ಕೊಗ್ಗ ನೂರು ಗ್ರಾಮದ ರೈತರಿಂದ ಮಳೆಗಾಗಿ ದೇವರುಗಳಿಗೆ ನೀರಿನ ಅಭಿಷೇಕ ಮಾಡಿ ಪ್ರಾರ್ಥನೆ
————————————- ದಾವಣಗೆರೆ ಜೂನ್ 22
ರೈತರು ಬಿತ್ತನೆ ಮಾಡಿ 15 ದಿನಗಳಾದರೂ ಮಳೆ ಬರದೇ ಬೆಳೆಗಳು ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದು ತಲುಪಿದ್ದು, ಬಿತ್ತನೆಗಾಗಿ ಮಾಡಿದ ಗೊಬ್ಬರ ಬೀಜದ ವೆಚ್ಚ, ಮಾಡಿ ತಲೆ ಮೇಲೆ ಕೈಹೊತ್ತು ಕೊಳ್ಳುವ,
ಮಾಡಿದ ಸಾಲವನ್ನು ತೀರಿಸಲು ಕಡೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ.
ದೇವರು ತಮ್ಮ ಪರಿಸ್ಥಿತಿಯನ್ನು ಅರಿತು ಕಣ್ಬಿಟ್ಟು ನೋಡಿ ಭೂಮಿಗೆ ಮಳೆ ತರಿಸಲೆಂದು ಗ್ರಾಮದ ಪ್ರಮುಖ ದೇವತೆಗಳಿಗೆ ಕೊಡಪಾನಗಳಲ್ಲಿ ನೀರನ್ನ ಅಭಿಷೇಕ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಕೊಗ್ಗನೂರು ಗ್ರಾಮದಲ್ಲಿ ಯುವಕರು, ರೈತರು ಗ್ರಾಮದಲ್ಲಿರುವ ಶ್ರೀ ಆಂಜನೇಯ, ಬೀರಲಿಂಗೇಶ್ವರ ದುರ್ಗಾಂಬಿಕಾ ದೇವಿ, ಕರಗಲ್ಲ, ದುಂಡಿದುರ್ಗಮ್ಮ, ದೇವರುಗಳಿಗೆ, ನೀರು ಹಾಕುವುದರ ಮುಖಾಂತರ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು,
ಗ್ರಾಮದ ರೈತರಾದ ಕೆ ಹನುಮಂತ, ಆಕಾಶ್ ಕೆಪಿ, ಸಿದ್ದೇಶ್ ಎಂ, ದರ್ಶನ್ ಎಂ, ಶಿವು ಆರ್, ಗ್ರಾಮದ ಹಿರಿಯರು ಮುಖಂಡರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.