ಮತಯಂತ್ರಗಳೊಂದಿಗೆ ಮತಗಟ್ಟೆಗಳತ್ತ ತೆರಳಿದ ಚುನಾವಣೆ ಸಿಬ್ಬಂದಿ

ಜಗಳೂರು ಸುದ್ದಿ:ಪಟ್ಟಣದ ಸರ್ಕಾರಿ ಪದವಿಪೂರ್ವಕಾಲೇಜಿನಿಂದ ಇವಿಎಂ ಮತಯಂತ್ರಗಳೊಂದಿಗೆ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ವಿಶೇಷವಾಹನಗಳಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ತೆರಳಿದರು.

ಜಗಳೂರು ತಾಲೂಕಿನಲ್ಲಿ 205,ವಿಧಾನ ಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ 58,ಸೇರಿದಂತೆ ಒಟ್ಟು 263 ಮತಗಟ್ಟೆಗಳಿದ್ದು.5 ಸಖಿ,1ವಿಶೇಷ ಚೇತನರ ನಿರ್ವಹಣೆ,1ಧ್ಯೇಯ ಆಧಾರಿತ,1ಯುವಜನ ನಿರ್ವಹಣೆ,1 ಸಾಂಪ್ರದಾಯಿಕ ಮತಗಟ್ಟೆ ಸೇರಿದಂತೆ ಒಟ್ಟು 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.49‌ಮಾರ್ಗಗಳು
ಪ್ರತಿಮಾರ್ಗಕ್ಕೆ‌ ಒಬ್ಬರನ್ನು ನಿರ್ವಹಣೆಗೆ ,51 ದೊಡ್ಡ ಕೆಎಸ್ ಆರ್ ಟಿಸಿ ವಾಹನಗಳು ಪ್ರತಿ ವಾಹನದಲ್ಲಿ 6 ಮತಗಟ್ಟೆ ಅಧಿಕಾರಿಗಳು,ಇವಿಎಂ ಮತಯಂತ್ರಗಳು, ತಲಾ ಒಬ್ಬೊಬ್ಬರನ್ನು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ.ಒಟ್ಟು 1052 ಚುನಾವಣಾ ಸಿಬ್ಬಂದಿಗಳು,ಅದರಲ್ಲಿ 47 ಜನ ಸಿಬ್ಬಂದಿಗಳು ಕಾಯ್ದಿರಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ಸಿದ್ದರಾಮ ಮಾರೇಹಾಳ್ ತಿಳಿಸಿದರು.

5 ಸಖಿಮತಗಟ್ಟೆಗಳು:ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ (ಮತಗಟ್ಟೆ ಸಂಖ್ಯೆ8),ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೊಕ್ಕೆ (ಮತಗಟ್ಟೆ ಸಂಖ್ಯೆ 20),ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಲ್ಲಾಗಟ್ಟೆ ಮತಗಟ್ಟೆ ಸಂಖ್ಯೆ (90),ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಪೇಟೆ ಜಗಳೂರು ಟೌನ್ (ಮತಗಟ್ಟೆ ಸಂಖ್ಯೆ 196),ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿದರಕೆರೆ (ಮತಗಟ್ಟೆ ಸಂಖ್ಯೆ 250) ಸಖಿ ಮತಗಟ್ಟೆ ಕೇಂದ್ರಗಳು ಸಿದ್ದತೆಗೊಂಡಿವೆ.5 ಮತಗಟ್ಟೆಗಳಿಗೂ ಮಹಿಳೆಯರೇ ಮತಗಟ್ಟೆ ಅಧಿಕಾರಿಗಳು,ಮಹಿಳಾ ಮತದಾರರನ್ನಾಗಿ ವಿಂಗಡನೆಮಾಡಲಾಗಿದೆ.ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊರಕೆರೆ ಜಗಳೂರು ಟೌನ್ ಮತಗಟ್ಟೆ ಸಂಖ್ಯೆ ( 181) ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ,ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ (238),ಧ್ಯೇಯ ಆಧಾರಿತ ಮತಗಟ್ಟೆ,ಸರ್ಕಾರಿ ಉರ್ದು ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ (183) ಯುವಜನ ನಿರ್ವಹಣೆ ಮತಗಟ್ಟೆ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣಬೂರು ಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ (76) ಸಾಂಪ್ರದಾಯಿಕ ಮತಗಟ್ಟೆ ಕೇಂದ್ರಗಳಾಗಿ ಸ್ಥಾಪಿಸಲಾಗಿದೆ.ವಿಶೇಷ ಚೇತನರಿಗೆ ಇನ್ನೋವಾ ವಿಶೇಷ ವಾಹನದಲ್ಲಿ ಮತದಾನಕ್ಕೆ ತೆರಳಲು ವ್ಯವಸ್ಥೆ,ಚುನಾವಣೆ ಸಿಬ್ಬಂದಿಗಳಿಗೆ ಕುಡಿಯುವನೀರು,ಶೌಚಾಲಯ,ವಿದ್ಯುತ್ ಸೇರಿದಂತೆ ಮೂಲಸೌಕರ್ಯ,ಊಟ,ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆಸನ,ಶಾಮಿಯಾನ,ಹಾಗೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಸಿಹಿ ಊಟ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

You missed

error: Content is protected !!