Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜೂನ್ 17
ನನ್ನ ಆಡಳಿತಾವಧಿಯಲ್ಲಿ ಶಾಂತಿ,ಸೌಹಾರ್ದತೆಗೆ ಆದ್ಯತೆ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ
ಜಗಳೂರು ಸುದ್ದಿ:ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಶಾಂತಿ, ಸೌರ್ಹದತೆಗೆ ಆದ್ಯತೆ ನೀಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ನಡೆಸಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಷಯ ಕೋರಿ ಅವರು ಮಾತನಾಡಿದರು.
‘ತ್ಯಾಗ,ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬ ಪವಿತ್ರ ಹಬ್ಬವಾಗಿದ್ದು.ಮೌಲ್ವಿ,ಧರ್ಮಗುರುಗಳು ಬೋಧಿಸುವ ಉಪದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಪ್ರವಾದಿಗಳ ಅನುಗ್ರಹದಿಂದ ಸಕಲ ಜೀವ ರಾಶಿಗಳಿಗೂ ಒಳಿತಾಗಲಿ,ನಾಡಿನಲ್ಲಿ ಉತ್ತಮ ಮಳೆಬೆಳೆಯಾಗಿ ರೈತರ ಬದುಕು ಹಸನಾಗಲಿ’ ಎಂದು ಪ್ರಾರ್ಥಿಸಿದರು.
‘ವೈವಿದ್ಯತೆಯಲ್ಲಿ ಏಕತೆಸಾರುವ ದೇಶದಲ್ಲಿ ಸರ್ವಧರ್ಮೀಯರೂ ಸೌಹಾರ್ದಯುತವಾಗಿ ಸಮೃದ್ದ ಜೀವನಸಾಗಿಸಬೇಕಿದೆ.ಹಬ್ಬ ಹರಿದಿನಗಳು ಶಾಂತಿ,ಸಾಮರಸ್ಯತೆ ಸಾರುವ ಸಂಭ್ರಮಕ್ಕೆ ಸಾಕ್ಷಿಯಾಗಬೇಕು’ ಎಂದು ಹೇಳಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,’ಭಾರತದೇಶ ಬಹುತ್ವದೇಶ.ಇಲ್ಲಿ ಮನುಷತ್ವ ಬಹಳ ದೊಡ್ಡದು.ಸಂವಿಧಾನದಲ್ಲಿ ನಂಬಿಕೆಯಿಟ್ಟು ಪರಸ್ಪರ ಪ್ರೀತಿಸಬೇಕು.ಬಕ್ರೀದ್ ಹಬ್ಬದಲ್ಲಿ ಕುರ್ಬಾನಿ ಹೆಸರಿನಲ್ಲಿ ಮುಸ್ಲಿಂ ಬಾಂಧವರು ಬಡವರೊಂದಿಗೆ ತೋರುವ ಪ್ರೀತಿ, ವಾತ್ಸಲ್ಯ,ಅನ್ಯಧರ್ಮದವರಿಗೆ ಮಾದರಿಯಾಗಿದ್ದಾರೆ.ಎಲ್ಲಾ ಧರ್ಮೀಯರನ್ನು ಗೌರವಿಸುವ ಸಹಿಷ್ಣತೆಯ ಮನೋಭಾವ, ಪ್ರತಿಯೊಬ್ಬರಲ್ಲಿ ಮೂಡಬೇಕು’ ಎಂದು ಮನವಿಮಾಡಿದರು.
ಇದೇ ವೇಳೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯ ಬಳಿಕ ಓರೆಗೆಯವರನ್ನು ಆಲಂಗಿಸಿ ಶುಭಾಷಯಗಳನ್ನು ವಿನಿಮಯಮಾಡಿಕೊಂಡರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಇಕ್ಬಾಲ್ ಅಹಮ್ಮದ್,ಖಲಂದರ್ ಖಾನ್,ಶಕೀಲ್ ಅಹಮ್ಮದ್,ಪಲ್ಲಾಗಟ್ಟೆ ಶೇಖರಪ್ಪ,ಬಿ.ಮಹೇಶ್ವರಪ್ಪ,ಎ.ಎಲ್.ತಿಪ್ಪೇಸ್ವಾಮಿ,ಸೇರಿದಂತೆ ಮುಸ್ಲಿಂಬಾಂಧವರು ಪಾಲ್ಗೊಂಡಿದ್ದರು.