7 ನೇ ವೇತನ ಜಾರಿಗಾಗಿ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಮನವಿ.
ಜಗಳೂರು ಸುದ್ದಿ:ಪಟ್ಟಣದ ಶಾಸಕರ ನಿವಾಸದ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮಿತಿವತಿಯಿಂದ ಶಾಸಕ.ಬಿ.ದೇವೇಂದ್ರಪ್ಪ ಹಾಗೂ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಶಾಖೆ ಅಧ್ಯಕ್ಷ ಸಿ.ಬಿ.ನಾಗರಾಜ್ ಮಾತನಾಡಿ,ರಾಜ್ಯದ 7 ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರಿ ಆದೇಶ ಹೊರಡಿಸಬೇಕು.ವರದಿ ಅನುಷ್ಠಾನಗೊಳಿಸಲು ತೆಗೆದುಕೊಂಡ ಅವಧಿ ಮೀರಿದ್ದು ವಿಳಂಬವಾಗಿದೆ.ಹಾಗೂ ಎನ್ ಪಿ ಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು.ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ ಎಸ್ ) ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಮನವಿ ಸ್ವೀಕರಿಸಿ ನಂತರ ಪ್ರತಿಕ್ರಿಯಿಸಿ,’ನಾನು ಒಬ್ಬ ಪಿಂಚಣಿ ಫಲಾನುಭವಿಯಾಗಿದ್ದು.ರಾಜ್ಯದಲ್ಲಿ ನಮ್ಮದೇ ಪಕ್ಷ ಆಡಳಿತದಲ್ಲಿದ್ದು ಅಂತೆಯೇ ನನ್ನ ಆಡಳಿತಾವಧಿಯಲ್ಲಿ 7 ನೇ ವೇತನ ಜಾರಿಗೊಂಡರೆ ನಿಜಕ್ಕೂ ನನಗೂ ಲಾಭ ಮತ್ತು ಸಂತಸ ತರುತ್ತದೆ.ಅಧಿವೇಶನದಲ್ಲಿ ನಾನು ನಿಮ್ಮ ಬೇಡಿಕೆಯ ಧ್ವನಿಯಾಗುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ,’ನಾನೊಬ್ಬ ಸರ್ಕಾರಿ ನೌಕರನಾಗಿ ಸೇವೆಸಲ್ಲಿಸುತ್ತಿರುವೆ.ನಿಜಕ್ಕೂ 7 ನೇ ವೇತನಹಾಗೂ ಓಪಿಎಸ್,ಆರೋಗ್ಯ ಸಂಜೀವಿನಿ ಸೌಲಭ್ಯ ಅವಶ್ಯಕತೆಯಿದೆ.ಸರ್ಕಾರಕ್ಕೆ ಕೂಡಲೇ ತಮ್ಮ ಮನವಿಯನ್ನು ರವಾನಿಸಲಾಗುವುದು’ ಎಂದು ಭರವಸೆ ನೀಡಿದರು.
ಸಂದರ್ಭದಲ್ಲಿ ಸರ್ಕಾರಿ ಪತ್ತಿನ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಎನ್.ಚಂದ್ರಪ್ಪ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತು ಸದಸ್ಯ ಬಣಕಾರ್,ಡಿ.ಎಸ್.ತಾಲೂಕು ಪ್ರಧಾನ ಕಾರ್ಯದರ್ಶಿ ಎ.ಎಲ್.ತಿಪ್ಪೇಸ್ವಾಮಿ,ಖಜಾಂಚಿ ಮಾರಪ್ಪ,ನಿರ್ದೇಶಕರಾದ ವೀರೇಶ್,ತಿರುಮಲೇಶ್,ಬಸವರಾಜ್,ಬಿ.ಮಹೇಶ್ವರಪ್ಪ,ಸತೀಶ್ ,ಹನುಮಂತೇಶ್,ಕೃಷ್ಣಪ್ಪ,ಸೇರಿದಂತೆ ಇದ್ದರು.