ಆಡಳಿತ ಸರ್ಕಾರಗಳು ಬಂಡವಾಳಶಾಹಿತ್ವ ಪರ ಆಡಳಿತ:ಕೈದಾಳ್ ಮಂಜುನಾಥ್ ಆರೋಪ.
ಜಗಳೂರು ಸುದ್ದಿ:ಆಡಳಿತ ಸರ್ಕಾರಗಳು ಬಂಡವಾಳಶಾಹಿತ್ವದ ಪರವಾಗಿದ್ದು. ಆರೋಗ್ಯ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಕೈದಾಳ್ ಮಂಜುನಾಥ್ ಆರೋಪಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಐಟಿಯುಸಿ ಸಂಯೋಜಿತ ಆಶಾಕಾರ್ಯಕರ್ತೆಯರ ಪ್ರಥಮ ತಾಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷರ ವಿರುದ್ದ ನಡೆಯುತ್ತಿದ್ದ ಹೊರಾಟಗಳೇ ರೂಪಾಂತರವಾಗಿ ಇಂದು ದೇಶದೊಳಗಿನ ಶೋಷಣೆ ವಿರುದ್ದ ಹೊರಾಟ ನಡೆಸಲಾಗುತ್ತಿದೆ.ದೇಶಕ್ಕೆ ಸಂಪತ್ತು ಕ್ರೂಢೀಕರಣಗೊಳಿಸುವ ಶ್ರಮಿಕವರ್ಗವನ್ನು ಒಕ್ಕಲೆಬ್ಬಿಸುತ್ತಿರುವ ಕೇಂದ್ರ ಮತ್ತು ರಾಜ್ಯದಲ್ಲಿನ ಆಡಳಿತ ಸರ್ಕಾರಗಳು ಕಾರ್ಪೋರೇಟರ್ ಗಳ ಕಪಿಮುಷ್ಟಿಯಲ್ಲಿದ್ದು ಅವರ ಅನೈತಿಕ ರಾಜಕಾರಣ ಮಣಿಸಲು ಜನಾಂದೋಲನ ರೂಪಿಸಬೇಕಿದೆ’ಎಂದು ಕರೆ ನೀಡಿದರು.
‘ಎನ್ ಆರ್ ಎಚ್ ಎಂ ನಲ್ಲಿ ಘೋಷಿಸಿದಂತೆ ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತಿಲ್ಲ.ಸಾಂಕ್ರಾಮಿಕ ಮಾರಣಾಂತಿಕ ರೋಗಗಳನ್ನು ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿರುವ ಆಶಾಕಾರ್ಯಕರ್ತೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯಿಲ್ಲ.ಕೇವಲ ಗೌರವ ವೇತನಕ್ಕೆ ಸೇವೆಗೈಯುತ್ತಿದ್ದು ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಎಐಯುಟಿಯುಸಿ ತಾಲೂಕು ಉಸ್ತುವಾರಿ ಮಧು ತೊಗಲೇರಿ ಮಾತನಾಡಿ,ವಿವಿಧ ಇಲಾಖೆಗಳ ಸೇವೆಗೈಯುತ್ತಿರುವ ಆಶಾಕಾರ್ಯಕರ್ತೆಯರಿಗೆ ಕನಿಷ್ಠ ಕೂಲಿಗಾಗಿ ಉಗ್ರ ಸ್ವರೂಪದ ಹೊರಾಟ ಅನಿವಾರ್ಯ.ಇದೀಗ ನೀಡುತ್ತಿರುವ ಗೌರವ ಧನದಿಂದ ಆಶಾ ಕಾರ್ಯಕರ್ತೆಯರ ಮಕ್ಕಳು ಉನ್ನತ ಶಿಕ್ಷಣದಿಂದ ವಿಮುಖಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕುಕ್ಕುವಾಡ,ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಮಂಜುನಾಥ್,ತಾಲೂಕು ಗೌರವಾಧ್ಯಕ್ಷೆ ಲೀಲಾವತಿ,ತಾಲೂಕು ಅಧ್ಯಕ್ಷೆ ತಿಪ್ಪಮ್ಮ,ಕಾರ್ಯದರ್ಶಿ ಎಸ್.ಆರ್.ಇಂದಿರಾ, ಪದಾಧಿಕಾರಿಗಳಾದ ಲೀಲಾವತಿ,ರೀತಾ ,ಸುಮಂಗಲ,ಪದ್ಮ, ಶಿಲ್ಪಾ,ಇಂದಿರಾ,ನೀಲಾ,ಅಂಬಿಕಾ,ಇಂದಿರಾ,ರತ್ನಮ್ಮ,ಸರಸ್ವತಿ,ಗೌರಮ್ಮ,ಈರಮ್ಮ,ಮಂಜುಳಾ,ನಾಗೇಂದ್ರಮ್ಮ,ಮಮತಾ,ಶಶಿಕಲಾ,ಚಾಂದಿನಿ,ಸುಮಾ,ಮಾರಮ್ಮ,ಬಸಮ್ಮ,ಪುಷ್ಪ ಸೇರಿದಂತೆ ಇದ್ದರು.