿದರು.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಏಪ್ರಿಲ್ 7 

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಬಿರುಸಿನ ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರಕ್ಕೆ ಅಭ್ಯರ್ಥಿ ಡಾ  ಪ್ರಭಾ ಮಲ್ಲಿಕಾರ್ಜುನ ಶಾಸಕ ಬಿ.ದೇವೇಂದ್ರಪ್ಪ ಕೆಪಿಸಿಸಿ ವಕ್ತಾರ ಅಸಗೋಡು ಜಯಸಿಂಹ ಕಾಂಗ್ರೆಸ್ ಕಾರ್ಯಕರ್ತರು    ಗುರುಸಿದ್ದಪುರ  ಗ್ರಾಮಕ್ಕೆ ಆಗಮಿಸುತಿದ್ದಂತೆ ಗ್ರಾಮಸ್ಥರು  ಅದ್ದೂರಿಯಾಗಿ ಸ್ವಾಗತಿಸಿಕೊಂಡು ಸೇಬೆ ಹಣ್ಣಿನ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ನಂತರ ಪ್ರಚಾರದ ಸಭೆಯನ್ನುದ್ದೆಶಿಸಿ ಅಭ್ಯರ್ಥಿ ಡಾ .ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು ಈ ಹಿಂದೆ ಗ್ರಾಮದ ಶಕ್ತಿ ದೇವತೆ ಮಡ್ರಹಳ್ಳಿ ಚೌಡಮ್ಮ ಜಾತ್ರಾಮಹೋತ್ಸವಕ್ಕೆ ನಾನು ಆಗಮಿಸಿದ್ದು ಇದೀಗ ಎರಡನೇ ಬಾರಿಯಾಗಿ  ತಮ್ಮ ಬಳಿ ಮತಯಾಚನೆ  ಮಾಡಲು ಬಂದಿರುವೆ ಕಾಂಗ್ರೆಸ್ ಪಕ್ಷ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಸಹಾಯಸ್ತ ಚಾಚಿದೆ .ಬರುವ ಲೋಕಸಭಾ ಚುನಾವಣೆ ಮೆ 5 ರಂದು ನಡೆಯಲಿರುವ ಚುನಾವಣೆಯಲ್ಲಿ ನನಗೆ ಮತ ನೀಡಿ ಅಶಿರ್ವಾದಿಸಿ  ಈ ಬಾರಿ  ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ಹಾಕಿ ನನ್ನನ್ನು ಗೆಲಿಸಿದರೆ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಗೆ ಶ್ರಮಿಸುವೆ.ಕ್ಷೇತ್ರದಲ್ಲಿ ಟೆಕ್ಸ್ ಟೈಲ್ ಗಾರ್ಮೆಂಟ್ಸ್ .ಕೈಗಾರಿಕೆ .ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿ ಅಭಿವೃದ್ಧಿಯೆ ನಮ್ಮ ಗುರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ‌ಕಾರ್ಡ್ ವಿತರಿಸಿದಂತೆ ಇದೀಗ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ. ಗೃಹ ಲಕ್ಷ್ಮೀ .ಗೃಹ ಜ್ಯೋತಿ. ‌ ‘ಪಂಚ ಗ್ಯಾರಂಟಿ’ ಯೋಜನೆಗಳು ಬಡವರ್ಗದ ಜನರಿಗೆ ವರದಾನವಾಗಿವೆ.

ಈ ಯೋಜನೆಗಳು  ಉಚಿತ’ ಅಲ್ಲ, ಜನರ ಹಕ್ಕಾಗಿದ್ದು ಜನರ ಹಣವನ್ನು ಪುನಃ ಅವರಿಗೇ ಹಿಂದಿರುಗಿಸುವ ಕೆಲಸವನ್ನು ನಮ್ಮ  ಸರ್ಕಾರ ಮಾಡುತ್ತಿದೆ. ವಿಶೇಷವಾಗಿ ‘ಶಕ್ತಿ’, ‘ಗೃಹಜ್ಯೋತಿ’ ಹಾಗೂ ‘ಗೃಹ ಲಕ್ಷ್ಮೀ’ ಕಾರ್ಯಕ್ರಮಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ.ಈಗಾಗಲೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಪತಿಯವರಾದ ಎಸ್ ಎಸ್ ಮಲ್ಲಿಕಾರ್ಜುನರವರು ಲೋಕಸಭಾ ಚುನಾವಣೆಯಲ್ಲಿ ಸುಮಾರು 5 ಬಾರಿ ಸೋಲು ಅನುಭವಿಸಿದ್ದಾರೆ ಅದ್ದರಿಂದ ಈ ಹಿಂದೆ ಮಾಡಿದ ತಪ್ಪುನ್ನು ಮಾಡಬೇಡಿ ಈಗಾಗಲೇ ನೀವುಗಳು ಅನುಭವಿಸಿರುವ ಯಾತನೆಗಳು ಸಾಕು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತಯಾಚಿಸಿದರು. 

 ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ದಾವಣಗೆರೆ ಶಾಮನೂರು ಕುಟುಂಬದವರು ಎಷ್ಟೆ ಶ್ರೀಮಂತಿಕೆಯಿದ್ದರು ಹೃದಯ ಸ್ವರ್ಶಿ ಜನರ ನಾಡಿಮಿಡಿತಕ್ಕೆ ಸ್ವಂದಿಸಿ ಕೆಲಸ ಮಾಡಲಿದ್ದಾರೆ .ಡಾ. ಪ್ರಭಾ ಮಲ್ಲಿಕಾರ್ಜುನ ಈಗಾಗಲೇ ಎಸ್ ಎಸ್ ಕೆರ್ ಹೆಲ್ತ್ ಸೆಂಟರ್ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳು ಬಡವರಿಗೆ ಸಾರ್ಥಕವಾಗಿವೆ ನಮ್ಮ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ  ಕ್ಷೇತ್ರದಲ್ಲಿ ಅತ್ಯಂತ ಬಹುಮತದಿಂದ  ಆಯ್ಕೆ ಮಾಡಿದರೆ ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಿ ಲೋಕಸಭಾ ಸದಸ್ಯರಿಂದ ಆಗುವಂತ ಕಾರ್ಯಗಳನ್ನು ಚಾಚುತಪ್ಪದೆ  ಕೆಲಸ ಮಾಡುವ ನಾಯಕಿ ನಮ್ಮೊಂದಿಗೆ ಇದ್ದಾರೆ  ಎಂದು ಭರವಸೆ ನೀಡಿದರು

.ಜಗಳೂರು ಬರಪೀಡಿತ ಪ್ರದೇಶಕ್ಕೆ ಬರುವಂತ ಅನುದಾನಗಳನ್ನು ತಂದು ಕ್ಷೇತ್ರದಲ್ಲಿ ಹೊಸ ಪರ್ವ ಸೃಷ್ಠಿಯಾಗಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಪಿ ಸಿ.ಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ ‌ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಷಂಷೀರ್ ಆಹಮದ್.ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು..ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯಾದ್ಯಕ್ಷ ಕೆ.ಪಿ ಪಾಲಯ್ಯ. ರಾಜ್ಯ ಕಾಂಗ್ರೆಸ್ ಎಸ್ ಟಿ ಘಟಕದ ಪ್ರಧಾನಕಾರ್ಯಧರ್ಶಿ .ಕೀರ್ತಿಕುಮಾರ್. ಮಾಜಿ ಸಂಸದರಾದ  ಚನ್ನ ಒಡೆಯರ್ ಪುತ್ರ ಶಿವಕುಮಾರ್ ಒಡೆಯರ್.ಮುಖಂಡ ಕಲ್ಲೇಶರಾಜ್ ಪಟೇಲ್ .ಕಾಂಗ್ರೆಸ್ ಎಸ್ ಸಿ ಘಟಕದ ತಾಲೂಕು ಅದ್ಯಕ್ಷ ಬಿ ಮಹೇಶ್…ಗುತ್ತಿಗೆದಾರರಾದ ಸುದೀರಣ್ಣ.ಸೇರಿದಂತೆ ಗ್ರಾಮದ ಕಾಂಗ್ರೆಸ್ ಮುಖಂಡರುಗಳಾದ ಗೀರೀಶ್.ರಮೇಶ್. ರೇವಣ್ಣ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಮಡ್ರಳ್ಳಿ ಗ್ರಾಮಕ್ಕೆ ಪ್ರಚಾರಕ್ಕೋದ ಅಭ್ಯರ್ಥಿಗಳಿಗೆ  ಚರಂಡಿ ದುರ್ವಾಸನೆ ಮೂಗು ಮುಚ್ಚಿಕೊಂಡು ನಡೆದ ಕಾಂಗ್ರೆಸ್ ಕಾರ್ಯಕರ್ತರು ಚರಂಡಿ ತುಂಬಿ ಘನತ್ಯಾಜ್ಯಗಳಿಂದ ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ  ಸಂಬಂಧಿಸಿದ  ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸಾರ್ವಜನಿಕರು ದೂರಿದರು‌

Leave a Reply

Your email address will not be published. Required fields are marked *

You missed

error: Content is protected !!