Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on April ಏಪ್ರಿಲ್ 8
ಬಂದ್ ಅಂತಿಮವಲ್ಲ ಸಮಗ್ರ ನೀರಾವರಿಗಾಗಿ ಹೋರಾಟ ನಿರಂತರ ಸಮಿತಿ ವತಿಯಿಂದ ಏ.13 ರಂದು ಸ್ವಯಂಘೋಷಿತ ಬಂದ್ ಗೆ ಕರೆ ನೀಡಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿ ಕಾರ್ಯಧರ್ಶಿ ವಕೀಲ ಆರ್ ಒಬಳೇಶ್ ತಿಳಿಸಿದ್ದಾರೆ.
ಜಗಳೂರು ಪಟ್ಟಣದ ಹಳೆ ಕ್ಲಬ್ ನಲ್ಲಿ ಭದ್ರಾಮೇಲ್ದಂಡೆ ಹೋರಾಟ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂದ್ ಗೆ ಸಂಬಂಧಿಸಿದಂತ ಭಿತ್ತಿಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮೂಲಭೂತವಾದ ಹಕ್ಕಾದ ನಮ್ಮ ಹಿಂದೂಳಿದ ಪ್ರದೇಶಕ್ಕೆ ಸಮಗ್ರ ನೀರಾವರಿ ಸೌಲಭ್ಯವನ್ನ ಪಡೆಯಲು ಆಳುವ ಸರ್ಕಾರಗಳ ಗಮನ ಸೆಳೆಯಲು ಹೋರಾಟ ಅನಿವಾರ್ಯ. ಈ ಹಿಂದೆ ನಮ್ಮ ಸಮಿತಿ ವತಿಯಿಂದ ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪ್ರಬಲವಾದ ನೀರಾವರಿ ಹೋರಾಟಕ್ಕೆ ಮುಂದಾದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಪ್ರಗತಿಪರ ವಿವಿಧ ಸಂಘಟನೆಗಳು ಸಾಮಾನ್ಯ ರೈತರು ಕೈಜೋಡಿಸಿದರ ಪ್ರತಿಫಲವಾಗಿ ಅಂದಿನ ಸರ್ಕಾರ 2.4 ಟಿ .ಎಂ ಸಿ ನೀರು ಲಭ್ಯತೆ ಮೇರೆಗೆ ಕಾಯ್ದಿರಿಸಿ ಕಾಮಗಾರಿ ಪ್ರಗತಿಯಲ್ಲಿದೆ ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು.ಇದುವರೆಗೂ ಯಾವ ಅಧಿಕಾರಿಯು ಕಾಮಗಾರಿ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಸಮಗ್ರ ನೀರಾವರಿ ಅನುಷ್ಠಾನಕ್ಕಾಗಿ ಆಳುವ ವರ್ಗದ ಸರ್ಕಾರಗಳ ಗಮನ ಸೆಳೆಯಲು ಜಗಳೂರು ತಾಲೂಕಿನ ಪ್ರತಿ ನಾಗರೀಕರ ಸ್ವಘೋಷಿತ ಬಂದ್ ಗೆ ಕರೆ ನೀಡಲಾಗಿದೆ .ಎಂದು ತಿಳಿಸಿದರು.57 ಕೆರೆ ತುಂಬಿಸುವ ಯೋಜನೆಯಡಿ ನೀರು ತಾಲೂಕಿನ ಯಾವ ಕೆರೆಗೂ ಸರಿಯಾದ ರೀತಿ ತುಂಬಿಸಿಲ್ಲ .ಇಂತಹ ಮಹತ್ವದ ಯೋಜನೆಗಳ ಕಾಮಗಾರಿ ಪೂರ್ಣಗೊಳ್ಳದೆ ಕುಂಟುತಾ ಸಾಗಿದೆ ಎಂದರು.
ನೀರಾವರಿ ಹೋರಾಟ ಸಮಿತಿ ವಕ್ತಾರ ಯಾದವರೆಡ್ಡಿ ಮಾತನಾಡಿ ಬಯಲು ನಾಡಿಗೆ ನೀರಾವರಿ ಕಲ್ಪಿಸುವಂತೆ ಅಂದಿನ ಮಾಜಿ ಮುಖ್ಯಮಂತ್ರಿ ದಿ.ನಿಜಲಿಂಗಪ್ಪ ವರದಿ ಆಧಾರಿತವಾಗಿ ಕೇಂದ್ರ ಜಲಮಂಡಳಿಯಲ್ಲಿ ದಾಖಲಾಗಿರುವಂತೆ ಕಳೆದ ಹೋರಾಟ ಸಮಿತಿ ಒತ್ತಡ ಮೇರೆಗೆ ಮಣಿದ ಸರ್ಕಾರಗಳು ಕರ್ನಾಟಕಕ್ಕೆ 19 ಸಾವಿರ ಕೋಟಿ ಬಜೆಟ್ ಘೋಷಣೆ ಮಾಡಿತು ಆದರೆ ಇದುವರೆಗೂ ನೀರಾವರಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡದೇ ಕಣ್ಣ ಮುಚ್ಚಾಲೆ ಆಟದಂತಾಗಿ ನಮ್ಮನ್ನ ಆಳಿದ ಸರ್ಕಾರಗಳು ಮೂಗಿಗೆ ತುಪ್ಪ ಹಚ್ಚುವಂತ ಕೆಲಸ ಮಾಡಿವೆ.
ಕಳೆದ ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ 5000 ಕೊಟಿ ಅನುದಾನ ಬಜೆಟ್ ಮಂಡನೆಯಾಗಿದೆ ಎಂದು ಹೇಳಿ ಸಂಭ್ರಮಿಸಿ ಪಟಾಕಿ ಸಿಡಿಸಿ ಪ್ರಚಾರ ಗಿಟ್ಟಿಸಿಕೊಂಡರು ಆದರೆ ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ ಬಜೆಟ್ ಘೋಷಣೆ ಮಾಡಿ ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಅನುದಾನ ನೀಡಿರುವುದಿಲ್ಲ ಎಂದು ಆರೋಪಿಸಿದರು. ಅಂದಿನ ನಮ್ಮ ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರರವರು ಕೂಡ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಿದೆ ಎಂದು ಸಭೆ ಸಮಾರಂಭಗಳಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದರು .ಆದರೆ ಆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಸಾದ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸಿನಿಮಾ ಶೈಲಿಯಲ್ಲಿ ಹೇಳಿಕೆ ನೀಡಿ ಯಾವುದೇ ಅಪ್ಪರ್ ಭದ್ರಾ ನೀರಾವರಿಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಚಿತ್ರದುರ್ಗ ಶಾಖಾ ಕಾಲುವೆಗೆ ನಡೆಯುವ ಕಾಮಗಾರಿಗೆ ರಾಜ್ಯ ಸರ್ಕಾರ ಈಗಾಗಲೇ 8 ಸಾವಿರ ಕೋಟಿ ಹಣ ಕೊಟ್ಟಿದೆ 7 ಸಾವಿರ ಕೋಟಿ ಹಣ ಈಗಾಗಲೇ ನಡೆಯುವ ಕಾಮಗಾರಿಗೆ ಖರ್ಚಾಗಿದ್ದು
ಇನ್ನು ಬಾಕಿ 15 ಸಾವಿರ ಕೋಟಿ ಅನುದಾನ ಬೇಕಾಗಿದೆ ಎಂದು ಅಂಕಿ ಅಂಶಸಮೇತ ತಿಳಿಸಿದರು ಒಟ್ಟು 1200 ಕೋಟಿ ಘೋಷಣೆ ಮಾಡಿದೆ ಆದರೆ ಕೇಂದ್ರದ ಪಾಲುದಾರಿಕೆಯಿಲ್ಲ ಕೇವಲ ಘೋಷಣೆ ಎಂದು ಆರೋಪಿಸಿದರು.
ಹಿರಿಯ ಪತ್ರಕರ್ತ ಹೋರಾಟಗಾರ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ ತಾಲ್ಲೂಕಿನ ನೆಲಮೂಲದ ಜ್ವಲಂತ ಸಮಸ್ಯೆಗಳಿಗೆ ಹೋರಾಟಗಳೆ ಪರಿಹಾರ ಹೋರಾಟಗಳನ್ನು ಸಾಂಸ್ಕೃತಿಕವಾಗಿ ತೆಗೆದುಕೊಂಡು ಹೋಗುವ ಮೂಲಕ ಚಳುವಳಿಗಳನ್ನು ನಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟವನ್ನ ತೀರ್ವತರಗೋಳಿಸಿ ರಾಜ್ಯಧಾನಿಯಲ್ಲಿ ಜಗಳೂರಿನ ನೀರಾವರಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಲು ಹೋರಾಟ ರೂಪಿಸುವಂತೆ ಸಲಹೇ ನೀಡಿದರು ಈ ಒಂದು ಬಂದ್ ಯಶಸ್ವಿಗಾಗಿ ವಿವಿಧ ಬಾಗದಿಂದ ರೈತರು ಆಗಮಿಸುವರು ಹಿಪ್ಟಾ ಕಲಾವಿದರಿಂದ ಹೋರಾಟಗೀತೆಗಳ ಮೂಲಕ ಬೆಂಬಲಿಸುವರು ಎಂದು ತಿಳಿಸಿದರು.
ಹಿರಿಯ ಮುಖಂಡ ವಾಲಿಬಾಲ್ ತಿಮ್ಮಾರೆಡ್ಡಿ ಮಾತನಾಡಿ ದಿನಾಂಕ 13 ರಂದು ನಡೆಯುವ .ಜಗಳೂರು ಸ್ವಯಂಘೋಷಿತ ಬಂದ್ ಗೆ ತಾಲ್ಲೂಕಿನ ಸಮಸ್ತ ನಾಗರೀಕರು ಕೂಡ ಸಹಕರಿಸುವಂತೆ ಮನವಿ ಮಾಡಿದರು.
ಸಂದರ್ಭದಲ್ಲಿ ಮುಖಂಡರಾದ ನಾಗೇಂದ್ರರೆಡ್ಡಿ. ಹಿರಿಯ ಸಾಹಿತಿ ಸಂಗೇನಹಳ್ಳಿ ಅಶೋಕ ಕುಮಾರ್ ಎ.ಡಿ.ನಾಗಲಿಂಗಪ್ಪ,ಅನ್ವರ್ ಸಾಹೇಬ್,ಸತ್ಯಮೂರ್ತಿ,,ವಕೀಲರಾದ ಸಣ್ಣ ಓಬಯ್ಯ,ಬೋಸಣ್ಣ ಗೌಡಿಕಟ್ಟೆ.. ಮುಖಂಡರಾದ ಸೂರಲಿಂಗಪ್ಪ,ಇಂದಿರಾ,ಎನ್ ಎಸ್ ರಾಜು,ಅನಂತರಾಜ್,ಮಹಾಲಿಂಗಪ್ಪ,ರೇಖಾ,ನೂರುದ್ದೀನ್,ಸೇರಿದಂತೆ ಇದ್ದರು.
ಏ.13 ರ ಸ್ವಯಂಪ್ರೇರಿತ ಶಾಂತಿಯುತ ಬಂದ್ ನ ಭಿತ್ತಿಚಿತ್ರ ಬಿಡುಗಡೆಗೋಳಿಸಿದರು.