ಶುಕ್ರದೆಸೆ ನ್ಯೂಸ್ : ಐತಿಹಾಸಿಕ ಸುಕ್ಷೇತ್ರಗಳಲ್ಲೊಂದಾದ ಶ್ರೀ ಕೊಣಚಗಲ್ ರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ಇಂದು ದಿನಾಂಕ ಮಾರ್ಚ್ 26 ರ ಸಂಜೆ ಕುದರೆ ಇಳಿಯುವ ಸಂಭ್ರಮ ಜಾತ್ರೆ ಜರುಗುವುದು. ಜಗಳೂರು ತಾಲ್ಲೂಕಿನ ಶ್ರೀ ಕೊಣಚಗಲ್ ಶ್ರೀರಂಗನಾಥ ಸ್ವಾಮಿ ಜಾತ್ರಮಹೋತ್ಸವ ಇಂದು ಸಂಜೆ ಕುದುರೆ ಇಳಿಯುವುದು ಸೋಮವಾರ ಭಜನೆ ಕೋಲಾಟ ವಿವಿಧ ಜನಪದ ಸೋಬಾನೆ ಹಾಡುಗಳಿಂದ ಮನೋರಂಜನೆ.ಮಾರ್ಚ ದಿ. 28 ರಂದು ಓಕುಳಿ ಪವಾಡ ಕತ್ತಿ ಪವಾಡ ಕಾರ್ಯಕ್ರಮದಲ್ಲಿ ವಿವಿಧ ಪೂಜೆ ಕೈಂಕಾರ್ಯಗಳು ಜರುಗಲಿವೆ ಇಲ್ಲಿ ಒಟ್ಟು 7 ದೇವಾನು ದೆವತೆಗಳ ತಾಣ ಶ್ರೀ ಕೊಣಚಗಲ್ ಬೆಟ್ಟದಲ್ಲಿ ನೆಲೆಸಿವೆ.ಶ್ರೀ ರಂಗನಾಥಸ್ವಾಮಿ.ಲಕ್ಕತೊಳಸಮ್ಮ.ಗರುಡ ಆಂಜೇನೇಯ .ಕಂಪಳಿ ಮಾರಮ್ಮ. ವಿವಿಧ ದೇವರುಗಳ ನೆಲೆವೀಡು ಹೌದು.ಈ ಎಲ್ಲಾ ದೇವರುಗಳು ಈ ಜಾತ್ರಮಹೋತ್ಸವದ ವೇಳೆ ಸಿಂಗಾರಗೊಂಡು ಜನರ ಆರಾಧ್ಯ ಭಕ್ತಿ ಭಾವನೆ ಬಿತ್ತುವ ವೈಶಿಷ್ಟ್ಯ ಪರಂಪರೆಗೆ ಹೆಸರಾಗಿವೆ.ಸುಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಜಾತ್ರಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವರು. ಶ್ರೀ ರಂಗನಾಥ ಸ್ವಾಮಿ ದೇವರ ಜಾತ್ರೆ ಸಂವತ್ಸರ ಚೈತ್ರ ಮಾಸದಲ್ಲಿ ಯುಗಾದಿ ಹಬ್ಬ ಮುಗಿದು ಮೂರು ನಾಲ್ಕು ದಿನಗಳಲ್ಲಿಯೆ ಪ್ರಾರಂಭವಾಗುವ ಜಾತ್ರೆ ಈ ಬಾಗದ ಸುತ್ತ ಮುತ್ತಲಿನ ಇಷ್ಟಾರ್ಥ ಆರಾದ್ಯ ದೈವವು ಹೌದು .ಕೊರಟಿಕೆರೆ .ಬಿಸ್ತುವಳ್ಳಿ. ಗುತ್ತಿದುರ್ಗ .ಕಸ್ತೂರಿಪುರ .ಮಾಕುಂಟೆ.ಬಿದರಕೆರೆ ಹಳವದಂಡೆ.ಸಾಗಲಗಟ್ಟೆ.ವ್ಯಾಸಗೊಂಡನಹಳ್ಳಿ. ಮೆದಗಿನಕೆರೆ. ಇನ್ನು ಮುಂತಾದ ಹಳ್ಳಿಗಳು ಈ ಜಾತ್ರೆಯಲ್ಲಿ ಪ್ರಮುಖವಾಗಿ ಭಾಗವಹಿಸಿ ದೇವರ ಜಾತ್ರೆ ಸೇವಾ ಕಾರ್ಯದಲ್ಲಿ ಪಾಲ್ಗೊಳುವರು. ಒಟ್ಟಾರೆ ಐತಿಹಾಸಿಕವಾದ ಹಿನ್ನಲೆ ಕುರುಹುಗಳು ಇರುವ ತಾಣವು ಸುಕ್ಷೇತ್ರಕ್ಕೆ ತನ್ನದೆಯಾದ ಪರಂಪರೆಯಿದೆ ಪೌರಾಣಿಕವಾಗಿಯು .ಐತಿಹಾಸಿಕವಾಗಿ ಈ ನಾಡಿಗೆ ಐತಿಹ್ಯಗಳ ನೆಲೆಯಿದೆ .ಚಿತ್ರದುರ್ಗದ ಪಾಳೆಗಾರ ಚಿಕ್ಕಣ್ಣ ನಾಯಕ ಆಡಳಿತ ಅವಧಿಯಲ್ಲಿ ಈ ಪ್ರದೇಶ ಅಭಿವೃದ್ಧಿ ಕಂಡಿದೆ ಚಿತ್ರದುರ್ಗದ ಪಾಳೆಗಾರರು ಕಟ್ಟಿಸಿರುವಂತ ರಂಗನಾಥ ಸ್ವಾಮಿ ದೇವಾಲಯ ಎನ್ನುವುದಕ್ಕೆ ಅವರ ವಾಸ್ತುಶಿಲ್ಪ ನಾಗರ ಹಾವಿನ ಶಿಲ್ಪವಿದೆ .ದಳವಾಯಿ ಮುದ್ದಾಣ್ಣ ಕಟ್ಟಿಸಿದೆ ಸುಂದರ ಹೊಂಡವಿದೆ .ಕವಿ ಮಹಾಲಿಂಗ ರಂಗ ಸಮಾಧಿ ಸಹ ಇಲ್ಲಿದೆ. ಇಂತ ಐತಿಹಾಸಿಕ ಹಿನ್ನಲೆಯಿರುವ ಜಾತ್ರಮಹೋತ್ಸವ ಇಂದಿನಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗುವುದು. ಆಪಾರ ಭಕ್ತ ಸಮೂಹ ದೇವರ ಪೂಜೆ ಕೈಂಕಾರ್ಯದಲ್ಲಿ ಕೈಗೊಂಡು ಆ ಬಾಗದಲ್ಲಿ ಬಿಡಾರ ಬಿಟ್ಟು ಪೌಳಿಗಳ ಮೂಲಕ ಭಕ್ತರು ಬೀಡಾರ ಬಿಟ್ಟು .ಸಿಹಿ ತಿನಿಸು.ಸೇರಿದಂತೆ ಅವರ ಇಷ್ಟಾರ್ಥ ಅಡುಗೆ ಸವಿಯವರು. .ಜಾತ್ರೆಯಲ್ಲಿ ವಿವಿಧ ತಿನಿಸುಗಳು ಗೃಹ ಬಳಕೆ ವಸ್ತುಗಳು ಜನಪಯೋಗಿ ಮಹಿಳೆಯರು ಧರಿಸುವ ಬಳೆ ಕುಂಕುಮ್ಮ .ಹಣ್ಣು ಕಾಯಿ.ಪೂಜಾ ಸಾಮಾಗ್ರಿಗಳು ಇನ್ನಿತರೆ ದಿನಸಿ ವಸ್ತುಗಳು ಜಾತ್ರೆಯಲ್ಲಿ ಮಾರಾಟಗಾರರು ಮಾರಟ ಮಾಡುವರು.ಬೆಟ್ಟ ಹತ್ತಿ ಬೆಟ್ಟದ ಶ್ರೀ ರಂಗನಾಥ ಸ್ವಾಮಿಯ ಜಾತ್ರೆಯೆಂದರೆ ಎಲ್ಲಿಲ್ಲದ ಸಂಭ್ರಮ ಸಡಗರ ನೋಡ ಬನ್ನಿ ಕೊಣಚಗಲ್ ಜಾತ್ರಮಹೋತ್ಸವದ ಮೆರುಗು. ವರದಿ. ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಸಂಪಾದಕರು ಶುಕ್ರದೆಸೆ ಪತ್ರಿಕೆ …… ವಿಶೇಷ ಸೂಚನೆ ಜಾತ್ರಮಹೋತ್ಸವದಲ್ಲಿ ಪಾಲ್ಗೊಳ್ಳುವಂತ ಭಕ್ತಾಧಿಗಳಿಗೆ ಮುಜಾರಾಯಿ ಇಲಾಖೆ ಹಾಗೂ ಸಂಬಂಧಿಸಿದ ಗ್ರಾಪಂ ವತಿಯಿಂದ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆರೋಗ್ಯ ಸೇವೆ ರಕ್ಷಣೆ ವ್ಯವಸ್ಥೆ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಎಂದು ತಹಶೀಲ್ದಾರ್ ಜಿ ಸಂತೋಷಕುಮಾರ್ ತಿಳಿಸಿದ್ದಾರೆ. ಉಪಾ ತಹಶೀಲ್ದಾರ್ ಮಂಜುನಾಥ.ಆರ್ ಐ ದನುಂಜಯ್.ಗ್ರಾಮ ಲೆಕ್ಕಾಧಿಕಾರಿ ನವೀನ್ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜಯ್ಯ ಗ್ರಾಮೀಣ ಜನರ ಜಾತ್ರೆಯಲ್ಲಿ ಭಕ್ತಾ ಮಂಡಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರ್ ಐ ದನುಂಜಯ್ ತಿಳಿಸಿದ್ದಾರೆ. ಶ್ರೀ ರಂಗನಾಥ ಭಕ್ತ ಮಂಡಳಿಯಿಂದ ಪ್ರತಿವರ್ಷದಂತೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಭಕ್ತಮಂಡಳಿ ತಿಳಿಸಿದ್ದಾರೆ.