ಕ್ರೈಂ ನ್ಯೂಸ್

ಚಿಕ್ಕಮ್ಮನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ವಿವಾಹಿತ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನ ಕೊಲೆ ಪ್ರಯತ್ನ ಆರೋಪಿ ಕಾಟೇಶ್ ಇದೀಗ ಪೊಲೀಸ್ ರ ಅತಿಥಿ

ಸುದ್ದಿ ಜಗಳೂರು
Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on june 21

ತಾಲೂಕಿನ ‌ಚಿಕ್ಕಮ್ಮನಹಟ್ಟಿ ಗ್ರಾಮದ ವಿವಾಹಿತ ಮಹಿಳೆ (ಹೆಸರು ಬದಲಾಯಿಸಲಾಗಿದೆ) ಸುಶ್ಮಿತಾ ಎಂಬುವವರ ಮೇಲೆ ಕಾಮುಕನೊಬ್ಬ ಅತ್ಯಾಚಾರ ಮಾಡಲು ಪ್ರಯತ್ನಿಸಿ ಮಹಿಳೆ ಮೇಲೆ ಚಾಕುವಿನಿಂದ ಇರಿದು ಕೊಲೆ ಪ್ರಯತ್ನ ನಡೆಸಿದ ಆರೋಪಿ ಅದೇ ಗ್ರಾಮದ ಕಾಮುಕ ಕಾಟೇಶ್ ಎಂಬ ವ್ಯಕ್ತಿ ವಿವಾಹಿತ ಮಹಿಳೆ ಮೇಲೆ ಏಕಾ ಏಕಿ ಅತ್ಯಾಚಾರಕ್ಕೆ ಯತ್ನ ನಡೆಸಿ ಕೊಲೆ ಪ್ರಯತ್ನ ನಡೆಸಿರುವ ಘಟನೆ ಜರುಗಿದೆ . ಮಹಿಳೆ ಮೇಲೆ ವ್ಯಕ್ತಿ ಏಕಾ ಏಕಿ ಕೊಲೆ ಮಾಡಲು ಯತ್ನಿಸಿದ ವ್ಯಕ್ತಿ ವಿರುದ್ದ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಆರೋಪಿ ಇದೀಗ ಪೊಲೀಸ್ ರ ಅತಿಥಿಯಾಗಿದ್ದಾನೆ.

ದಿ -20.06.2024 ರಂದು ಸಂಜೆ ಸುಮಾರು 5.00 ಗಂಟೆ ಸಮಯದಲ್ಲಿ ಚಿಕ್ಕಮ್ಮನಹಟ್ಟಿ ಗ್ರಾಮದ ತನ್ನ ತಾಯಿ ಮನೆಯಲ್ಲಿ ಮಹಿಳೆ ಮಗುವಿಗೆ ಹಾಲು ಕುಡಿಸುತ್ತಿದ್ದಾಗ ಗ್ರಾಮದ ಆರೋಪಿ ಕಾಟೇಶ ಎಂಬ ವ್ಯಕ್ತಿ ಏಕಾ ಏಕಿ ಮಹಿಳೆ ಮನೆಗೆ ನುಗ್ಗಿ ತನ್ನ ಜೊತೆ ನೀನು ಅಕ್ರಮ ಸಂಬಂಧ ಇಟ್ಟುಕೋ ಅಂತ ಅವಾಚ್ಯ ಶಬ್ದಗಳಿಂದ ಆಕೆಯನ್ನು ಹಿಡಿದು ಎಳೆದಾಡಿ ನನ್ನ ಜೊತೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದು ಮಹಿಳೆ ಒಪ್ಪದಿದ್ದಾಗ ಕಾಟೇಶಿಯು ತನ್ನ ಬಳಿ ಇದ್ದ ಚಾಕು ತೆಗೆದುಕೊಂಡು ವಿವಾಹಿತ ಮಹಿಳೆಯ ಗಂಟಲಿಗೆ,ಕುತ್ತಿಗೆಯ ಹಿಂಭಾಗ, ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಮಹಿಳೆ ಗಾಬರಿಗೊಂಡು ಕಿರುಚಿಕೊಂಡಾಗ ಗ್ರಾಮದ ಮನೆಯ ಅಕ್ಕ-ಪಕ್ಕದ ವಾಸಿಗಳು ಅಲ್ಲಿಗೆ ಬಂದು ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ತನ್ನ ಅಕ್ರಮ ಸಂಬಂಧಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನಿಸಿರುವ ಕಾಟೇಶನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಮಹಿಳೆ ಹೇಳಿಕೆ ದೂರಿನ ನೀಡಿರುವ ಹಿನ್ನೆಲೆಯಲ್ಲಿ ಜಗಳೂರು ಪೊಲೀಸ್ ಠಾಣೆ
ಪಿ ಎಸ್ ಐ ಎಸ್.ಡಿ.ಸಾಗರ. ಸ್ಥಳಕ್ಕೆ ಆಗಮಿಸಿ ದೂರು ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

Leave a Reply

Your email address will not be published. Required fields are marked *

You missed

error: Content is protected !!