ಅಕ್ಷರ ಅಭ್ಯಾಸದಿಂದ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಎಸ್ ಕೆ ಒ ಎಸ್ ಟಿ ಮೆಮೊರಿಯಲ್ ಶಾಲೆಯ ಸಂಸ್ಥಾಪಕರು ಶ್ರೀಮತಿ ಸೌಭಾಗ್ಯ.
ಜಗಳೂರು :: ಜುಲೈ 12.ಅಕ್ಷರ ಅಭ್ಯಾಸದಿಂದ ಮಕ್ಕಳ ಭವಿಷ್ಯದ ದಿಕ್ಕನ್ನು ಬದಲಾಯಿಸಲು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ಎಸ್ ಕೆ ಓ ಎಸ್ ಟಿ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಸೌಭಾಗ್ಯ ಹೇಳಿದ್ದಾರೆ.
ಶುಕ್ರವಾರ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಎಸ್ ಕೆಒಎಸ್‌ಟಿ ಮೆಮೊರಿಯಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು ಅಕ್ಷರಭ್ಯಾಸದಿಂದ ಮಕ್ಕಳ ಪ್ರಥಮ ಹೆಜ್ಜೆ ಇರಿಸಲು ಅಕ್ಷರದ ಜ್ಞಾನ ಬಹಳ ಮುಖ್ಯವಾದದ್ದು.
ಪ್ರತಿವರ್ಷದಂತೆ ನಮ್ಮ ಶಾಲೆ ಆರಂಭದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮವನ್ನ ಆಚರಣೆ ಮಾಡಲಾಗುತ್ತದೆ
ತಾಯಂದಿರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಪ್ರತಿದಿನ ಮನೆಯಲ್ಲಿ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಪೋಷಕರಿಗೆ ಮನವರಿಕೆ ಮಾಡಿದರು.
ಇದೆ ವೇಳೆ ಮುಖ್ಯ ಶಿಕ್ಷಕಿ ರೇಖಾ ಮಾತನಾಡಿದರು ಅಕ್ಷರಭ್ಯಾಸ ಮಾಡುವುದರಿಂದ ಜ್ಞಾನ ವಿನಯ ಸಮೃದ್ಧಿಯಾಗುತ್ತದೆ.
ಜ್ಞಾನ ದೇಗುಲ ನಮ್ಮ ಈ ಶಾಲೆ ಜ್ಞಾನ ಬೆಳಗಿಸು ಕನಸಿನ ಶಾಲೆ ವಿದ್ಯಾರ್ಥಿಗಳಿಗೆ ಸದ್ಗುಣವನ್ನು ಬೆಳೆಸುವ ಶಾಲೆ ಅಕ್ಷರ ಅಭ್ಯಾಸ ಕಾರ್ಯಕ್ರಮದಿಂದ ಗುರುವಿನಿಂದ ಅರಿವು ಮೂಡಿಸುವ ಶಾಲೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಕೆ ಆರ್ ತಿಪ್ಪೇಸ್ವಾಮಿ. ಮುಖ್ಯ ಅತಿಥಿಗಳಾದ ಬೋರ್ವೆಲ್ ಮಾಲೀಕರಾದ ಪ್ರದೀಪ್, ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಮುಸ್ಟೂರು ಹಾಗೂ ಸುನಿತಾ, ಶಾಲೆಯ ಶಿಕ್ಷಕಿಯರಾದ ನಾಗರತ್ನ, ಶಾಲಿನಿ, ನಾಗವೇಣಿ, ಅಶ್ವಿನಿ ,ನಗೀನಾ, ಶಾಂತಲಾ ಲತಾ, ಭಾಗ್ಯಲಕ್ಷ್ಮಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು