filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48;

ಜಗಳೂರು ಸುದ್ದಿ:ತಾಲೂಕಿನ ವ್ಯಾಸಗೊಂಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಶಿಕಲಾ ಅವರ ವಯೋನಿವೃತ್ತಿ ಹಿನ್ನೆಲೆ ಸನ್ಮಾನಿಸಿ ಬೀಳ್ಕೊಡಲಾಯಿತು.

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on

Published ಜೂನ್ 5 _2024,
Last Updated ಜೂನ್ 5 .,_2023,
ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಸ.ಕಿ.ಪ್ರಾ. ಪಾಠ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ವಯೋ ನಿವೃತ್ತಿ ಹೊಂದಿದ ಶಶಿಕಲಾ ಅವರನ್ನು ಅಭಿನಂದಿಸಿ ಬಿಳ್ಕೋಡಲಾಯಿತು.

ಈ ವೇಳೆ ಸನ್ಮಾನ ಸ್ವೀಕರಿಸಿ ನಿವೃತ್ತ ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ,ಸರ್ಕಾರಿ ನೌಕರರಿಗೆ ವಯೋನಿವೃತ್ತಿ ಸೇವಾಮನೋಭಾವದ ಉತ್ಸಾಹ,ಬೋಧನೆ,ಕಲಿಕಾಸಕ್ತಿಗೆ ವಿರಾಮನೀಡಿದಂತೆ.ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕಾದದ್ದು ಪ್ರತಿಯೊಬ್ಬ ಸರ್ಕಾರಿ ನೌಕರರ ಆದ್ಯ ಕರ್ತವ್ಯವಾಗಿದೆ.ಗ್ರಾಮದಲ್ಲಿ ಸರ್ಕಾರಿ ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸಿದ ಪ್ರತಿಯೊಬ್ಬ ಪೋಷಕರಿಗೂ ಗ್ರಾಮಸ್ಥರಿಗೂ ಅಭಿನಂದನೆಗಳು.ನನ್ನ ಸೇವಾ ಅವಧಿಯಲ್ಲಿ ನೂರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರಬುನಾದಿ ಹಾಕಿದ ನೆಮ್ಮದಿ ನನಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಈ ವೇಳೆ ಸಿ ಆರ್ ಪಿ ಮಂಜಣ್ಣ ಮಾತನಾಡಿ , ಮುಖ್ಯ ಶಿಕ್ಷಕಿ ಶಶಿಕಲಾ ಮೆಡಮ್ ರವರು .
‘ಶಾಲೆಯ ಭೌತಿಕ ಸೌಲಭ್ಯಗಳ ಸುಧಾರಣೆ ಮತ್ತು ಕಲಿಕಾ ಪ್ರಗತಿಯಲ್ಲಿ ಮುಖ್ಯ ಶಿಕ್ಷಕರ ಪಾತ್ರ ಅಪಾರ. ಅವರು ಕ್ರಿಯಾಶೀಲತೆಯ ಜೊತೆಗೆ ದಕ್ಷತೆ ಮತ್ತು ಸಾಮರಸ್ಯ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ’ಉತ್ತಮ ಪಾಠ ಪ್ರವಚನ ಗಳೊಂದಿಗೆ ಮಕ್ಕಳ ಬೌದ್ದಿಕ ಬೆಳವಣಿಗೆಗೆ ಕಲಿಕಾ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಶುಕ್ರದೆಸೆ ಪತ್ರಿಕೆ ಸಂಪಾದಕ ಎಂ . ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, ಭವಿಷ್ಯದಲ್ಲಿ ದೇಶದ ನಿರ್ಮಾತೃಗಳು ನಾಲ್ಕು ಗೋಡೆಗಳ ಮಧ್ಯೆ ತಯಾರಾಗುವುದು ಎಂಬುದಕ್ಕೆ ಶಿಕ್ಷಕರು,ಶಾಲೆ ಸಾಕ್ಷೀಕರಿಸುತ್ತವೆ.ಅಂತೆಯೇ ಗ್ರಾಮದ ಪ್ರತಿಯೊಬ್ಬರ ವಿಶ್ವಾಸಕ್ಕೆ ಪಾತ್ರರಾಗಿ ತಮ್ಮ ಸೇವಾ ವೃತ್ತಿಯಿಂದ ನಿವೃತ್ತಿಹೊಂದಿದ ಶಶಿಕಲಾ ಅವರ ನಿವೃತ್ತಿ ಜೀವನ ಸುಖಮಯವಾಗಲಿ.ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆಗೆ ಮುಂಬರುವ ಶಿಕ್ಷಕ ವರ್ಗಕ್ಕೆ ಅವರು ಸ್ಪೂರ್ತಿಯ ಸೆಲೆಯಾಗಲಿ,ಹೊಸದಾಗಿ ನಿಯೋಜನೆಗೊಳ್ಳುವ ಶಿಕ್ಷಕರು ಗುಣಮಟ್ಟದ ಶಿಕ್ಷಣ ಒತ್ತು ನೀಡುವ ಮೂಲಕ ಮಕ್ಕಳ ಹಾಗೂ ಪೋಷಕರ ಮನದಲ್ಲಿ ಮನೆ ಮಾಡಲಿ‌ ಎಂದು ಶುಭಾ ಹಾರೈಸಿದರು.

ಎಸ್ ಡಿ ಎಂಸಿ ಅಧ್ಯಕ್ಷ ಚೌಡೇಶಿ ಮಾತನಾಡಿ ಶಿಕ್ಷಕರಾದ ಶಶಿಕಲಾ ಮೆಡಮ್ ರವರ ವಯೋ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು ಶಿಕ್ಷಣ ಇಲಾಖೆ ಇವರ ಬದಲಿಗೆ ಶೀಘ್ರವಾಗಿ ಉತ್ತಮ ಶಿಕ್ಷಕರುನ್ನು ನಿಯೋಜನೆ ಮಾಡಿ ಮುಂಬರುವ ಶಿಕ್ಷಕರು ಈ ಹಿಂದಿನ ಶಿಕ್ಷಕರ ಆದರ್ಶಗಳುನ್ನು ಆಳವಡಿಸಿಕೊಳ್ಳಲಿ ಎಂದರು.
, ಸಿ ಅರ್ ಪಿ. ಆಂಜನೇಯ ಮಾತನಾಡಿ
‘ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಶಾಲಾ ಎಸ್ ಡಿ ಎಂ.ಸಿ., ಪೋಷಕರು, ಅಧಿಕಾರಿಗಳ ಜೊತೆಗೆ ಉತ್ತಮ ಸಂಪರ್ಕ ಸಾಧಿಸಿ, ಇವೆರೆಲ್ಲರ ಸಹಕಾರ ಪಡೆದು ಶಾಲಾಭಿವೃದ್ಧಿಗೆ ಶ್ರಮಿಸುವುದು ತುಂಬಾ ಸವಾಲಿನ ಕೆಲಸ. ಇದನ್ನು ಸಮರ್ಥವಾಗಿ ನಿರ್ವಹಿಸುವ ಗುಣ ಶಿಕ್ಷಕರಾದ ಶಶಿಕಲಾ ಅವರಿಗಿದೆ’ ಎಂದು ಹೇಳಿದರು.

ದೋಣಿಹಳ್ಳಿ ಕ್ಲಸ್ಟರ್ ಸಿ ಆರ್ ಪಿ.ರಾಜಶೇಖರ್ ಮಾತನಾಡಿ ಶಶಿಕಲಾ ಮೆಡಮ್ ರವರು ಅನುಪಮ ಸೇವಾ ಕಾರ್ಯ ಶ್ಲಾಘನೀಯ ಎಮದರು

ಶಿಕ್ಷಕಿ ಶಕುಂತಲ ಮಾತನಾಡಿ, ಮುಖ್ಯ ಶಿಕ್ಷಕರಾದ ಶಶಿಕಲಾರವರ ಸೇವೆ ಅನನ್ಯ ತೆರೆದ ಮನಸ್ಸಿನಿಂದ, ಪರಸ್ಪರ ನಂಬಿಕೆ ಮತ್ತು ಗೌರವ ಭಾವದಿಂದ ನಮಗೆ ಸ್ನೇಹಿತರಾಗಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಅಂಬುಜಾ.ಶುಭಾ.ಒಬಕ್ಕ.ಚಂದ್ರಮ್ಮ.ಶಾಂತಮ್ಮ.ಸುಧಾಮಣಿ.ಶೈಲಾಜ.ತ್ರಿವೇಣಿ.ಶಕುಂತಲ.ಪಾರ್ವತಿ.ಶಿಕ್ಷಕರಾದ ರವಿಕುಮಾರ್ ನಾಗೇಶಿ.ಎಂ.ಪಿ.ಗಂಗಾಧರ್.ತಿಮ್ಮೇಶ್.ಅತಿಥಿ ಶಿಕ್ಷಕಿ ನಾಗವೇಣಿ .ಆಶಾ ಕಾರ್ಯಕರ್ತೆ ಮಾರಮ್ಮ.ಗ್ರಾಮಸ್ಥರಾದ ಬಾಬಣ್ಣ.ಉಮಾದೇವಿ. ವಿದ್ಯಾರ್ಥಿಗಳು.ಪೋಷಕರು.ಗುರ ವೃಂದದವರು .ಗ್ರಾಮಸ್ಥರು..ವ್ಯಾಸಗೊಂಡನಹಳ್ಳಿ ಮಹಿಳಾ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!