filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಸುದ್ದಿ ಜಗಳೂರು:

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on ಜೂನ್.1೦.

ಪರಿಸರ ನಾಶದಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಪತ್ರಕರ್ತ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಕರವೇ ನಾರಯಣಗೌಡ್ರು ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಮೂಲಕ ಶ್ಲಾಘಿಸಿದರು.

ಪಟ್ಟಣದ ಹೌಸಿಂಗ್ ಬೋರ್ಡ ಬಡಾವಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಇತ್ತೀಚಿನ ದಿನಮಾನಗಳಲ್ಲಿ ಮಾನವನ ಅತಿಯಾದ ಸ್ವಾರ್ಥದಿಂದ ಕಾಡು ಕ್ಷೀಣಿಸುತ್ತಿದೆ.
ಪರಿಸರ ನಾಶದಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ.ಆದ್ದರಿಂದ ಮಾಲಿನ್ಯ ರಹಿತ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರ ಉಳಿವಿಗೆ ಅಧಿಕ ಸಂಖ್ಯೆಯಲ್ಲಿ ಗಿಡ-ಮರಗಳನ್ನು ಬೆಳೆಸಿ. ಉತ್ತಮ ಪರಿಸರವನ್ನು ಉಳಿಸಿ ಬೆಳೆಸಿದಾಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು..

ಕರವೇ ತಾಲ್ಲೂಕು ಅದ್ಯಕ್ಷ ಮಹಾಂತೇಶ್ ಮಾತನಾಡಿ ಪ್ರತಿ ವರ್ಷ ಕರವೇ ರಾಜ್ಯಾದ್ಯಕ್ಷರಾದ ಟಿ.ನಾರಯಣಗೌಡ್ರು ಈ ಕನ್ನಡ ನಾಡು ನುಡಿಗೆ ಹಗಲಿರುಳು ಶ್ರಮಿಸುತ್ತಾ ಬಂದಿದ್ದು ಕನ್ನಡ ಪರ ಹೋರಾಟಗಾರರ ಶ್ರಮ ಆಪಾರ ಅವರ ಹುಟ್ಟು ಹಬ್ಬ ಹಾಗೂ ಜಗಳೂರಿನ ಪತ್ರಕರ್ತರು ಕ.ಸಾ.ಪ ಬಿಳಿಚೋಡು ಘಟಕದ ಅಧ್ಯಕ್ಷರು ಹೋರಾಟಗಾರ ಸ್ನೇಹಿತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ರವರ ಹುಟ್ಟು ಹಬ್ಬದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಒಂದು ವಿಶೇಷ ಎಂದರು

.ಪಪಂ ಸದಸ್ಯ ನವೀನ ಮಾತನಾಡಿದರು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ಮನುಷ್ಯನ ಆದ್ಯಕರ್ತವ್ಯವಾಗಿದ್ದು ಸಂರಕ್ಷಣೆ ಕೇವಲ ಸರ್ಕಾರ, ಅರಣ್ಯ ಇಲಾಖೆ ಕೆಲಸವಷ್ಟೇ ಅಲ್ಲ, ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ.ಎಂದು ಕರೆ ನೀಡಿದರು.

ಕರವೇ ಗೌರವಧ್ಯಕ್ಷ ಸಂಗೋಳ್ಳಿ ಸುರೇಶ್ ಮಾತನಾಡಿ ಉತ್ತಮ ಪರಿಸರದಿಂದ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗಿ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವುದು ಅತ್ಯವಶ್ಯಕವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕರವೇ ಐಟಿ ಘಟಕದ ಅಧ್ಯಕ್ಷ ಲಿಂಗರಾಜ್.ಪ್ರಧಾನ ಕಾರ್ಯಧರ್ಶಿ ಹರ್ಷ .ಗೌರಮ್ಮನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ವೆಂಕಟೇಶ. ಸದಸ್ಯರಾದ ಮುನ್ನ.ಬಂಗಾರಿ ಗುಡ್ಡದ ಶಿವಣ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!