ಬಸವನಕೋಟೆ ಗ್ರಾಮದಲ್ಲಿ ಚರಂಡಿ ಸ್ವಚತೆ ವೇಳೆ ಕಾರ್ಮಿಕರಿಬ್ಬರು ಸಾವು ಸಾವನ್ನಪ್ಪಿದ ಕುಟುಂಬದ ಮನೆಗಳಿಗೆ   ಶಾಸಕ ಎಸ್ ವಿ ರಾಮಚಂದ್ರಪ್ಪ ಭೇಟಿ ತಲಾ 3 ಲಕ್ಷ   ಪರಿಹಾರ ನೀಡಿ ಕುಟುಂಬದವರಿಗೆ  ಸಾಂತ್ವನ ಹೇಳಿದರು.                                 ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮಕ್ಕೆ  ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷರಾದ ಕೊಟೆ ಎಂ ಶಿವಣ್ಣ ಭೇಟಿ ನೀಡಿದ ಬೆನ್ನಲ್ಲೆ ಇಂದು ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರಪ್ಪರವರು ಮೃತ ಕುಟುಂಬಸ್ತರ ಮನೆಗೆ ತೆರಳಿ ಸಂಬಂಧಿಸಿದ ಗ್ರಾಪಂ ವತಿಯಿಂದ  ಸಂತ್ರಸ್ತರಿಗೆ ತಲಾ 3 ಲಕ್ಷ ತಲಾ 3 ಲಕ್ಷದಂತೆ ಇಬ್ಬರ ಮೃತ ಕುಟುಂಬದವರಿಗೆ ಪರಿಹಾರ ನೀಡಿ ಸಂತ್ರಸ್ತ ಕುಟುಂಬಕ್ಕೆ   ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದರು..                                                .. ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದ. ಮೈಲಪ್ಪ ಸತ್ಯಪ್ಪ ಎಂಬ ಇಬ್ಬರು ಗ್ರಾಮದಲ್ಲಿ ಸಂಬಂಧಿಸಿದ ಗ್ರಾಪಂ ವ್ಯಾಪ್ತಿಗೆ ಸೇರಿದ ಚರಂಡಿ ಸ್ವಚಗೋಳಿಸುವ ವೇಳೆ   ಕಲುಷಿತ ವಿಷಕಾರಿ ವಾಸನೆ ಸೇವನೆ ಹಿನ್ನಲೆಯಲ್ಲಿ  ಕಳೆದ ವಾರ ಅಸ್ತವ್ಯಸ್ತಗೊಂಡು ಸಾವನ್ನಪಿದ್ದರು‌ ಆ ಕುಟುಂಬಕ್ಕೆ ಅಸರೆಯಾಗಿದ್ದರು ಮೃತರಾದ ಮೈಲಪ್ಪ ಹಾಗೂ ಸತ್ಯಪ್ಪ ರವರ ಕುಟುಂಬದ ಮನೆಗಳಿಗೆ ಇಂದು ಶಾಸಕ ಎಸ್ ವಿ ರಾಮಚಂದ್ರಪ್ಪರವರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂಬಂಧಿಸಿದ ಗ್ರಾಪಂ ವತಿಯಿಂದ ಮೃತ ಕುಟುಂಬಸ್ತರಿಗೆ ಪರಿಹಾರ ನೀಡಿದರು. ಒಟ್ಟು ತಲಾ 6 ಲಕ್ಷ.6 ಲಕ್ಷದಂತೆ ಇಬ್ಬರು ಕಾರ್ಮಿಕರಿಗೆ   ಪರಿಹಾರ ನೀಡಲಿದ್ದು ಇದೀಗ 3 ಲಕ್ಷದಂತೆ  ಎರಡು ಕುಟುಂಬಸ್ತರಿಗೆ 6 ಲಕ್ಷ ರೂಗಳ ಚೆಕ್ ವಿತರಿಸಿ ಶಾಸಕರ ವಯಕ್ತಿಕವಾಗಿ ತಲಾ 50.000 .ತಲಾ 50.000 ಸಹಾಧನ ನೀಡಿದರು.ಪಂಚಾಯಿತಿಯಿಂದ ನೀಡುವಂತ   ಇನ್ನುಳಿದ  ಪರಿಹಾರ ನಗದನ್ನು ಒಂದು ವಾರದಲ್ಲಿಯೇ  ನೀಡಲು ಬದ್ದವಾಗಿದ್ದೆವೆ  ಎಂದು ಭರವಸೆ ನೀಡಿ ತಂದೆಯನ್ನ ಕಳೆದುಕೊಂಡ ಮಕ್ಕಳಿಗೆ ಅವರ ಆರ್ಹತೆ ಅಧಾರದ ಮೇಲೆ ಗ್ರಾಮ ಪಂಚಾಯತಿಯಲ್ಲಿ ನೌಕರಿ ನೀಡಲಾಗುವುದು ಎಂದು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಕಡತದಲ್ಲಿ ನಮೂದಿಸಲಾಗಿದ್ದು ನೊಂದ ಸಂತ್ರಸ್ತರ ಕುಟುಂಬಕ್ಕೆ ನೌಕರಿ ನೀಡಿ ಭದ್ರತೆ ಒದಗಿಸಲಾಗುವುದು ಎಂದು ಶಾಸಕರು ಚೆಕ್ ವಿತರಿಸಿ ಮಾತನಾಡಿದರು  ನಿಮ್ಮ ಜೊತೆ ನಾವೆದ್ದೆವೆ ಊರಿನ ಜನರಿದ್ದಾರೆ ಕಷ್ಟ ಸುಖದಲ್ಲಿ ಭಾಗಿಯಾಗುವೆ ದೈರ್ಯವಾಗಿರಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೋಡಿಸಿ ಎಂದು ಕುಟುಂಬದವರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದರು.            ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್. ತಾಪಂ ಇಓ ಚಂದ್ರಶೇಖರ್. ಗ್ರಾಪಂ ಅಧ್ಯಕ್ಷರ ಪತಿ‌ ಬೀಮಣ್ಣ. ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್.ಮುಖಂಡ ಶಶಿಧರ್. ಬಿಳಿಚೋಡು ಪೊಲೀಸ್ ಠಾಣೆ ಪಿ ಐ ಸೋಮಶೇಖರ್ ಕೆಂಚರೆಡ್ಡಿ . ಪಿ ಎಸ್ ಐ .ಕೆ ಓಂಕಾರಿನಾಯ್ಕ್. ಪಿ ಎಸ್ ಐ ರಘು.  ಪಿಡಿಓ ತಿಮ್ಮಣ್ಷ. ಗ್ರಾಪಂ ಸದಸ್ಯರಾದ ದೇವರಾಜ್ ಬೇಡ್ಕರ್ ಪುತ್ಥಳಿ ಸಮಿತಿ  ಅಧ್ಯಕ್ಷ ಪೂಜಾರಿ ಸಿದ್ದಪ್ಪ. ವಕೀಲ ಹನುಮಂತಪ್ಪ ಗ್ರಾಮದ ಮುಖಂಡರು  ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!