ನೂತನ ಸಂಸದರಾಗಿ ಡಾ ಪ್ರಭಾ ಮಲ್ಲಿಕಾರ್ಜುನ ಗೆಲುವು: ಜಗಳೂರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ
By m.rajappa vyasagondanahalli
Published: Tuesday, June 4, 2024,
Editor m rajappa vyasagondanahalli
By shukradeshenews Kannada | online news portal |Kannada news online
ದಾವಣಗೆರೆ ಜೂನ್ 04: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಬಿ ದೇವೇಂದ್ರಪ್ಪರವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ನಂತರ ಶಾಸಕ ಬಿ ದೇವೇಂದ್ರಪ್ಪ ರವರು ಉದ್ದೇಶಿಸಿ ಮಾತನಾಡಿದರು. ನೂತನ ಜಿಲ್ಲಾ ಸಂಸದರಾದ ಡಾ.ಪ್ರಭಾಮಲ್ಲಿಕಾರ್ಜನ್ ಗೆಲುವಿನಿಂದ ಜಗಳೂರು ಅಭಿವೃದ್ಧಿಯಾಗಲಿದೆ ಅವರ ಪತಿ ಜಿಲ್ಲಾ ಉಸ್ತವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ರವರು ಇವರೊಂದಿಗೆ ನಾವು ಕೈಜೋಡಿಸಿ ಕೆಲಸ ಮಾಡುವುದರಿಂದ ಕ್ಷೇತ್ರಕ್ಕೆ ಹೊಸ ಪರ್ವ ಪ್ರಾರಂಭವಾಗಿದೆ.ಜಗಳೂರು ಪಟ್ಟಣದ ಮುಖ್ಯ ರಸ್ತೆ ಶೀಘ್ರವಾಗಿ ಆಗಲಿಕರಣಕ್ಕೆ ಒತ್ತು ನೀಡಲಾಗುವುದು ನಾನು ಯಾರ ಮುಲಾಜಿಗು ಬಗ್ಗುವುದಿಲ್ಲ ಅಭಿವೃದ್ಧಿಗೆ ಕಂಕಣಬದ್ದವಾಗಿದ್ದೆನೆ.ನನ್ನ ಶಾಸಕ ಸ್ಥಾನ ಇಲ್ಲಿಗೆ ಹೋದರು ಪರಾವಾಗಿಲ್ಲ ನಮ್ಮ ಹೋರಾಟ ನ್ಯಾಯುತವಾಗಿದೆ.ಕಳೆದ ಶಾಸಕರುಗಳು ಆಗಲಿಕರಣ ಮಾಡಲು ಹಿಂದೆ ಬಿದ್ದಿದ್ದರು ನಾವು ಅಭಿವೃದ್ಧಿ ಮಾಡಿದ್ದೆವೆ ಎಂದು ಭಾಷಣಗಳಲ್ಲಿ ಹೇಳುವ ಇಬ್ಬರು ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ ಹಾಗೂ ಎಚ್ ಪಿ ರಾಜೇಶ್ ರವರಿಗೆ ಹೇಳಿಕೊಳ್ಳಲು ನೈತಿಕತೆಯಿಲ್ಲ. ನಾನು ಹೇಳಿಕೊಳ್ಳುವ ಶಾಸಕನಲ್ಲ ಮಾಡಿ ತೋರಿಸುವ ಶಾಸಕ ಎಂದು ಗುಡುಗಿದರು. ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ಜನೋಪಯೋಗಿ ಕೆಲಸಗಳನ್ನು ಸಮರ್ಪವಾಗಿ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತ ನಡೆಸುತಾ ಬಂದಿದೆ.
ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಭದ್ರಕೋಟೆ ಛಿದ್ರಮಾಡಿ ಕ್ಷೇತ್ರದ ಮತದಾರರು ಅತ್ಯಂತ ಬಹುಮತಗಳುನ್ನು ಕಾಂಗ್ರೆಸ್ ಪಕ್ಷದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರಿಗೆ ನೀಡಿ ಜನ ಅಶಿರ್ವಾದ ಮಾಡಿದ್ದಾರೆ. ಜಗಳೂರು ಕ್ಷೇತ್ರದಿಂದ ಅತಿ ಹೆಚ್ಚು ಮತ ನೀಡಿ ಗೆಲುವಿಗೆ ಶ್ರಮಿಸಲಾಗಿದೆ. ಮತಾದಾರರ ಋಣ ತೀರಿಸಲು ಕ್ಷೇತ್ರದಲ್ಲಿ ನಮ್ಮ ನೂತನ ಸಂಸದರು ಉತ್ತಮ ಆಡಳಿತ ನಡೆಸುವ ಮೂಲಕ ಜನರ ದ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
.ಜಿಲ್ಲೆಯಲ್ಲಿ ನಮ್ಮ ಪಕ್ಷದವರೆ ಉಸ್ತುವಾರಿ ಸಚಿವರು ಹಾಗೂ ನೂತನ ಸಂಸದರಿಂದ ಉತ್ತಮ ಅಭಿವೃದ್ಧಿ ಕೆಲಸ ಮಾಡಲು ಸಹಕಾರಿಯಾಗಲಿದೆ.
ಜಗಳೂರು ಅತ್ಯಂತ ಬರಪೀಡಿತ ಪ್ರದೇಶವಾಗಿರುವ ಕ್ಷೇತ್ರಕ್ಕೆ 57 ಕೆರೆ ತುಂಬಿಸುವ ಯೋಜನೆ ಮತ್ತು ಅಪ್ಪರ್ ಭದ್ರಾ ನೀರಾವರಿ ಯೋಜನೆಗೆ ಆದ್ಯತೆ ನೀಡಿ ಕ್ಷೇತ್ರದ ಅಭಿವೃದ್ಧಿಯೆ ನಮ್ಮ ಮಂತ್ರವಾಗಲಿದೆ ಎಂದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ಪ್ರಧಾನಕಾರ್ಯಧರ್ಶಿ ಕೀರ್ತಿಕುಮಾರ್. ಮುಖಂಡರಾದ ವಾಲಿಬಾಲ್ ತಿಮ್ಮರೆಡ್ಡಿ. ಮಾಜಿ ತಾಪಂ ಸದಸ್ಯ ಕಲ್ಲೇದೇವರಪುರ ಸಣ್ಣಸೂರಜ್ಜ.ಮುಖಂಡ ಪ್ರಕಾಶರೆಡ್ಡಿ .ಕಾಂಗ್ರೆಸ್ ಎಸ್ಸಿ ಘಟಕ ತಾಲ್ಲೂಕು ಅಧ್ಯಕ್ಷ ಬಿ.ಮಹೇಶ್.ಮಾಜಿ.ಪಪಂ ಅದ್ಯಕ್ಷ ನಾಗೇಂದ್ರರೆಡ್ಡಿ. ಮಾಜಿ ಪಪಂ ಅದ್ಯಕ್ಷ ಮಾಜಿ ಮಂಜಣ್ಣ.ಮುಖಂಡ. ಕೆಚ್ಚೆನಹಳ್ಳಿ ಹರೀಶ್. ಮುಖಂಡರಾದ ಹಟ್ಟಿತಿಪ್ಪೆಸ್ವಾಮಿ.ಅರಿಶಿನಗುಂಡಿ ನಾಗರಾಜ್..ಕೊರಟಿಕೆರೆ ಗುರಸಿದ್ದನಗೌಡ.ಕಾಟಜ್ಜ.ಕುರಿಜೈಯ್ಯಣ್ಣ. ಸೇರಿದಂತೆ ಮುಂತಾದವರು ಹಾಜರಿದ್ದರು.