ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ
Dr Prabha Mallikarjun
ನನ್ನ ಸಮರ್ಥವಾದ ಆಯ್ಕೆ ಏಕೆ…?..
ದಯಮಾಡಿ ಓದಿ ಮತದಾನ ಮಾಡಿ… ಲೋಕಸಭಾ ಕ್ಷೇತ್ರಕ್ಕೆ

Dr Prabha Mallikarjun
ನನ್ನ ಸಮರ್ಥವಾದ ಆಯ್ಕೆ ಏಕೆ…?..
ದಯಮಾಡಿ ಓದಿ ಮತದಾನ ಮಾಡಿ…

ನನಗೀಗ ಐವತ್ತು ವರ್ಷ ದಾಟಿದೆ ಜನಿಸಿದ 30 ವರ್ಷಗಳವರೆಗೆ ಹುಟ್ಟೂರು ಆವರಗರೆ ಹಾಗೂ ದಾವಣಗೆರೆಯಲ್ಲಿ ನನ್ನ ಓದು ಸಂಘಟನೆ ಹೋರಾಟ ವಕೀಲ ವೃತಿ ಅಂತಾ ಬದುಕು ಸಾಗಿಸಿದವನು ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರು ಕೇಂದ್ರವಾಗಿರಿಸಿಕೊಂಡು ರಾಜ್ಯ ಹಾಗೂ ದೇಶದ ಉದ್ದಗಲಕ್ಕೂ ಸಿಪಿಐ(ಎಂ) ನಾಯಕನಾಗಿ ದೇಶದ ಅಗ್ರಗಣ್ಯ ಕಾರ್ಮಿಕ ಸಂಘಟನೆ ಸಿಐಟಿಯು ರಾಜ್ಯ ನಾಯಕನಾಗಿ ಒಬ್ಬ,ಬರಹಗಾರ,ಭಾಷಣಕಾರ ಹಾಗೂ ಸ್ವತಃ ಪತ್ರಕರ್ತ ಮತ್ತು ಕಾನೂನು ಸಲಹೆಗಾರನಾಗಿ ಕೆಲಸ ಮಾಡುತ್ತಿರುವೆ.

ನಾನು ದಾವಣಗೆರೆಯಲ್ಲಿ ಇದ್ದಷ್ಟು ವರ್ಷಗಳಲ್ಲೂ ದಾವಣಗೆರೆಯ ಪ್ರತಿ ಗಲ್ಲಿ ಓಣಿ ಬಡಾವಣೆ ನಗರಗಳು ಹೀಗೆ ನಾನು ಪಾದ ಸವೆಸಿದ ಜಾಗಗಳಿಲ್ಲ. ಮೂರು ವರ್ಷ ಪದವಿ‌ ಮೂರು ವರ್ಷ ಕಾನೂನು ಶಿಕ್ಷಣವನ್ನು ಪಡೆದಿದ್ದು ಬಾಪೂಜಿ ವಿದ್ಯಾಸಂಸ್ಥೆಯ ಕಾಲೇಜುಗಳಲ್ಲೇ ಎಂ.ಎಸ್.ಬಿ ಕಾಲೇಜಿನಲ್ಲಿ ಪ್ರಥಮ‌ ಪದವಿ ಓದುವಾಗಲೇ ಹಿರೇಮಠದ ಪೀಠಾಧಿಪತಿ ಶ್ರೀ ಸದ್ಯೋಜಾತ ಸ್ವಾಮಿಜೀ ಪ್ರಿನ್ಸಿಪಲ್ ಆಗಿದ್ದಾಗ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಎಂದು ವಿದ್ಯಾರ್ಥಿಗಳ ಸಂಘಟನೆ ಮಾಡಿದವನು ನಮ್ಮ ಗುರುಗಳಾದ ಶ್ರೀ ಎಸ್.ಎಚ್‌ ಪಟೇಲರು ಕಾನೂನು ಕಾಲೇಜಿನ ಪ್ರಿನ್ಸಿಪಲ್ ಆಗಿದ್ದಾಗಲೂ ಅದೇ ಹೋರಾಟ ಮುಂದುವರೆಸಿದವನು.ಮಾತ್ರವಲ್ಲ ಸ್ವತಃ ಪಟೇಲರು ಜನತಾದಳದಿಂದ ಲೋಕಸಭೆಗೆ ಸ್ಪರ್ಧಿಸಿದಾಗ ಹಗಲು ರಾತ್ರಿಗಳೆನ್ನದೆ ದಾವಣಗೆರೆ ಜಿಲ್ಲೆಯ ಪ್ರಗತಿಪರ ಜತೆಗೂಡಿ ಕೆಲಸ‌ ಮಾಡಿದವನು

ದಾವಣಗೆರೆ ಅದೇ ಭಾಪೂಜಿ ಕಾಲೇಜಿನಲ್ಲಿ ಓದುವಾಗಲೇ ದಾವಣಗೆರೆಗೆ‌ ಸರ್ಕಾರಿ ಪದವಿ ಕಾಲೇಜು ಬೇಕೇ ಬೇಕು ಎಂದು ಸ್ವತ ಶ್ರೀ ಶಾಮನೂರು ಶಿವಶಂಕರಪ್ಪ ಅವರ‌ ಪಕ್ಕದಲ್ಲೇ ಕುಳಿತಿದ್ದ ಅಂದಿನ ಉನ್ನತ ಶಿಕ್ಷಣ ಸಚಿವ ಶ್ರೀ ಬಿ.ಸೋಮಶೇಖರ್ ಅವರಿಗೆ ವಿದ್ಯಾರ್ಥಿ ನಿಯೋಗ ಕೊಂಡ್ಯೊಯ್ದು ಮನವಿ ಸಲ್ಲಿಸಿದಾಗ ಸ್ವತಃ ಬಿ.ಸೋಮಶೇಖರ್ ಅವರೇ ಶ್ರೀ ಶಿವಶಂಕರಪ್ಪ ಅವರಿಗೆ ಕೇಳಿದರೆ ಅವರೇ ಇನ್ನೊಂದು ‌ಕಾಲೇಜು ತೆರೆಯುತ್ತಾರಲ್ಲ ಎಂದು ಹೇಳಿದ್ದಕ್ಕೆ ನಾವು ಕೇಳುತ್ತಿರುವುದು ಬಡವರಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಶುಲ್ಕ ಕಡಿಮೆ ಇರುವ ಸರ್ಕಾರದ ಕಾಲೇಜು ಸಾರ್ ಬಾಪೂಜಿ ಕಾಲೇಜುಗಳಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿದ್ದೆ ಈ‌ ಮಾತು ಕೇಳಿದ ಪಕ್ಕದಲ್ಲೇ ಇದ್ದ ಶ್ರೀ ಶಿವಶಂಕರಪ್ಪ ಅವರು ಮುಗುಳ್ನಕ್ಕು ಸುಮ್ಮನಿದ್ದ ದೃಶ್ಯವಿನ್ನೂ ನನ್ನ ಸ್ಮತಿಪಟದಿಂದ ದೂರವಾಗಿಲ್ಲ.

ಒಂದು ಕಾಲದ ಹತ್ತಿಗಿರಣಿಗಳ ನಗರ ಕರ್ನಾಟಕದ ಮ್ಯಾಂಚೆಸ್ಟರ್‌ ಖ್ಯಾತಿಯ ದಾವಣಗೆರೆಯಲ್ಲಿ ಹಲವು ದಶಕಗಳು ಕಮ್ಯೂನಿಸ್ಟ್ ಪಕ್ಷ ಹಾಗೂ ಕಾಮ್ರೇಡ್ ಪಂಪಾಪತಿಯವರದ್ದೆ ಹವಾ.ಕಮ್ಯೂನಿಸ್ಟ್ ಪಕ್ಣದ ಹವಾ ಎಷ್ಟು ಜೋರು ಇತ್ತೆಂದರೆ ಒಂದು ಬಾರಿ ನಗರಸಭೆ ಕ್ರೀಡಾಂಗಣವನ್ನು ಬಾಪೂಜಿ ಸಂಸ್ಥೆಯವರು‌ ನವೀಕರಣ ಮಾಡಿ ರಾತ್ರೋರಾತ್ರಿ ಅದನ್ನು ಬಾಪೂಜಿ ಸಭಾಂಗಣ ಎಂದು ಬದಲಾಯಿಸಿದ್ದರು ಆಗ ಕಮ್ಯೂನಿಸ್ಟ್ ಪಕ್ಣದ ಯುವ‌ನಾಯಕನಾಗಿದ್ದ ಟಿ.ವಿ ಶಂಕರ್ ಒಂದು ಪತ್ರಿಕಾ ಹೇಳಿಕೆ ಮೂಲಕ ಘರ್ಷಿಸಿದ್ದೆ ತಡ‌ ಪುನಃ ರಾತ್ರೋರಾತ್ರಿ ಆ ಬಾಪೂಜಿ ಕ್ರೀಡಾಂಗಣ ಎನ್ನುವ ಬೋರ್ಡು ಮಾಯವಾಗಿತ್ತು! ನಂತರದಲ್ಲಿ ದಾವಣಗೆರೆ ಬದಲಾಯಿತು‌ ಪಂಪಾಪತಿಯವರು ಸೋತ ಬಳಿಕ ಒಂದು‌ ಬಾರಿ ಕಾಂಗ್ರೆಸ್ ಪಕ್ಷದಿಂದ ಶ್ರೀ ‌ಮೋತಿ ವೀರಣ್ಣ ಗೆದ್ದಿದ್ದು ಬಿಟ್ಟರೇ ನಂತರದ್ದು ಶಾಮನೂರು ಮನೆತನದ್ದೆ ಹವಾ.
ಶ್ರೀ ಶಾಮನೂರು ಶಿವಶಂಕರಪ್ಪ ಮನೆತನದ ಹವಾ ಈಗಲೂ ದಾವಣಗೆರೆ ಮೇಲೆ ಹಿಡಿತ ಸಾಧಿಸುತ್ತಿರುವುದಕ್ಕೆ ಹಲವು ವ್ಯವಹಾರಿಕ ಕಾರಣಗಳಿವೆ ವಿಶೇಷವಾಗಿ ಅವರು ಸ್ಥಾಪಿಸಿರುವ ನೂರಾರು ಶಾಲಾಕಾಲೇಜು,ಬ್ಯಾಂಕ್, ಕೈಗಾರಿಕೆ,ಆಸ್ಪತ್ರೆಗಳು ಮೊದಲಾದ ಸಂಸ್ಥೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ ಇಲ್ಲಿ ಅವರದ್ದೇ ಜಾತಿಯವರಿಗೆ ಉನ್ನತ ಸ್ಥಾನಗಳನ್ನು ಇನ್ನುಳಿದಂತೆ ಇತರೆ ಜಾತಿಗಳವರಿಗೆ ಡಿ‌.ದರ್ಜೆಯ ಹುದ್ದೆಗಳನ್ನು ‌ನೀಡಿಲಾಗಿದೆ‌ ಎನ್ನುವ ಆರೋಪಗಳಿವೆ ಸಾಕಷ್ಟು ‌ಕಾರ್ಮಿಕ ಕಾನೂನುಗಳು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ಅಪಾದನೆಗಳು ಬಾಪೂಜಿ ಸಂಸ್ಥೆ ಮೇಲಿವೆ‌ ಮತ್ತು ಮೂರು ದಶಕಗಳ ಹಿಂದೆ ಆ ಬಗ್ಗೆ ಒಂದು ಹೋರಾಟ ಕೂಡ ನಡೆದಿದ್ದ ಇತಿಹಾಸ‌ ಕೂಡ ಇದೆ.ಇಷ್ಟೇಲ್ಲದ ನಡುವೆಯೂ‌ ಶ್ರೀ ಶಿವಶಂಕರಪ್ಪ ಹಾಗೂ ಶ್ರೀ ಮಲ್ಲಿಕಾರ್ಜುನ ಅವರು ಸ್ವತಃ ಕೊಡುಗೈ ದಾನಿಗಳು ಮನೆ ಬಾಗಿಲಿಗೆ ಬಂದವರನ್ನು ಎಂದೂ ವಾಪಸ್ಸು ಬರಿಗೈಲೇ ವಾಪಸ್ಸು ಕಳಿಸಿದ ಉದಾಹರಣೆಗೆ ಇಲ್ಲವೇ ಇಲ್ಲ.ಮತ್ತು ಅವರು ಗೆಲ್ಲಲೇಬೇಕು ಅನಿಸಿದಾಗಲೇಲ್ಲ ಎಲ್ಲಾ ರಾಜಕೀಯ ಪಟ್ಟುಗಳನ್ನು ಬಳಸಿ ಗೆಲ್ಲುತ್ತಾರೆ ಸೋತಾಗ ತಮ್ಮ‌ ವ್ಯವಹಾರ ನೋಡಿಕೊಳ್ಳುತ್ತಾ‌ ಸುಮ್ಮನಾಗುತ್ತಾರೆ.ಇದು ಅವರ ಖಯಾಲಿ.ಅದರಾಚೆ ಯಾವ ಚಿಂತನೆ ತಿಳುವಳಿಕೆ ಓದು ಸಂಗೀತ,ಸಾಹಿತ್ಯ ಚರ್ಚೆ ಇತ್ಯಾದಿ ಹೂಂ ಕೇಳಲೇಬೇಡಿ ಉಳಿದಂತೆ ಅವರದೆ ವ್ಯವಹಾರಗಳ ಲೋಕ ಇದು ನಾನು‌ ನೋಡಿದಂತೆ ಶಾಮನೂರು ‌ಮನೆತನದ ಎಲ್ಲ ಗಂಡಸರಿಗೂ ಹಾಗೂ ಅವರ ಜತೆ ಕಾಂಗ್ರೆಸ್ ‌ನಾಯಕರೆಂದು ಓಡಾಡುವ ಎಲ್ಲ ಹಿರಿಕಿರಿ ನಾಯಕರಿಗೂ ಅನ್ವಹಿಸುತ್ತೆ ಇಂತಹ ಕಾರಣದಿಂದಾಗಿ ದಾವಣಗೆರೆಯಲ್ಲಿ ಹೇಳಿಕೊಳ್ಳುವಂತಹ ತಿಳುವಳಿಕೆ ವಿದ್ವತ್ತು,ಇರುವ ಬಿಜೆಪಿ ಸಂಘಪರಿಹಾರ ಹರಡುವ ಹಸಿ ಹಸಿ ಸುಳ್ಳುಗಳನ್ನು ಸೈದ್ಸಾಂತಿಕವಾಗಿ ತನ್ನ ತಿಳುವಳಿಕೆ ಮೂಲಕ ಬಟಾಬಯಲುಗೊಳಿಸುವ ಒಬ್ಬೇ ಒಬ್ಬ‌ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲವೆನ್ನಬಹುದು.

ಆದರೆ ನಾನೀಗ ಗಮನಿಸುತ್ತಿರುವುದು ಮತ್ತು ಹೇಳಲೊರಟಿರುವುದು ಶ್ರೀ ‌ಶಾಮನೂರು‌ ಕುಟುಂಬದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರೀಮತಿ ಪ್ರಭಾಮಲ್ಲಿಕಾರ್ಜುನ ಅವರ ಓಡಾಟ‌ ಅವರ ಮಾತುಗಳು ಅವರ ತಿಳುವಳಿಕೆ ಬಗೆಗೆ.‌ಕಳೆದ ಒಂದೆರಡು ತಿಂಗಳಿಂದ ಶ್ರೀಮತಿ ಪ್ರಭಾ‌ಮಲ್ಲಿಕಾರ್ಜುನ ಅವರ ಮಾತುಗಳನ್ನು ನಿರಂತರವಾಗಿ ಬೆಂಗಳೂರು ಹಾಗೂ ಕರ್ನಾಟಕದ ಉದ್ದಗಲಕ್ಕೂ ಓಡಾಡುತ್ತಲೇ ಕೇಳಿಸಿಕೊಳ್ಳುತ್ತಿರುವೆ ಮತ್ತು ವೀಕ್ಷಣೆ‌ ಮಾಡುತ್ತಿರುವೆ. ನಿಜಕ್ಕೂ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇದೆ.ಆಳವಾದ ಅಧ್ಯಯನ ಇದೆ ಭವಿಷ್ಯದ ‌ಕನಸುಗಳಿವೆ ಸಮಸ್ಯೆಗಳನ್ನು ಇತ್ಯರ್ಥಪಡಿಸಬಹುದಾದ ಕಣ್ಣೋಟ‌ ಹಾಗೂ‌ ದೃಡ ವಿಶ್ವಾಸವಿದೆ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಕೇಳಿಸಿಕೊಳ್ಳುವ ಹಾಗೂ‌ ನೋವಿಗೆ ಸ್ಪಂದಿಸುವ ತಾಯ್ತಾನ ಇದೆ.ಅವರ ಕೆಲವು ಮಾತುಗಳನ್ನು ಕೇಳಿದಾಗ ನಾನು ಭಾವುಕನಾಗಿದ್ದೇನೆ ಪ್ರತಿದಿನ ಅವರ ಪೊಸ್ಟೀಂಗ್ ಗಳನ್ನು ಓದಿದಾಗ ನನಗೆ‌ ನಿಜಕ್ಕೂ ಅವರ ಬಗ್ಗೆ ಆಶ್ಚರ್ಯ ಹಾಗೂ ಅಭಿಮಾನ ಉಂಟಾಗುತ್ತದೆ. ನಿನ್ನೆಯಷ್ಟೇ ಜಗಳೂರು‌ ಹಾಗೂ ಹರಪನಹಳ್ಳಿ ಎನ್ನುವ ಹಿಂದುಳಿದ ಬರ ತಾಲೂಕುಗಳ ಕುರಿತಾಗಿ ಅವರು ಹೆತ್ತ ತಾಯಿಯ ಎಂಟು ಮಕ್ಕಳ ಪೈಕಿ ಈ ಎರಡು ತಾಲೂಕುಗಳು ಊನವಾಗಿರುವ ಮಕ್ಕಳ ರೀತಿಯಲ್ಲಿವೆ ಅವುಗಳಿಗೆ ವಿಶೇಷವಾಗಿ ಹಾರೈಕೆ ಮಾಡುವ ಅಗತ್ಯವಿದೆ ಎನ್ನುವ ದೃಡ ಸಂಕಲ್ಪದ ಮಾತುಗಳು ನಿಜಕ್ಕೂ ಮನದುಂಬಿ ಬಂದವು. ಆ ಎರಡು ತಾಲೂಕಗಳನ್ನು ಕಳೆದ ನಾಲ್ಕು ದಶಕಗಳಿಂದ ಆಳುವವರೆಲ್ಲರೂ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಲೇ ಬಂದಿರುವುದು ಕಹಿಯಾದ ಸತ್ಯ. ಬಹುಶಃ ಇಂತಹ‌ ಮಾತುಗಳನ್ನು ಎಂದೂ ಹಾಲಿ ಇರುವ ಬಿಜೆಪಿ ಸಂಸದರಿಂದಲೂ ಅಷ್ಟೇ ಯಾಕೆ ಸ್ವತಃ ಶ್ರೀ ಶಾಮನೂರು ಕುಟುಂಬದ ಯಾರೊಬ್ಬರಿಂದಲೂ ಕೇಳಿರಲಿಲ್ಲ. ಯಾಕೆಂದರೆ ಶ್ರೀ ಶಾಮನೂರು ಹಾಗೂ ಬೀಮಸಮುದ್ರ ಕುಟುಂಬಗಳೆರಡೂ ವ್ಯವಾರಸ್ಥರೇ ಆಗಿರುವುದು ಅದಕ್ಕೆ ಬಹುಮುಖ್ಯ ಕಾರಣ.

ಆದರೆ ಆ ಎರಡು‌ ಕುಟುಂಬಗಳನ್ನು ಮೀರಿ,ಅವರ ವ್ಯವಹಾರಿಕತೆಯನ್ನು ಮೀರಿ ಬೆಳೆದ ಛಾತಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರದ್ದು ಎನ್ನುವುದು ಅವರ‌ ಮಾತುಗಳನ್ನು ಕೇಳಿದಾಗ ಸ್ಪಷ್ವವಾಗುತ್ತಿದೆ. ಬಹುಶಃ ವೃತ್ತಿಯಿಂದ ಸ್ವತಃ ವೈದ್ಯರು ಹಾಗೂ ಗ್ರಾಮೀಣ ರೈತ ಕುಟುಂಬದಿಂದ ಬೆಳೆದು ಬಂದ ಇತಿಹಾಸವು ಅವರಿಗಿರುವ ಕಾರಣಗಳು ಜನರನ್ನು ಸಮಾಜವನ್ನು ನೋಡುವ ಗುಣವನ್ನು ಅವರಿಗೆ ಭಿನ್ನವಾಗಿ ಕಲಿಸಿಕೊಟ್ಟಿದೆ. ಇಂತಹ ಪ್ರತಿಭಾವಂತಹ ವ್ಯಕ್ತಿತ್ವವೊಂದು ಇಷ್ಟು ವರ್ಷ ಶ್ರೀ ಶಾಮನೂರು ಕುಟುಂಬ ಎನ್ನುವ ಹೆಮ್ಮರದೊಳಗೆ ಎಲೆಮರೆಯ ಕಾಯಿಯಂತೆ ಇತ್ತು. ಇಂತಹ ಅದ್ವಿತೀಯ ವ್ಕಕ್ತಿತ್ವವೊಂದು ಇದುವರೆಗೂ ಹೊರ ಪ್ರಪಂಚಕ್ಕೆ ಸಮಾಜಕ್ಕೆ ಪರಿಚಯವೇ ಆಗಿರಲಿಲ್ಲ ಎನ್ನುವುದು ಅತ್ಯಂತ ಅಷ್ಟೇ ಸತ್ಯ.
ದಾವಣಗೆರೆಯಂತಹ ನಗರ ಮತ್ತು ಲೋಕಸಭಾ ‌ಕ್ಷೇತ್ರ ಇಂದು ಶೈಕ್ಷಣಿಕವಾಗಿ ಔಧ್ಯೋಗಿಕವಾಗಿ ಸಾಕಷ್ಟು ಬೆಳೆದಿದೆ ಇಲ್ಲಿನ ಕೃಷಿರಂಗ ಹಾಗೂ ಕೈಗಾರಿಕರಂಗ ತೀವ್ರ ಬಿಕ್ಕಟ್ಟಿನಲ್ಲಿದೆ ಶಿಕ್ಷಣ ಕಲಿತ ಸಾವಿರಾರು ಯುವಕ ಯುವತಿಯರು ಬೆಂಗಳೂರಿನತ್ತ‌ ಕೆಲಸಕ್ಕಾಗಿ ಮುಖ ಮಾಡಿದ್ದಾರೆ ಇಂತಹ ಯುವಜನರಿಗೆ ಉದ್ಯೊಗವಕಾಶಗಳನ್ನು ಸೃಷ್ಟಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಇಲ್ಲದಿದ್ದರೆ ಅಸಹಾಯಕ ಅಮಾಯಕ ಬಡ ಯುವಕ ಯುವತಿಯರನ್ನು ಜಾತಿ, ಧರ್ಮದ ಹೆಸರಲ್ಲಿ ಛಿದ್ರಗೊಳಿಸುವ ಕೆಲಸಗಳನ್ನು ವ್ಯವಸ್ಥಿತವಾಗಿ ಕೋಮುವಾದಿ ಶಕ್ತಿಗಳು ಹಲವು ದಶಕಗಳಿಂದ ‌ನಡೆಸುತ್ತಲೇ ಬಂದಿದ್ದಾರೆ ಇಂತಹ ಸನ್ನಿವೇಶದಲ್ಲಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರಂತಹ ಪ್ರಜ್ಞಾವಂತ,ತಿಳುವಳಿಕೆ,ದೂರದೃಷ್ಟಿ ಇರುವ ಹಾಗೂ ಅಭಿವೃದ್ಧಿ ಕನಸು ಕಾಣುವುದು ಮಾತ್ರವಲ್ಲ ಅದನ್ನು ಸಾಕಾರಗೊಳಿಸುವ ಕಣ್ಣೋಟ ಇರುವಂತಹ ವ್ಯಕ್ತಿತ್ವವೊಂದು ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಪ್ರತಿನಿಧಿಯಾಗಿ ಆಯ್ಕೆಯಾಗುವುದು ದಾವಣಗೆರೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಸೂಕ್ತವಾಗಿದೆ ಎನ್ನುವುದು ನನ್ನ ನಂಬಿಕೆ.
ಕಳೆದ ನಾಲ್ಕು ಬಾರಿ ಈ‌ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ತಂದೆ ಮಕ್ಕಳು ತಮ್ಮ ವೈಯಕ್ತಿಕ ಅಭಿವೃದ್ಧಿ ಹಾಗೂ ಸಾವಿರಾರು ಕೋಟಿ ಆಸ್ತಿ ಹಾಗು ಹೆಚ್ಚಿಸಿಕೊಂಡಿದ್ದು ಹಾಗೂ ಕೋಮುಉನ್ಮಾದವನ್ನು ಬಡಿದೆಬ್ಬಿಸಿ ಹಿಂದು ಹೆಸರಲ್ಲಿ ಯುವಕರನ್ನು ದಾರಿತಪ್ಪಿಸಿ ಜೈಲಿಗೆ ಕಳಿಸಿದ್ದು ಬಿಟ್ಟರೆ ಬೇರೆ ಯಾವ ಸಾಧನೆಗಳು ಇಲ್ಲ….
ಕಳೆದ ಎರಡು ಬಾರಿ ಗೆದ್ದಿರುವ ಸಂಸದರಿಗೆ ಮೋದಿ ಜಪವೊಂದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಮಾಡಿದ ವಿಷಯಗಳೆ ಇಲ್ಲ. ಆದರೆ‌ ಮೋದಿ‌ಮೋದಿ ಮೋದಿ ಎಂದು ಕುಣಿಯುವುದರಿಂದ ನಿರುದ್ಯೋಗ ಯುವಕರಿಗೆ ಉದ್ಯೋಗಗಳನ್ನು ಸಿಗಲಿವೆಯೇ ಏರಿರುವ ಬೆಲೆಗಳು ಇಳಿಯಲಿವೆಯೇ? ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಗಳಿಗೆ ನ್ಯಾಯದ ಬಾಗಿಲು ತೆರೆಯಲಿವೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ‌ ಇಂತಹ ಸನ್ನಿವೇಶದಲ್ಲಿ
ದಾವಣಗೆರೆ ಜಿಲ್ಲೆಯ ಎಲ್ಲ‌ಪ್ರಜ್ಞಾವಂತ ಮತದಾರರು ಕೇವಲ ಭಾವನಾತ್ಮಕ ವಾಗಿ ಚಿಂತಿಸದೇ ಜಾತಿ‌ಮತ ಧಾರ್ಮಿಕ ಬೇಧ ಭಾವವನ್ನು ಮೀರಿ ಬಹು ವರ್ಷಗಳ ಬಳಿಕ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮರ್ಥ ಅಭ್ಯರ್ಥಿಯಾಗಿರುವ ಡಾ ಪ್ರಭಾ‌ಮಲ್ಲಿಕಾರ್ಜುನ ಅವರನ್ನು ಚುನಾಯಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದೇ ಭಾವಿಸಬೇಕಿದೆ.

ಕೆ.ಮಹಾಂತೇಶ್
9448415167

https://www.facebook.com/share/r/5hLzHgc3pmn1n9oq/?mibextid=oFDknk

Leave a Reply

Your email address will not be published. Required fields are marked *

You missed

error: Content is protected !!