Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಏಪ್ರಿಲ್ 14
ಸಮಗ್ರ ನೀರಾವರಿ ಯೋಜನೆಗೆ:ಜಗಳೂರು ಬಂದ್ ಯಶಸ್ವಿ ಹೋರಾಟದ ಬಿಸಿಗೆ ವರುಣನ ಕೃಪೆ
ಜಗಳೂರು ಸುದ್ದಿ:ಭದ್ರಾಮೇಲ್ದಂಡೆ ಯೋಜನೆ ಶೀಘ್ರ ಜಾರಿಗಾಗಿ ಸ್ವಯಂಪ್ರೇರಿತ ಶಾಂತಿಯುತ ಬಂದ್ ಯಶಸ್ವಿಯಾಯಿತು.
ಪಟ್ಟಣದಲ್ಲಿ ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೂ ಅಂಗಡಿ,ಮುಗ್ಗಂಟು,ಸಂತೆ,ಬಸ್ ಸಂಚಾರ,ಸಂಪೂರ್ಣ ಸ್ಥಗಿತವಾಗಿತ್ತು.ವರ್ತಕರು ವ್ಯಾಪಾರಿಗಳು,ಸಾರ್ವಜನಿಕರು ಸಂಪೂರ್ಣ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಪಟ್ಟಣ ವಾಹನ,ಜನದಟ್ಟಣೆಯಿಲ್ಲದೆ ಬಿಕೋ ಎನ್ನುತ್ತಿತ್ತು.ಕೇವಲ ಅಗತ್ಯ ವಸ್ತುಗಳಾದ ಮೆಡಿಕಲ್ ಸ್ಟೋರ್,ಆಸ್ಪತ್ರೆ,ಹಾಲು,ಪತ್ರಿಕೆ ವಹಿವಾಟು,ಮಾತ್ರ ನಡೆದವು.
ವಿವಿಧ ಸಂಘಟನೆ ಮುಖಂಡರುಗಳು ಬೆಳಿಗ್ಗೆಯಿಂದ ಬಂದ್ ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಜೆ 5 ಗಂಟೆಗೆ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿಯೊಂದಿಗೆ ಬಹಿರಂಗ ಸಭೆ ನಡೆಸಿ ಬಂದ್ ಯಶಸ್ವಿಗೊಳಿಸಿದರು.ಹೋರಾಟದ ಬಿಸಿಗೆ ವರುಣ ದಯಪಾಲಿಸಿ ಕೆಲಹೊತ್ತು ಹೋರಾಟಗಾರರು ಕ್ಷೇತ್ರದ ಶಾಸಕರು ಮಳೆಯಲ್ಲಿಯೆ ನಿಂತು ಭದ್ರಾ ನೀರಾವರಿ ಕುರಿತು ಅಧಿಕಾರಿಗಳ ಜೊತೆ ಹಾಗೂ ಹೋರಾಟಗಾರದ ಜೊತೆ ಮಾತನಾಡಿ ಹೊರಾಟದ ಕಾವು ಮತ್ತೂಷ್ಟು ಮುಂದುವರೆದ ಪ್ರಸಂಗ ಜರುಗಿತು.
ಭದ್ರಾಮೇಲ್ದಂಡೆ ಹೋರಾಟ ಸಮಿತಿ ಮುಖಂಡ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿದರು,ಲೋಕಸಭಾ ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಜಗಳೂರು ಬಂದ್ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗೆ ಚಳ್ಳಕೆರೆ,ಚಿತ್ರದುರ್ಗ,ಹೊಳಲ್ಕೆರೆ ನೀರಾವರಿ ಹೋರಾಟ ನಿದರ್ಶನವಾಗಿವೆ.ನೀರಿಗಾಗಿ ಹೋರಾಟ ಚುನಾವಣೆ ಅಡ್ಡಿಯಾಗುವುದಿಲ್ಲ.ದೊಣೆಹಳ್ಳಿ ದಾಸೋಹ ಉತ್ಸವದಲ್ಲಿ ರೈತ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ಇಂದಿನ ಬಂದ್ ಯಶಸ್ವಿಯಾಗಿದೆ.57ಕೆರೆ ತುಂಬಿಸುವ ಯೋಜನೆ ಹಾಗೂ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ ಎಂಬುದು ರೈತರ ಆಕ್ರೋಶವಿದೆ.ಮಾಜಿ ಶಾಸಕರು ತಮ್ಮ ಮಿತಿಯಲ್ಲಿ ನೀರಾವರಿ ಯೋಜನೆ ಸಾಕಾರಕ್ಕೆ ಪ್ರಯತ್ನ ಮಾಡಿದ್ದಾರೆ.ಹಾಲಿ ಶಾಸಕರು ಕಾಳಜಿ ವಹಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕಿದೆ.ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರನ್ನು ಸಂಘಟಿಸಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಶಾಸಕರು ಭೇಟಿ ಭರವಸೆ:ಶಾಸಕ ಬಿ.ದೇವೇಂದ್ರಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು,ನಾನು ಶಾಸಕನಾಗಿ ಆಯ್ಕೆಯಾದ ನಂತರ ಮೊದಲನೇ ಅಧಿವೇಶನದಲ್ಲಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಬಗ್ಗೆ ಧ್ವನಿ ಎತ್ತಿದ ಪರಿಣಾಮ ಶೇ.85 ರಷ್ಟು ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ.ಮುಂದಿನ ಒಂದು ತಿಂಗಳಲ್ಲಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡು ಶೀಘ್ರದಲ್ಲಿ 11 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಜಲನಿಗಮದಿಂದ ರಾಷ್ಟ್ರೀಯ ಯೋಜನೆಗೊಂಡಿರುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದು ಕೇಂದ್ರ ಸರಕಾರಕ್ಕೆ ಸರ್ವಪಕ್ಷಗಳ ನಿಯೋಗ ತೆರಳಲಾಗುವುದು.ಸಂಗೇನಹಳ್ಳಿ ಮಾರ್ಗವಾಗಿ 11 ಕಿ.ಮೀ ದೂರದ ಪೈಪ್ ಲೈನ್ ನೊಂದಿಗೆ ಭದ್ರಾನೀರು ಹರಿಸಲಾಗುತ್ತದೆ ಎಂಬ ಮಾಹಿತಿಯನ್ನು ಇಂಜಿನಿಯರ್ ನೀಡಿದ್ದಾರೆ.ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗೆ ರಾಜ್ಯ ಸರಕಾರದಿಂದ ₹130 ಕೋಟಿ ಹಣ ಬಿಡುಗಡೆಯಾಗಿದೆ.ಉಳಿದ ಕಾಮಗಾರಿಗೆ ಅಗತ್ಯ ವಿರುವ ₹200 ಕೋಟಿ ಅನುದಾನ ಬಿಡುಗಡೆಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಬಳಿ,ಹೋರಾಟ ಸಮಿತಿ,ಜೂನ್ ನಂತರ ಸರ್ವಪಕ್ಷಗಳ ನಿಯೋಗ ಹೊಗೋಣ ಎಂದು ಭರವಸೆ ನೀಡಿದರು.
ಸಂದರ್ಭದಲ್ಲಿ ಹೊರಾಟ ಸಮಿತಿಯ ಕಾರ್ಯದರ್ಶಿ ವಕೀಲ ಆರ್.ಓಬಳೇಶ್,ಡಾ.ಅಶೋಕಕುಮಾರ್ ಸಂಗೇನಹಳ್ಳಿ,ಯಾದವರೆಡ್ಡಿ,ಎ.ಡಿ.ನಾಗಲಿಂಗಪ್ಪ,ಆವರಗೆರೆ ರುದ್ರಮುನಿ,ಪ್ರಗತಿಪರ ಸಂಘಟನೆಗಳ ಮುಖಂಡರುಗಳಾದ ಮರೇನಹಳ್ಳಿ ವಕೀಲ ಬಸವರಾಜ್,ಸಣ್ಣ ಓಬಯ್ಯ,ಮಹಾಲಿಂಗಪ್ಪ,ಓಬಣ್ಣ,ಸತೀಶ್ ಮಲೆಮಾಚಿಕೆರೆ,ರಾಜಪ್ಪ ವ್ಯಾಸಗೊಂಡನಹಳ್ಳಿ,ಧನ್ಯಕುಮಾರ್ ಎಚ್.ಎಂ.ಹೊಳೆ,ಮಾದಿಹಳ್ಳಿ ಮಂಜುನಾಥ್,ಅನಂತರಾಜ್,ಮೈಲೇಶ್,ಹೇಮಾರೆಡ್ಡಿ,ನಿಂಗಪ್ಪ,ಇಂದಿರಾ,ಕರವೇ ಸಂಘಟನೆಯ ಮಹಾಂತೇಶ್,ಲಿಂಗರಾಜ್,ರೇಖಾ,ಭರಮಸಮುದ್ರ ಕುಮಾರ್,ರೈತ ಸಂಘಟನೆಯ ಮುಖಂಡರಾದ. ಸಿ.ಎಂ.ಹೊಳೆ ಚಿರಂಜೀವಿ,ರುದ್ರಮುನಿ,ಐರಣಿ ಚಂದ್ರುರಾಜು ರಾಜನಹಟ್ಟಿ,ಲಕ್ಷ್ಮಣ,ರೈತ ಸಂಘದ ಉಜ್ಜಿನಗೌಡ,ಸತ್ಯಮೂರ್ತಿ,,ಲುಕ್ಮಾನ್ ಖಾನ್.ಮಂಜಣ್ಣ.ಹೊನ್ನಹಳ್ಳಿ ರಮೇಶ್,ರೈತ ಮಹಿಳಾ ಹೋರಾಟಗಾರರಾದ ಪದ್ಮ. ಸುಧಾ, ಗೀತಮ್ಮ.ಅನಿತಾ. ಚೌಡಮ್ಮ.ಇಂದ್ರಮ್ಮ, ಸೇರಿದಂತೆ ಮುಂತಾದವರು ಹಾಜರಿದ್ದರು.