ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಂಡ ಹಿನ್ನೆಲೆ ಜಗಳೂರಿನಲ್ಲಿ ಸಂಭ್ರಮ
ಜಗಳೂರು ಸುದ್ದಿ
:ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಂಡ ಹಿನ್ನೆಲೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಮ್ಮ ಕರ್ನಾಟಕ ಸೇನೆ ಪದವೀಧರ ಘಟಕ ರಾಜ್ಯ ಉಪಾಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ನಮ್ಮ ಬಹುದಿನದ ಬೇಡಿಕೆಯಾಗಿದ್ದ ‘ಡಾ.ಸರೋಜಿನಿ ಮಹಿಷಿ ವರದಿಯನ್ನ ಸರ್ಕಾರ ಈಗಾಗಲೇ ಸಚಿವ ಸಂಪುಟದಲ್ಲಿ ಜಾರಿ ಮಾಡಿ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ನಿರ್ದಿಷ್ಟ ಶೇಕಡವಾರು ಮೀಸಲಾತಿ ಅವಕಾಶ ದೊರೆಯುವಂತೆ ಆವಕಾಶ ದೊರೆಯುವಂತೆ ಮಿಸಲಾತಿ ಜಾರಿ ಮಾಡಿರುವುದು ಅಭಿನಂದನಾರ್ಹ ಎಂದರು.ಖಾಸಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಎಸ್ ಸಿ ಕೋರ್ಸ್ ಗಳು ಕನ್ನಡಿಗರಿಗೆ ಸುಲಭವಾಗಿ ಅಭ್ಯಾಸ ಮಾಡಲು ಮೀಸಲಾತಿ ಸಿಗಲಿದೆ.ಇದರಿಂದ ಸ್ಥಳೀಯ ಕನ್ನಡಿಗರಿಗೆ ಲಾಭ ದೊರೆಯಲಿದೆ.ಡಾ.ಸರೋಜಿನಿ ಮಹಿಷಿ ಅವರ ನೇತೃತ್ವದ ಸಮಿತಿ 1986 ರಲ್ಲಿ ಸಲ್ಲಿಸಲಾಗಿದ್ದ 24 ಶಿಫಾರಸ್ಸುಗಳ ವರದಿಗೆ ದಶಕಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಕನ್ನಡಿಗರಿಗೆ ನ್ಯಾಯ ಸಿಕ್ಕಿದೆ ಇದು ಸ್ವಾಗತರ್ಹ’ ಎಂದು ಹರ್ಷ ವ್ಯಕ್ತಪಡಿಸಿದರು.
ಕ.ಸಾ.ಪ ಬಿಳಿಚೋಡು ಹೋಬಳಿ ಘಟಕ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,’ರಾಜ್ಯದಲ್ಲಿ ಬಹುರಾಷ್ಟ್ರೀಯ ಕಂಪನಿಗಳು,ಖಾಸಗಿ ಕಂಪನಿಗಳು ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ ಆದರೆ ಪರಭಾಷೆಗಳ ಭಾಷಾ ಸಂವಹನ ಜ್ಞಾನವಿಲ್ಲದ ಕಾರಣ ಎಲ್ಲಾ ಕೌಶಲ್ಯಗಳಿದ್ದರೂ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.ಇದೀಗ ಡಾ. ಸರೋಜಿನಿ ಮಹಿಷಿ ವರದಿ ಜಾರಿಯಿಂದ ಕರ್ನಾಟಕದ ನಿರುದ್ಯೋಗ ಯುವಜನರಿಗೆ ಉದ್ಯೋಗ ಆಕಾಂಕ್ಷಿಗಳ ಬಹುದಿನದ ಕನಸ್ಸು ನನಸಾಗಲಿವೆ’ ಎಂದು ಮಾನ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಹೃದಯ ಪೂರ್ವಕ ಅಭಿನಂದನೆ ತಿಳಿಸಿದರು.
ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಸುಜಾತ,ಜಿಲ್ಲಾಧ್ಯಕ್ಷೆ ಮಂಜುಳಾ,ಮುಖಂಡರಾದ ಕಲ್ಪನಾ,ನೀಲಾ,ಮಾದಿಹಳ್ಳಿ ಮಂಜುನಾಥ್,ಅಬ್ದುಲ್ ಖಾದ್ರಿ,ಚಿಕ್ಕಮ್ಮನಹಟ್ಟಿ ಕಾಟಪ್ಪ,ಸೇರಿದಂತೆ ಇದ್ದರು.