BREAKING news: ದಾವಣಗೆರೆ ಡಾ ಪ್ರಭಾ ಮಲ್ಲಿಕಾರ್ಜುನ ಭರ್ಜರಿ ಗೆಲುವು: ಬಿಜೆಪಿ ಗಾಯಿತ್ರಿ ಸಿದ್ದೇಶ್ವರ ಗೆ ಶಾಕ್ ಮುಖಭಂಗ
By m.rajappa vyasagondanahalli
Published: Tuesday, June 4, 2024,
ದಾವಣಗೆರೆ ಜೂನ್ 04: ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ ಕ್ಷೇತ್ರದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ.ಕಾಂಗ್ರೆಸ್ ಬಾರಿ ಪೈಪೋಟಿಯಲ್ಲಿ ಚುನಾವಣೆ ಜರುಗಿತ್ತು. ಇದೀಗ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಸೋಲು ಅನುಭವಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ ರವರು ಬಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ

ದಾವಣಗೆರೆ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಬಾರಿ ಮುಖಭಂಗ ಸುಮಾರು 5 ಬಾರಿ ಬಿಜೆಪಿ ದಾವಣಗೆರೆ ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಿದ್ದು ಅದರಲ್ಲೂ ಒಂದೇ ಕುಟುಂಬಕ್ಕೆ ಸೀಮಿತವಾಗಿತ್ತು .ಈ ಹಿಂದೆ ಬಿಜೆಪಿ ಭದ್ರಕೋಟೆಯಾಗಿದ್ದ ಬಿಜೆಪಿ ಸುಮಾರು 6 ಬಾರಿ ಬಿಜೆಪಿ ಸಂಸದರೆ ಆಯ್ಕೆಯಾಗಿ ಆಡಳಿತ ನಡೆಸಿದ ಜಿ ಎಂ ಸಿದ್ದೇಶ್ವರ್ ಕ್ಷೇತ್ರದಲ್ಲಿ ಈ ಬಾರಿ ಅವರ ಬದಲಾಗಿ ಅವರ ಪತ್ನಿಗೆ ಟಿಕೆಟ್ ನೀಡಲಾಗಿತ್ತು.ಆದರೆ ಬಿಜೆಪಿ ಸೋಲು ಕಂಡಿದೆ.
ಹಿಂದಿನ ಚುನಾವಣೆ ಫಲಿತಾಂಶಗಳನ್ನ ಗಮನಿಸಿದರೆ

2019ರ ಚುನಾವಣೆಯಲ್ಲಿ ಬಿಜೆಪಿಯ ಜಿ. ಎಂ. ಸಿದ್ದೇಶ್ವರ 652,996 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎಚ್. ಬಿ. ಮಂಜಪ್ಪ 483,294 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಿಎಸ್‌ಪಿಯ ಸಿದ್ದಪ್ಪ ಬಿ. ಎಚ್. 7,736 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು.

2014ರಲ್ಲಿ ಬಿಜೆಪಿಯ ಜಿ. ಎಂ. ಸಿದ್ದೇಶ್ವರ 518,894 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎಸ್. ಎಸ್. ಮಲ್ಲಿಕಾರ್ಜುನ 501,287 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ಜೆಡಿಎಸ್‌ನ ಮಹಿಮಾ ಪಟೇಲ್ 46,911 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದರು.

2009ರಲ್ಲಿ ಜಿ. ಎಂ. ಸಿದ್ದೇಶ್ವರ 423,447 ಮತಗಳನ್ನು ಪಡೆದು ಗೆಲವು ಕಂಡರು. ಕಾಂಗ್ರೆಸ್‌ನ ಎಸ್. ಎಸ್. ಮಲ್ಲಿಕಾರ್ಜುನ್ 421,423 ಮತಗಳನ್ನು ಪಡೆದ ಹಿನ್ನಲೆಯಿದೆ.

2004ರ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ 370,499 ಮತಗಳನ್ನು ಪಡೆದು ಗೆದ್ದರು. ಎಸ್. ಎಸ್. ಮಲ್ಲಿಕಾರ್ಜುನ್ 337,823 ಮತಗಳನ್ನು ಪಡೆದು ಸೋಲು ಕಂಡರು. ಜೆಡಿಎಸ್‌ನ ಚೆನ್ನಯ್ಯ ಒಡೆಯರ್ 158,515 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.
ದಾವಣಗೆರೆ ಕ್ಷೇತ್ರದ ಚುನಾವಣೆ ಎಂದರೆ ಜಿ. ಎಂ. ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಕಾಳಗ ಎಂದೇ ಖ್ಯಾತಿ ಪಡೆದಿತ್ತು ಎಸ್. ಎಸ್. ಮಲ್ಲಿಕಾರ್ಜುನ್ ಸಿದ್ದೇಶ್ವರ ವಿರುದ್ಧ ಚುನಾವಣೆಯಲ್ಲಿ ಸೋತ ಸೇಡನ್ನು ಇದೀಗ ಪ್ರಭಾ ಮಲ್ಲಿಕಾರ್ಜುನ್ ಪಕ್ಕ ತೀರಿಸಿಕೊಂಡಿರುವುದು ಸತ್ಯವಾಗಿದೆ.

ಇದೀಗ ದೊಡ್ಡಮನೆ ಶಾಮನೂರು ಸೊಸೆ ಈ ಬಾರಿ .ಕಾಂಗ್ರೆಸ್ ನ ಪ್ರಭಾಮಲ್ಲಿಕಾರ್ಜನ್ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಗರಿಗೆದರಿದೆ.

Leave a Reply

Your email address will not be published. Required fields are marked *

You missed

error: Content is protected !!