ಜು.13 ರಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.
ಜಗಳೂರು ಸುದ್ದಿ:ಪಟ್ಟಣದ ವಾಲ್ಮೀಕಿ ಭವನದಲ್ಲಿ ಜುಲೈ 13 ನೇ ಶನಿವಾರದಂದು ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ಪದವೀಧರ ಘಟಕದ ರಾಜ್ಯ ಉಪಾಧ್ಯಕ್ಷೆ ಜಯಲಕ್ಷ್ಮಿ.ಎಂ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಎಂ.ಬಸವರಾಜ್ ಪಡುಕೋಟೆ ನೆರವೇರಿಸಲಿದ್ದು. ಜಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,ಎಚ್.ಪಿ.ರಾಜೇಶ್,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಜಿ.ಪಂ ಮಾಜಿ ಸದಸ್ಯೆ ಸವಿತಾಕಲ್ಲೇಶಪ್ಪ,ಬಸವಾಪುರ ರವಿಚಂದ್ರ,ಸೇರಿದಂತೆ ಗಣ್ಯರು,ಅಧಿಕಾರಿಗಳು,ಹಾಗೂ ತಾಲೂಕಿನ ರೈತಪರ,ಕನ್ನಡಪರ,ದಲಿತಪರ,ವಿದ್ಯಾರ್ಥಿ,ಕಾರ್ಮಿಕ,ಮಹಿಳಾ ಸಂಘಟನೆಗಳ ಪದಾಧಿಕಾರಿಗಳು,ಕನ್ನಡ ಧಾರಾವಾಹಿ.ನಟ. ನಟಿಯರು ಭಾಗವಹಿಸಲಿದ್ದಾರೆ.ಕನ್ನಡ ನಾಡು ನುಡಿ ಸಂಸ್ಕೃತಿ ರಕ್ಷಣೆಗಾಗಿ ಸರ್ವರೂ ಸಂಘಟನೆಗೆ ಕೈಜೋಡಿಸಿ ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿಮಾಡಿದರು.
ಸಂದರ್ಭದಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಸುಜಾತ ಎಸ್.ನಮ್ಮ ಕರ್ನಾಟಕ ಸೇನೆ.,ಜಿಲ್ಲಾಧ್ಯಕ್ಷೆ ಮಂಜುಳಾ,ಅಬ್ದುಲ್ ಶಾಖಾದ್ರಿ ಇದ್ದರು.ರಾಜು ಸೇರಿದಂತೆ ಹಾಜುರಿದ್ದರು