filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

₹65 ಲಕ್ಷ ವೆಚ್ಚದಲ್ಲಿ ವಸತಿಗೃಹ ಕಟ್ಟಡಗಳ ದುರಸ್ಥಿ:ಸಚಿವ ದಿನೇಶ್ ಗುಂಡುರಾವ್

ಜಗಳೂರು ಸುದ್ದಿ:₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಇಲಾಖೆ ವಸತಿಗೃಹ ಕಟ್ಟಡ ಅಭಿವೃದ್ದಿಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಪಟ್ಟಣದ ತಾಲೂಕು ಸಾರ್ವಜನಿಕ‌‌‌ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ದಾವಣಗೆರೆ ನಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದು.ಶಾಸಕ ಬಿ.ದೇವೇಂದ್ರಪ್ಪ ಅವರ ಮನವಿಗೆ ಸ್ಪಂದಿಸಿ ಜಗಳೂರು ಆಸ್ಪತ್ರೆ ಸ್ಥಿತಿಗತಿ ಪರಿಶೀಲಿಸಲು ಭೇಟಿ ನೀಡಿರುವೆ ಎಂದು ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಕಛೇರಿ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ.ದುರಸ್ಥಿಗೆ ಕ್ರಮಕೈಗೊಳ್ಳಲು ಹಾಗೂ 6ಜನ ವೈದ್ಯರ ಕೊರತೆಯಿದ್ದು ಹೊರಗುತ್ತಿಗೆ ಆಧಾರದಮೇಲೆ ಆದ್ಯತೆ ಮೇರೆಗೆ ನೇಮಕಾತಿಗೆ ಆದೇಶ ಹೊರಡಿಸಲಾಗುವುದು.ಅಂತೆಯೇ ಇದೀಗ ಆರೋಗ್ಯ ಇಲಾಖೆ ಆಯುಕ್ತರು,ಇಂಜಿನಿಯರ್ ಗೆ ಶಾಸಕರ ಹಾಗೂ ಉಪಸಮಿತಿ ನೇತೃತ್ವದಲ್ಲಿ ಟೆಂಡರ್ ಕರೆಯಲಾಗುವುದು.ದುರಸ್ಥಿ ಕಾಮಗಾರಿ ಪೂರ್ಣಗೊಂಡ ನಂತರ ಟಿಎಚ್ ಓ ಕಛೇರಿಯನ್ನು ವಸತಿ ಗೃಹಕ್ಕೆ ಸ್ಥಳಾಂತರಿಸಿ ನಂತರ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೊಸ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಕ್ರಮಕೈಗೊಳ್ಳಲಾವುದು.ಹಾಗೂ 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು.ಜಿಲ್ಲೆಯಲ್ಲಿ‌30 ಉಪಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.ತಾಲೂಕಿನ ಆಸ್ಪತ್ರೆ ಅಭಿವೃದ್ದಿಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದರು.

ಶಾಸಕ.ಬಿ.ದೇವೇಂದ್ರಪ್ಪ ಮಾತನಾಡಿ,ನನ್ನ ಒತ್ತಡಕ್ಕೆ ಸ್ಪಂದಿಸಿ ಆಗಮಿಸಿರುವ ಆರೋಗ್ಯ ಸಚಿವರಿಗೆ ಅಭಿನಂದನೆಗಳು. ಸಚಿವರ. ಸಹಕಾರದಿಂದ ತಾಲೂಕಿನಲ್ಲಿ ನಾನು ಆರೋಗ್ಯ ಕ್ಷೇತ್ರಕ್ಕೆ‌ ಮೊದಲ ಆದ್ಯತೆ ನೀಡುವೆ ಎಂದರು.

ಸಂದರ್ಭದಲ್ಲಿ ಜಿಲ್ಲಾ ಡಿ ಎಚ್ ಓ .ಷಣ್ಮುಖಪ್ಪ.. ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಕೆಪಿಸಿಸಿ‌ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ‌ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್.ಕಾಂಗ್ರೆಸ್ ಮುಖಂಡ ಪಿ ಎಸ್ ಸುರೇಶ್ ಗೌಡ್ರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್
ಮಂಜುನಾಥ್,ಮುಖಂಡರಾದ ಸುರೇಶ್ ಗೌಡ,ಮಹೇಶ್ವರಪ್ಪ,ತಿಮ್ಮಣ್ಣ.ಟಿ ಎಚ್ ಓ ವಿಶ್ವನಾಥ. . ,ಸೇರಿದಂತೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!