ಕನ್ನಡ ತಾಯಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
ಜಗಳೂರು; ಕನ್ನಡ ತಾಯಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ನಮ್ಮ ಕರ್ನಾಟಕ ಸೇನೆ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

‘ಕನ್ನಡ ನೆಲೆ ಜಲ ಕನ್ನಡ ನುಡಿ, ಕನ್ನಡ ರಕ್ಷಣೆ ಮಾಡುವ ಜವಾಬ್ದಾರಿ ಸಂಘಟನೆ ಮಾತ್ರವಲ್ಲ ಕನ್ನಡ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಕಿವಿ ಮಾತು ಹೇಳಿದರು.

‘ಕನ್ನಡ ಭಾಷೆಗೆ 5 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿವೆ .ಕನ್ನಡ ಭಾಷೆಗೆ ವಿಶಿಷ್ಟವಾದ ಭಾವನೆಗಳಿದೆ ಅನ್ಯ ಭಾಷೆಗಳಿಗಿಂತ ಕನ್ನಡ ಭಾಷೆ ಸುಲಲಿತ, ಅನ್ಯ ಬಾಷೆ ಮೇಲೆ ಪ್ರೀತಿ ಇರಲಿ ವ್ಯಾಮೋಹ ಬೇಡ’ ಎಂದರು.

ತಾಲೂಕಿನಲ್ಲಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಉದಯವಾಗಿದ್ದು, ಸಂಘಟನೆ ಹುಟ್ಟಿ ಹಾಕುವುದು ದೊಡ್ಡದಲ್ಲ, ಸಂಘಟನೆ ಕೊನೆಯವರೆಗೂ ಅಲ್ಲದೆ ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುವಂತೆ ಸಂಘಟನೆ ಮಾಡಿ ಸಂಘದ ಮೂಲಕ ಕನ್ನಡ ರಕ್ಷಣೆ ಮಾಡಬೇಕು.

ಕೆಪಿಸಿಸಿ ಎಸ್ಟಿ ಘಟಕದ ರಾಜಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ,ಕನ್ನಡದ ನೆಲ, ಜಲ ಉಳಿಸುವ ಕೆಲಸಗಳು ಚಿಕ್ಕ ವಯಸ್ಸಿನಲ್ಲಿಯೇ ಮೈಗೊಡಿಸಿಕೊಳ್ಳಬೇಕು ಅಲ್ಲದೇ ಕನ್ನಡವನ್ನು ರಕ್ಷಣೆ ಮಾಡಲು ರಾಜಕೀಯ ವ್ಯಕ್ತಿಗಳು ಮುಂದಾಗುತ್ತಿಲ್ಲ, ಆದರೆ ಇಂತಹ ಸಂಘಟನೆಗಳ ಬೆನ್ನಿಗೆ ನಿಂತು ರಕ್ಷಣೆ ಮಾಡುವ ಕೆಲಸವಾಗಬೇಕು ಎಂದರು.

ನಮ್ಮ ಕರ್ನಾಟಕ ಸೇನೆ ರಾಜಾಧ್ಯಕ್ಷ ಎಂ ಬಸವರಾಜ್ ಪಡುಕೋಟೆ, ಮಾತನಾಡಿ ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ನಮ್ಮ ಕರ್ನಾಟಕ ಸೇನೆ ನಿರಂತರವಾಗಿ ಹೋರಾಟ ನಡೆಸುವ ಮೂಲಕ ರಾಜ್ಯದಲ್ಲಿ ಮುಂಚೂಣಿ ಸಂಘಟನೆಯಾಗಿ ಬೆಳೆಯುತ್ತಿದ್ದು ಕನ್ನಡಕ್ಕಾಗಿ ಪ್ರಾಣ ಬಿಟ್ಟೆವು ಹೊರೆತು ಎಂದಿ ಎಂದಿಗೂ ಕನ್ನಡ ಗಡಿ ಭಾಷೆ ನೆಲ ಜಲ ಬಿಡಲಾರೆವು ಹೋರಾಟ ನಮ್ಮ ಜನ್ಮಸಿದ್ದ ಹಕ್ಕು ನಮ್ಮನ್ನು ಯಾರು ತಡೆಯಲಾರರು ರಾಜ್ಯದಲ್ಲಿ ನಮ್ಮ ಮುಂದೆ ಹಲವು ಸವಾಲುಗಳಿವೆ ಕನ್ನಡಿಗರಿಗೆ ಉದ್ಯೋಗವಿಲ್ಲ ಬಹುರಾಷ್ಟ್ರೀಯ ಕಂಪನಿಗಳು ನಮ್ಮನಾಳುತ್ತಿವೆ.ಇಂತ ಅನೇಕ ಸಮಸ್ಯೆಗಳ ವಿರುದ್ದ ಹೋರಾಟವೆ ನಮ್ಮ ಹಕ್ಕು ಆದ್ದರಿಂದ ನಮ್ಮ ಸೇನೆ ಬೆಳೆಸಲು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪರವರಂತ ಶಾಸಕರು ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದು ನಮಗೆ ಮತ್ತಷ್ಟು ಸ್ಪೂರ್ತಿಯಾಗಿದೆ.ನಾನು ಕನ್ನಡಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತಾ ಬಂದಿದ್ದು ನನ್ನ ಮೇಲೆ ಹಲವು ಪ್ರಕರಗಳಿವೆ ಆದರೂ ನನ್ನ ಆಚಲವಾದ ಸಂಘಟನೆ ಶಕ್ತಿ ಮೂಲಕ ಮುನ್ನುಗ್ಗುವೆ ಎಂದರು.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯ ಉಪಾಧ್ಯಕ್ಷೆ ಹಾಗೂ ಧಾರವಾಹಿ ನಟಿ ಮಾಲತಿ ಶಿವನಾಗ , ರಾಜ್ಯ ಗೌರವಾಧ್ಯಕ್ಷ ಗಣೇಶ್ ರಾವ್, ನಮ್ಮ ಕರ್ನಾಟಕ ಸೇನೆ ರಾಜ್ಯ ಪದವಿದರ ಅದ್ಯಕ್ಷೆ ಜಯಲಕ್ಷ್ಮಿ,ರಾಜ್ಯ ಉಪಾಧ್ಯಕ್ಷೆ ಸುಜಾತ.ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ಮಂಜುಳ ರಾಜ್ಯ ಎಸ್ಸಿ ಎಸ್ಟಿ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ, ಹೆಚ್ ಅರ್ ಬಸವರಾಜ್ .ಮುಖಂಡ.ರಾಜಪ್ಪ‌ ಬುಳ್ಳೆನಹಳ್ಳಿ,ಭೀಮಣ್ಣ ಗಜ್ಜರ್ ಪತ್ರಕರ್ತರು ಹಾಗೂ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ‌.ರಾಜಪ್ಪ ವ್ಯಾಸಗೊಂಡನಹಳ್ಳಿ .ವಿಕಲಚೇತನ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್.,ಪತ್ರಕರ್ತ ಲೋಕೇಶ್ ಐಹೊಳೆ, ,ಮುಖಂಡ ಮಾರುತಿ., ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಹಲವರಿದ್ದರು

Leave a Reply

Your email address will not be published. Required fields are marked *

You missed

error: Content is protected !!