ಸರಕಾರಿ ನೌಕರರ ಹಕ್ಕುಗಳಿಗೆ ಸಂಘಟಿತ ಹೊರಾಟ ಅನಿವಾರ್ಯವಾಗಿದೆ ಎಂದು :ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಗಳೂರು ಸುದ್ದಿ:ಸರಕಾರಿ ನೌಕರರ ನ್ಯಾಯಯುತ ಹಕ್ಕುಗಳಿಗಾಗಿ
ಸಂಘಟನೆಯನ್ನು ಬೆಂಬಲಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಪಟ್ಟಣದ ತರಳಬಾಳು ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ವಾಣಿಜ್ಯಮಳಿಗೆಗಳ ಶಂಕುಸ್ಥಾಪನೆ,ವಿಚಾರ ಸಂಕಿರಣ,ಹಾಗೂ ಮಹಿಳಾ ದಿನಾಚರಣೆ,ಸೇವಾರತ್ನ ಪುರಸ್ಕಾರ ಪ್ರಧಾನ,ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ದಶಕಗಳಿಂದ ಅನೇಕ ಬಾರಿ ಮುಷ್ಕರ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.ನನ್ನ ಅಧ್ಯಕ್ಷತೆಯ ನಂತರ ರಾಜ್ಯವ್ಯಾಪಿ ಸಂಚರಿಸಿ ಸರಕಾರಿ ನೌಕರರ ಸಮಸ್ಯೆಗಳಿಗೆ ಸ್ವಂದಿಸಿ ನಮ್ಮ ಹಕ್ಕುಗಳನ್ನು ಪಡೆಯಲು ಮುಷ್ಕರಕ್ಕೆ ಕರೆ ನೀಡಿದ್ದಕ್ಕೆ.ಸಂಘಟನೆ ಶಕ್ತಿಗೆ ಸ್ಪಂದಿಸಿದ
ಆಡಳಿತ ಸರಕಾರ 22 ಆದೇಶಗಳನ್ನು ಹೊರಡಿಸಿದೆ.7 ನೇ ವೇತನ ಪರಿಷ್ಕರಣೆ ಬೇಡಿಕೆಗೆ ಶೇ.17 ರಷ್ಟು ಮಧ್ಯಂತರ ವೇತನ ಜಾರಿಗೊಳಿಸಿದೆ.ಏಪ್ರಿಲ್ 23 ರ ವೇಳೆಗೆ ಶೇ.40 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಎನ್ ಪಿ ಎಸ್ ರದ್ದತಿಗೂ ಶಿಫಾರಸ್ಸುಮಾಡಿದೆ.ಇದು ನಮ್ಮ ಹೋರಾಟ ಪ್ರತಿಫಲ ಎಂದರು . ಮುಖ್ಯಮಂತ್ರಿಗಳಿಗೆ ಆತ್ಮೀಯನಾಗಿರುವೆ ಯಾವುದೇ ಒಪ್ಪಂದರಹಿತ ದಿಟ್ಟ ಹೊರಾಟ ಹೆಜ್ಜೆ ತುಳಿಯಲು ಸಿದ್ದ ನನ್ನದು ನಾನು ಸಂಘಟನೆಗೆ ವೈಯಕ್ತಿಕ ವೃತ್ತಿ ಕಳೆದಕೊಳ್ಳಲು ಸಿದ್ದನಾಗಿರುವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸಂಘಟನೆಯ ನಿರಂತರ ಒತ್ತಡಕ್ಕೆ ಮಣಿದು ಸರಕಾರ ₹1500 ಕೋಟಿ ವೆಚ್ಚದಲ್ಲಿ ಸರಕಾರಿ ನೌಕರರ 30 ಲಕ್ಷ ಕುಟುಂಬಗಳಿಗೆ ನಗದುರಹಿತ ಸ್ಮಾರ್ಟ್ ಕಾರ್ಡ್ ವಿತರಿಸಿ,ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ.ಅಲ್ಲದೆ ಕೆಜಿಇಡಿ ಸಾಲದ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮಾಮಾಡುತ್ತಿದೆ.ಮಹಿಳಾ ನೌಕರರಿಗೆ 6ತಿಂಗಳು ವೇತನ ಸಹಿತ ಶಿಶುಪಾಲನಾ ರಜೆ ಘೋಷಿಸಿದೆ ಮುಂದಿನ ದಿನಗಳಲ್ಲಿ ಮರಣ ಹೊಂದಿದ ನೌಕರನ ಶವಸಂಸ್ಕಾರಕ್ಕೆ ಒಂದು ಕೋಟಿ ಪರಿಹಾರಕ್ಕೆ ಆಗ್ರಹಿಸಲಾಗುವುದು‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರಕಾರಿ ನೌಕರನಿಗೆ ಪವಿತ್ರ ವೃತ್ತಿ ಗೌರವಿದೆ:ಸಮಾಜದಲ್ಲಿ ಸರಕಾರಿ ನೌಕರನ ವೃತ್ತಿಗೆ ಪವಿತ್ರವಾದ ಗೌರವವಿದೆ.ಕೋವಿಡ್ ನ ಲಾಕ್ ಡೌನ್ ಸಂಕಷ್ಟ ವೇಳೆ‌ ಸರಕಾರಿ ನೌಕರರು ಮನೆಯಲ್ಲಿದ್ದರೂ ವೇತನ ಪಾವತಿಸಿದೆ.ಆದ್ದರಿಂದ ತಾವುಗಳು ಆತ್ಮಸಾಕ್ಷಿಯಿಂದ ದಿನದ 24 ಗಂಟೆಗಳ ಕಾಲ ಕಾಯಕದಲ್ಲಿ ತೊಡಗಿ ತಮ್ಮ ಜವಾಬ್ದಾರಿ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.

ಸರಕಾರಿ ನೌಕರರ ದೇಣಿಗೆ ಅಪಾರ:ನೆರೆ ಸಂತ್ರಸ್ಥರಿಗೆ,ಕೋವಿಡ್ ಸಂದರ್ಭದಲ್ಲಿ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಹಾಗೂ ಗೋಶಾಲೆಗಳಲ್ಲಿ ಅಶಕ್ತ ಹಸುಗಳ ಪೋಷಣೆಗೆ ಸರಕಾರ ಜಾರಿಗೊಳಿಸಿದ ಪುಣ್ಯಕೋಟಿ ಯೋಜನೆಗೆ ₹40 ಲಕ್ಷ ದೇಣಿಗೆ‌ ನೀಡಿದ್ದು.ಸರಕಾರಿ ನೌಕರರ ದೇಣಿಗೆ ಕಂಡು ಸರಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಸರಕಾರಿ ನೌಕರರು ಆಡಳಿತ ವ್ಯವಸ್ಥೆಗೆಬೆನ್ನೆಲುಬಾಗಿದ್ದು.ರಾಜ್ಯಾಧ್ಯಕ್ಷ ಷಡಕ್ಷರಿ ನೇತೃತ್ವದಲ್ಲಿ ಇಲಾಖೆಗಳ ಅಭಿವೃದ್ದಿ ಕೆಲಸಗಳಿಗೆ ಕುಂಠಿತವಾಗದಂತೆ ಆರೋಗ್ಯಕರವಾಗಿ ಹೊರಾಟ ನಡೆಸಿರುವುದು ಶ್ಲಾಘನೀಯ ಎಂದು ಶ್ಲಾಘಿಸಿದರು.

ಸರಕಾರಿ ನೌಕರರ ಶ್ರೇಯೊಭಿವೃದ್ದಿಗೆ ಬದ್ದ:ಪಟ್ಟಣದಲ್ಲಿ ₹10 ಲಕ್ಷ ವೆಚ್ಚದ ವಾಣಿಜ್ಯ ಮಳಿಗೆಗೆಳ ಕಟ್ಟಡಕ್ಕೆ ಅನುದಾನ ಒದಗಿಸಿದ್ದು.ಅಲ್ಲದೆ ಲೊಕೋಪಯೋಗಿ ಇಲಾಖೆಯಡಿ ₹5 ಕೋಟಿ ವೆಚ್ಚದ ಸರಕಾರಿ ನೌಕರರ ಭವನ ನಿರ್ಮಾಣಕ್ಕೆ ಪ್ರಸ್ತಾವನೆ‌ ಸಲ್ಲಿಸಲಾಗಿದೆ.ಮೂರು ಬಾರಿ ಶಾಸಕನನ್ನಾಗಿಸಲು ಸಹಕರಿಸಿದ ತಮಗೆ ಚಿರ ಋಣಿಯಾಗಿರುವೆ,ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವಾದಿಸಬೇಕು.ನಾನೊಬ್ಬ ಶಾಸಕನಾಗಿ ಸರಕಾರಿ ವೇತ‌ನ ಪಡೆಯುವ ನೌಕರನಾಗಿರುವೆ.ತಾಲೂಕಿನ ಸರಕಾರಿ ನೌಕರರ ಶ್ರೇಯೊಭಿವೃದ್ದಿಗೆ ಸದಾ ಬದ್ದನಾಗಿರುವೆ ಎಂದು ಭರವಸೆ ನೀಡಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ,
ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ,ಉಪಾಧ್ಯಕ್ಷಎಸ್.ಬಸವರಾಜ್,ಮಾತನಾಡಿದರು.

ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್ ಚಂದ್ರಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವಿವಿಧ ಇಲಾಖೆಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಲಯ ಬಿಇಓ ದಾರುಕೇಶ್, ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್,ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್,ಶಿವಮೊಗ್ಗ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ,ಲೊಕೋಪಯೋಗಿ ಎಇಇ ರುದ್ರಪ್ಪ,ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ನಾಡಿಗರ್, ರವಿಕುಮಾರ್,ಕುಮಾರ್,ಶಶಿಧರ್,ತಿಪ್ಪೇಸ್ವಾಮಿ,ಗುರುಮೂರ್ತಿ,ದ್ವಾರಕೇಶ್,ಡಿಡಿ ಹಾಲಪ್ಪ,ತಿಪ್ಪೇಸ್ವಾಮಿ,ನಿವೃತ್ತ ನೌಕರರ ಸಂಘದ ಪಾಲಯ್ಯ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ,ರುದ್ರೇಶ್,ತಿಪ್ಪೇಸ್ವಾಮಿ,ಸತೀಶ್,ರುದ್ರೇಶ್,ಹನುಮಂತೇಶ್,
ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!