Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಏಪ್ರಿಲ್ 22
ನೇಹಾ ಹತ್ಯೆಗೈದ ಫಯಾಜ್ ಗೆ ಗಲ್ಲುಶಿಕ್ಷೆಗೆ ಮುಸ್ಲಿಂ ಸಮಾಜ ಆಗ್ರಹ.
ಜಗಳೂರು ಸುದ್ದಿ
ಇತ್ತಿಚಿಗೆ ಹುಬ್ಬಳ್ಳಿ ನಗರದಲ್ಲಿ ನಡೆದ ಅವಮಾನವೀಯ ಘಟನೆ ಸಹಿಸಲಾರದ ಕೃತ್ಯ ಈ ಕೊಲೆ ಮಾಡಿದ ಆರೋಪಿಯನ್ನ ಗಡಿಪಾರು ಮಾಡಬೇಕು
ವಿದ್ಯಾರ್ಥಿನಿ ನೇಹಾ ಹಿರೇಮಠರವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಫಯಾಜ್ ಗೆ ಶೀಘ್ರವೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ತಾಲೂಕು ಮುಸ್ಲಿಂ ಸಮಾಜದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದೇಶ ಮತ್ತು ರಾಜ್ಯದ ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಚಾರ. ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ.. ಕೊಲೆ ಮಾಡುವಂತ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ನಮ್ಮನ್ನಾಳುವ ಸರ್ಕಾರಗಳು ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ.ಈ ಆಧುನಿಕ ಕಾಲಘಟ್ಟದಲ್ಲಿ ಇಂತ ಕೃತ್ಯಗಳು ಮರುಕಳಿಸದಂತೆ ನಿಗಾವಹಿಸಬೇಕೆಂದರು.
ಜಗಳೂರು ಪಟ್ಟಣದಲ್ಲಿ ಸಂಜೆ ಅಂಬೇಡ್ಕರ್ ವೃತ್ತದಿಂದ ಹೊಸಬಸ್ ನಿಲ್ದಾಣ,ಮಹಾತ್ಮಗಾಂಧಿ ವೃತ್ತದವರೆಗೆ ತೆರಳಿ ಕೊಲೆಗಾರ ಫಯಾಜ್ ವಿರುದ್ದ ಘೋಷಣೆಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸಮಾಜದ ಮುಖಂಡ ಬರ್ಕತ್ ಅಲಿ ಮಾತನಾಡಿ,ಬಿವಿಬಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ನೇಹಾ ಹಿರೇಮಠ ಹೊರಗಡೆ ಬರುತ್ತಿದ್ದಂತೆ ಚಾಕುವಿನಿಂದ ಹಿರಿದು ಬರ್ಬರ ಹತ್ಯೆಗೈದಿರುವುದು ನಾಗರೀಕ ಸಮಾಜದಲ್ಲಿ ತಲೆತಗ್ಗಿಸುವಂತ ಹ್ಯೆಯ್ಯ ಕೃತ್ಯ ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆಯಿಲ್ಲದಂತಾಗಿದೆ.ನೇಹಾ ಸಾವಿಗೆ ನ್ಯಾಯ ಬೇಕು, ನಾಡಿನ ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕು ಎಂದು ಆಗ್ರಹಿಸಿದರು.
ಸಂದರ್ಭದಲ್ಲಿ ಗೋಪುಗೊಂಡನಹಳ್ಳಿ. ಮುಸ್ತಪ್ ಬರಕತ್ ಆಲಿ. ದೋಣಿಹಳ್ಳಿ ಮಾಜಿ ಉಪಾಧ್ಯಕ್ಷ ನಜೀರ್ ಆಹಮದ್ .ಮಹಾಲಿಂಗಪ್ಪ. ,ಸತೀಶ್ ಮಲೆಮಾಚಿಕೆರೆ,ನೂರುಲ್ಲ,ನಜೀರ್ ಅಹಮ್ಮದ್,ಜಮೀಲ್,ಇದಾಯತ್,ಶಾರುಕ್,ಗೋಗುದ್ದು ಅನ್ವರ್,ಗೌಸ್ ಪೀರ್,ಸೇರಿದಂತೆ ಭಾಗವಹಿಸಿದ್ದರು.