ಬಸವನಕೋಟೆ ಗ್ರಾಮದಲ್ಲಿ ಚರಂಡಿ ಸ್ವಚಗೋಳಿಸುವ ವೇಳೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಕುಟುಂಬದವರ ಮನೆಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷರಾದ ಕೊಟೆ ಎಂ ಶಿವಣ್ಣ ಭೇಟಿ ನೀಡಿ ಸಾಂತ್ವನ ಹೇಳಿದರು ಶುಕ್ರದೆಸೆ ನ್ಯೂಸ್ .. ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದ. ಮೈಲಪ್ಪ ಸತ್ಯಪ್ಪ ಎಂಬ ಇಬ್ಬರು ಗ್ರಾಮದಲ್ಲಿ ಸಂಬಂಧಿಸಿದ ಗ್ರಾಪಂ ವ್ಯಾಪ್ತಿಗೆ ಸೇರಿದ ಚರಂಡಿ ಸ್ವಚಗೋಳಿಸುವ ವೇಳೆ ಕಲುಷಿತ ವಿಷಕಾರಿ ವಾಸನೆ ಸೇವನೆ ಹಿನ್ನಲೆಯಲ್ಲಿ ಅಸ್ತವ್ಯಸ್ತಗೊಂಡು ಸಾವನ್ನಪಿದ ಕುಟುಂಬಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯತಿ ಕನಿಷ್ಠ ಪರಿಹಾರ ನೀಡಿರುವುದಿಲ್ಲ ಎಂದು ತಾಪಂ ಇಓ ಗೆ ಕರ್ಮಚಾರಿ ಆಯೋಗದ ಅದ್ಯಕ್ಷರು ಎಂ ಶಿವಣ್ಣ ರವರು ತರಾಟೆ ತೆಗೆದುಕೊಂಡರು. ಸಫಾಯಿ ಕರ್ಮಚಾರಿಗಳ ಹಿತರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ (ಮ್ಯಾನ್‌ಹೋಲ್‌ಗೆ ಇಳಿದು ಬರಿಗೈಯಲ್ಲಿ ಸ್ವಚ್ಛ ಮಾಡುವಂತಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.ಪಂಚಾಯತಿಗೆ ನೇಮಕವಾದ ಸ್ವಿಪರ್ ಇದ್ದರು ಕೂಡ ಅನ್ಯ ಕಾರ್ಮಿಕರುನ್ನು ಬಳಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಗ್ರಾಪಂ ಆಡಳಿತಕ್ಕೆ ನಿರ್ಲಕ್ಷ್ಯ ವಹಿಸಿದೆ. ಬಡ ಕುಟುಂಬಕ್ಕೆ ಅನ್ಯಾಯ ವ್ಯಸಗಲಾಗಿದೆ.ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರ ಸಂಪೂರ್ಣ ಆಡಳಿತ ವಿಫಲತೆ ಮೇಲ್ನೋಟಕ್ಕೆ ಎದ್ದು ಕಾಣಲಿದೆ ಎಂದು ತರಾಟೆ ತೆಗೆದುಕೊಂಡರು. ಆ ಕುಟುಂಬಕ್ಕೆ ಭದ್ರತೆ ಒದಗಿಸಿ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ತಾಪಂ, ಇಓ ರವರಿಗೆ ಸೂಚನೆ ನೀಡಿದರು. ದಿನಾಂಕ ಮಾರ್ಚ್ 20 ರಂದು ಪಿಡಿಓ ಶಶಿಧರ ಪಾಟೇಲ್ . ನಿರ್ಲಕ್ಷ್ಯದಿಂದ ಕಾರ್ಮಿಕರು ಸಾವನ್ನಪ್ಪಿದ್ದಾರೆ ಕುಟುಂಬಕ್ಕೆ ತುಂಬಾಲಾರದ ನಷ್ಠವಾಗಿದೆ ಎಂದರು .ಅಂದು ಚರಂಡಿ ಸ್ವಚಗೋಳಿಸುವ ವೇಳೆ ಅಭಿವೃದ್ಧಿ ಅಧಿಕಾರಿ ಕಾರ್ಮಿಕರಿಗೆ ರಕ್ಷಕವಚಗಳಾದ ಬಾಯಿಗೆ .ಕೈಗಳಿಗೆ ಸೇಪ್ಟಿ ರಕ್ಷಣೆ ಕವಚಗಳು ವಿತರಿಸದೆ ಕಾಲಿಗೆ ಶೂಗಳು ಸೇರಿದಂತೆ ನೀಡದೆ ಆರೋಗ್ಯ ಕಾಪಾಡಬೇಕಾದ ಪಿಡಿಓ ಮುಂಜಾಗ್ರತೆ ಜ್ಘಾನವಿಲ್ಲ ಸರ್ಕಾರಿ ನೀಯಮ ಪಾಲಿಸಬೇಕಾದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಾಗಿದೆ. ಪರಿಶೀಲನೆ ನಡೆಸುವೆ ಎಂದರು ಅದರಲ್ಲೂ ತಂತ್ರಜ್ಞಾನ ಕಾಲಘಟ್ಟದಲ್ಲಿ ಅತ್ಯಧುನಿಕ ತಂತ್ರಜ್ಞಾನ ಬಳಸಿ ಮಲ ತೆಗೆಯುವುದು ಕಲುಷಿತ ಚರಂಡಿ ಸ್ವಚಗೋಳಿಸುವ ನೀಯಮವಿದೆ ಏಕೆ ಬಳಕೆಮಾಡಿರುವುದಿಲ್ಲ ತಾಪಂ ಇಓ ಚಂದ್ರಶೇಖರ್ ರವರಿಗೆ ತರಾಟೆ ತೆಗೆದುಕೊಂಡ ಪ್ರಸಂಗಕಂಡು ಬಂದಿತು.ಈ ಘಟನೆಗೆ ಕಾರಣರಾದ ಅಧಿಕಾರಿಗಳುನ್ನು ಸಸ್ಪೆಂಡ್ ಠ ಆಮಾಡಿಸುವೆ ಎಂದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್. ತಾಪಂ ಇಒ ಚಂದ್ರಶೇಖರ್. ಗ್ರಾಪಂ ಅಧ್ಯಕ್ಷರ ಪತಿ ಸೇರಿದಂತೆ ಮುಂತಾದವರು ಹಾಜರಿದ್ದರು.