Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜೂನ್ 18

ಶಿಕ್ಷಣದಿಂದ ದೇಶದ ಪ್ರಗತಿ ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಉತ್ತಮ ಸ್ಥಾನ ಪಡೆಯಲು ಸಾಧ್ಯ .ಸ್ವಾತಂತ್ರ್ಯ ಪೂರ್ವದಿಂದಲ್ಲೂ ತೋರಣಗಟ್ಟೆ ಗ್ರಾಮ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದೆ . ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಿ.ಕೆ ಶಿವಕುಮಾರ್ ಶ್ಲಾಘನೀಯ

ಜಗಳೂರು ಸುದ್ದಿ:-
ತಾಲ್ಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಂಗಳದಲ್ಲಿ
1991-92 ನೇ ಸಾಲಿನ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳು ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳ ಗೌರವ ಆತಿಥ್ಯ ಸ್ವೀಕರಿಸಿ ನಂತರ ನಿವೃತ್ತ ಜಂಟಿ ನಿರ್ದೇಶಕ ಡಿ.ಕೆ ಶಿವಕುಮಾರ್ ಮಾತನಾಡಿದರು

ತಾಲ್ಲೂಕಿನಲ್ಲಿಯೆ ತೋರಣಗಟ್ಟೆ ಗ್ರಾಮ ಅತಿ ಹೆಚ್ಚು ಸರ್ಕಾರಿ‌ ನೌಕರರುನ್ನು ಹೊಂದಿರುವ ಮಾದರಿ ಗ್ರಾಮವಾಗಿದ್ದು ಗ್ರಾಮದಲ್ಲಿ ನಮ್ಮ ಪೂರ್ವಜರು ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರಿಂದ ನಮ್ಮಂತ ಅಧಿಕಾರಿಗಳು ಉನ್ನತ ಸ್ಥಾನ ಪಡೆಯಲು ಸಹಕಾರಿಯಾಗಿದೆ.

ನಾನು ಬಾಲ್ಯದಲ್ಲಿ ಗ್ರಾಮದ ಇದೆ ಸರ್ಕಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿದರ ಪ್ರತಿಫಲವಾಗಿ ನಮ್ಮಂತ ಸಾಮಾನ್ಯ ಬಡ ಕುಟುಂಬದ ವರ್ಗದವರು ಉನ್ನತ ಅಧಿಕಾರಿಯಾಗಲು ಸಾಧ್ಯವಾಗಿದೆ. ಶಿಕ್ಷಣದಿಂದ ಎಲ್ಲಾ ಹಕ್ಕುಗಳುನ್ನು ಪಡೆದು ಸಮಾಜದಲ್ಲಿ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತ್ಯಂತ ಸಹಕಾರಿಯಾಗಿದೆ .ವಿಧ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನ ವ್ಯಯ ಮಾಡದೇ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಗಳಿಸಿಕೊಳ್ಳಿ ಎಂದು ಸಲಹೇ ನೀಡಿದರು.ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ತೋರಣಗಟ್ಟೆ ಗ್ರಾಮಕ್ಕೆ ತನ್ನದೆಯಾದ ಇತಿಹಾಸ ಪರಂಪರೆಯಿದೆ ತೋರಣಗಟ್ಟೆ ಎಂದು ಹೆಸರು ಬರಲು ತೋಳಗಳು ಹೆಚ್ಚಾಗಿ ಅಂದು ಕುರಿಗಳನ್ನು ಹೊತ್ತಯ್ಯುಲು ಬರುತ್ತಿದ್ದರಿಂದ ತೋರಣಗಟ್ಟೆ ಎಂಬುದಾಗಿ ಬಂದಿದೆ ಎಂದು ನಮ್ಮ ಹಿರಿಯರು ಹೇಳಿದುಂಟು ಒಟ್ಟಾರೆ ಗ್ರಾಮದ ಇತಿಹಾಸ ಮತ್ತು ಅಭಿವೃದ್ಧಿಗೆ ಯುವಕರು ಒತ್ತು ನೀಡುವಂತೆ ಸಲಹೇ ನೀಡಿದರು. ಕಳೆದ ದಿನಮಾನಗಳಲ್ಲಿ ನಾನು ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುವೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರುಗಳಾದ ಎಚ್ ರಾಮಲಿಂಗಪ್ಪ ವಿ.ಜಿ ಹಾಲಪ್ಪ ಶಾರದಮ್ಮ ಪ್ರಾಥಮಿಕ ಶಾಲಾ ಶಿಕ್ಷಕರುಗಳಾದ ಖಾದರ್ ಸಾಹೇಬ್ ಬಿ ಎಚ್ ರೇವಣಸಿದ್ದಪ್ಪ ಎಂಬಿ ವೀರಣ್ಣ. ಕಲ್ಲಪ್ಪ . ನಿರ್ವಹಣೆ ಕೆ ನಾಗೇಶ್ ಶಿಕ್ಷಕರು ನಿರ್ವಹಿಸಿದರು ದೇವರಾಜ್ ಜೆ ಎಸ್
ವಿರೇಶ್ ಕೆ ಬಿ ಶಿಕ್ಷಕರು ಸರಸ್ವತಿ ಶಿಕ್ಷಕರು ಎಂ.ಎಚ್ .ದೇವರಾಜ ಸೈನಿಕರು ಅನಿಸಿಕೆಗಳನ್ನು ಹಂಚಿಕೊಂಡರು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!