filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಮುಂದಿನ ಶೈಕ್ಷಣಿಕ ವರ್ಷಕ್ಕೆ ವಸತಿ ನಿಲಯ ಪೂರ್ಣಗೊಳಿಸಿ
ಜಗಳೂರು; ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ವಸತಿ ನಿಲಯ ಕಟ್ಟಡ ಪೂರ್ಣಗೊಳಿಸಬೇಕು ಎಂದು ಶಾಸಕ ಬಿ ದೇವೇಂದ್ರಪ್ಪ ತಿಳಿಸಿದರು.

ಶನಿವಾರ ಜಗಳೂರು ಪಟ್ಟಣದಲ್ಲಿ ಎಸ್ ಎಸ್ ಲೇಔಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಕಟ್ಟಡ ನಿರ್ಮಾಣ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.

ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವು ಕೇಂದ್ರ ಹಾಗೂ ರಾಜ್ಯ ಸರ್ಕಾರದಡ್ಡಿಯಲ್ಲಿ ಡಾ ಬಾಬು ಜಗಜೀವನ್ ರಾಂ ಛತ್ರನಿವಾಸ್ ಯೋಜನೆಯಲ್ಲಿ 4 ಕೋಟಿ 33 ಲಕ್ಷಗಳಲ್ಲಿ ಕಾಮಗಾರಿ ನಡೆಯಲಿದ್ದು ಅಪ್ಪಾಜಿ ಬಿಲಡರ್ಸ್ ಬೆಂಗಳೂರು ಇವರು ಮುಂದಿನ ವರ್ಷಕ್ಕೆ ವಸತಿ ನಿಲಯ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಅಲ್ಲದೆ ಶೀಘ್ರವೇ ಕಟ್ಟಡ ನಿರ್ಮಾಣ ಮಾಡಬೇಕೆಂದು ಕಳಪೆ ಕಾಮಗಾರಿ ಮಾಡದೆ ಗುಣಮಟ್ಟ ಕಟ್ಟಡವನ್ನು ಇಲಾಖೆ ನೀಡಬೇಕೆಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಹಲವು ಸಮಸ್ಯೆಗಳು ಇರುವುದು ಪತ್ರಕರ್ತರು ಗಮನಕ್ಕೆ ತಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸರಿಯಾಗಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬೇಕು ಅಲ್ಲದೇ ವಿದ್ಯಾರ್ಥಿಗಳಿಗೆ ಉತ್ತಮ ಊಟ ತಿಂಡಿ ಹಾಗೂ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಸೂಚಿಸಿದರು.



ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಗೆ ಕ್ಲಾಸ್;
ಸಮಾಜ ಕಲ್ಯಾಣ ಇಲಾಖೆಯಲ್ಲಿ ಫ.ಗು ಹಳ್ಳಕಟ್ಟಿಯ ಜಯಂತಿಯನ್ನು ಇಲಾಖೆಯಲ್ಲಿ ಆಚರಿಸಿಲ್ಲ ಎಂದು ಹಲವರು ಮಾಹಿತಿ ನೀಡಿದಾಗ, ಶಾಸಕರು ಏನಾಪ್ಪ ನೀನು, ಎಲ್ಲಿಂದ ಬಂದಿದ್ದಿಯಾ, ಎಷ್ಟು ದಿನ ಆಯ್ತು ಬಂದು, ಇಲ್ಲಿಗೆ ಬಂದು ಎಂದು ಮುಂದೆ ಕರೆದು ಫ.ಗು ಹಳ್ಳಕಟ್ಟಿ ಬಗ್ಗೆ ಏನು ಗೊತ್ತಿದೆ ಎಂದು ಕೇಳಿದಾಗ ಮಂಜುನಾಥ್ ತಡಬಡಿಸಿ, ಅವರ ಬಗ್ಗೆ ಗೊತ್ತಿಲ್ಲ ಸರ್ ಮುಂದೆ ತಿಳಿದುಕೊಳ್ಳುತ್ತಿನಿ ಎಂದು ಪ್ರತಿಕ್ರಿಯಿಸಿದಾಗ, ಇಂತಹ ಮಹಾನ್ ವ್ಯಕ್ತಿಯ ಕುರಿತು ತಿಳಿದಿಲ್ಲ ಎಂದು ಹೇಳುತ್ತಿರಾ ಅಲ್ವಾ, ನೀವು ಹೇಗೆ ಸಂದರ್ಶನದಲ್ಲಿ ಉತ್ತೀರ್ಣರಾಗಿ ಕೆಲಸಕ್ಕೆ ಸೇರಿದ್ದೀರಿ ಮುಂದೆ ಇತಂಹ ವ್ಯಕ್ತಿಗಳ ಜಯಂತಿ ಆಚರಣೆ ಮಾಡದೆ ಅಗೌರವ ತೋರಿದರೆ ಸರಿಇರೋಲ್ಲ ಎಂದು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರಮೇಶ್ ಸಮಾಜಕಲ್ಯಾಣ ಇಲಾಖೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಡಿಡಿ ನಾಗರಾಜ್, ಪಪಂ ಮುಖ್ಯಾಧಿಕಾರಿ ಲೋಕನ್ಯಾಯ್ಕ್, ಮಹೇಶ್ವರಪ್ಪ ನಿಲಯ ಪಾಲಕರಾದ ಮಹಾಬಲೇಶ್, ದೇವೇಂದ್ರಪ್ಪ ಸೇರಿದಂತೆ ಹಲವರಿದ್ದರು.¬¬

Leave a Reply

Your email address will not be published. Required fields are marked *

You missed

error: Content is protected !!