ಶಾಸಕರ ಜನಸಂಪರ್ಕಕೇಂದ್ರಕ್ಕೆ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಭೇಟಿ ವೀಕ್ಷಣೆ
ಜಗಳೂರು ಸುದ್ದಿ:ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿಗೆ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಭೇಟಿ ನೀಡಿ ಡಿಜಿಟಲ್ ಗ್ರಂಥಾಲಯ,ವಾಚನಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು,ತಾಲೂಕಿನಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಡಿಜಿಟಲ್ ಗ್ರಂಥಾಲಯ ತೆರೆದಿರುವುದು ಶಾಸಕ ಬಿ.ದೇವೇಂದ್ರಪ್ಪ ಅವರ ಶಿಕ್ಷಣ ಬಗ್ಗೆ ಹೊಂದಿದ ಕಾಳಜಿಗೆ ಸಾಕ್ಷಿಯಾಗಿದೆ.ಸ್ಪರ್ಧಾತ್ಮಕ ಪರೀಕ್ಷಾ ಸಂಪನ್ಮೂಲಗಳನ್ನು ಸದ್ಬಳಕೆಮಾಡಿಕೊಂಡು ನಿರುದ್ಯೋಗಿ ಪದವಿಧರರು ಉದ್ಯೋಗ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಬಿ.ದೇವೇಂದ್ರಪ್ಪಮಾತನಾಡಿ,ಪಟ್ಟಣ ಪಂಚಾಯಿತಿ ಹಳೇ ಕಟ್ಟಡ ಪಾಳುಬಿದ್ದು ಅಕ್ರಮ ಚಟುವಟಿಕೆತಾಣವಾಗದಂತೆ ಮುಂಜಾಗ್ರತೆವಹಿಸಿ ಸುಂದರ ವಿನ್ಯಾಸದಲ್ಲಿ ಗ್ರಂಥಾಲಯ,ವಾಚನಾಲಯ,ತೆರೆಯಲಾಗಿದೆ.ಸುತ್ತಲೂ ಉದ್ಯಾನವನ್ನಾಗಿಸಿ ವಿಶ್ರಾಂತಿ ತಾಣವನ್ನಾಗಿಸಲಾಗಿದೆ.ಇದರಿಂದ ನಿವೃತ್ತ ವಯೋವೃದ್ದರು,ಕಾಲೇಜು ವಿದ್ಯಾರ್ಥಿಗಳು,ಉದ್ಯೋಗ ಆಕಾಂಕ್ಷಿಗಳಿಗೆ ವರದಾನವಾಗಿದೆ.ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು.ಜನಸಂಪರ್ಕ ಕಛೇರಿ ಒಳಭಾಗದಲ್ಲಿ ಮಹಾನ್ ನಾಯಕರ,ರಾಜಕಾರಣಿಗಳ ಭಾವಚಿತ್ರಗಳು ಇತಿಹಾಸವನ್ನು ಮೆಲುಕುಹಾಕುತ್ತಿವೆ ಎಂದು ಹೇಳಿದರು.
ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ,ಮುಖಂಡರಾದ ಮಹೇಶ್ವರಪ್ಪ,ಎಂಎಸ್ ಪಾಟೀಲ್,ಕಾಂತರಾಜ್,ಹನುಮಂತಾಪುರ ಶಿವಕುಮಾರ್,ಮಹೇಶ್,ಮಾಳಮ್ಮನಹಳ್ಳಿ ವೆಂಕಟೇಶ್,ರಮೇಶ್ ಸರ್ಕಾರ್,ಗೌರಿಪುರ ಶಿವಕುಮಾರ್,ಸೇರಿದಂತೆ ಇದ್ದರು.