ಸುದ್ದಿ ಜಗಳೂರು

ಕ್ಯಾಸೆನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ನಾಗರತ್ನಮ್ಮ ಅಜ್ಜಪ್ಪ ಉಪಾಧ್ಯಕ್ಷರಾಗಿ ಎಸ್ ಎಂ.ಎರಿತಾತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಘೋಷಿಸಿದ್ದಾರೆ.

Published 1 ಆಗಸ್ಟ್
Last Updated ಆಗಸ್ಟ್ 2024
ತಾಲ್ಲೂಕಿನ: ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಉಪಾದ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆಯಿತು. ಇಂದು ನಡೆದ ಚುನಾವಣೆಯಲ್ಲಿ ನಾಗರತ್ನಮ್ಮ ಅಜ್ಜಪ್ಪ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಎಸ್ ಎಂ ಎರಿತಾತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಈ ಹಿಂದೆ ಅದ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕಾರಣಂತರದಿಂದ ಎರಡು ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರಿಂದ ಅದ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳು ತೆರವಾಗಿದ್ದವು ತೆರವಾದ ಸ್ಥಾನಗಳಿಗೆ ಇಂದು ದಿನಾಂಕ _1_8_2024 ರ ಗುರವಾರದಂದು ನಡೆದ ಚುನಾವಣೆಯಲ್ಲಿ ಅನೂಸೂಚಿತ ಜಾತಿ ಅದ್ಯಕ್ಷ ಮೀಸಲು ಕ್ಷೇತ್ರದ ಕಣದಲ್ಲಿ ನಾಗರತ್ನಮ್ಮ ಅಜ್ಜಪ್ಪರವರು ಒಬ್ಬರೆ ಮಾತ್ರ ನಾಮ ಪತ್ರ ಸಲ್ಲಿಸಿದ್ದರು . ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕು ಸಹ ಯಾವುದೇ ನಾಮ ಪತ್ರ ಸಲ್ಲಿಕೆಯಾಗದ ಕಾರಣ ಸದಸ್ಯರ ಸರ್ವಾನುಮತದಿಂದ ಅಧ್ಯಕ್ಷರಾದ ನಾಗರತ್ನಮ್ಮ ಉಪಾಧ್ಯಕ್ಷರನ್ನಾಗಿ ಎರಿತಾತಪ್ಪರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶ್ ನಾಯ್ಕ್ ಘೋಷಿಸಿದರು.

ಮಾಜಿ ಅಧ್ಯಕ್ಷ ಬಸಮ್ಮ.ಮಾಜಿ ಉಪಾದ್ಯಕ್ಷ ಬಿ. ಹನುಮಂತಪ್ಪ. ಸೇರಿದಂತೆ ಸರ್ವ ಸದಸ್ಯರು ಹಾಜುರಿದ್ದರು. .

ನೂತನ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾಧಿಕಾರಿ ಮಹಾಂತೇಶನಾಯ್ಕ್ ಮಾತನಾಡಿ, ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ‌. ಗುಮಾಸ್ತ ಮಂಜಣ್ಣ . ಸದಸ್ಯರಾದ.ನಾಗರಾಜ.ರತ್ನಮ್ಮ. ಜಿ.ಎನ್ ಸಿದ್ದೇಶ್ವರ್..ಪಾರ್ವತಮ್ಮ.ಮಂಜಮ್ಮ.ಕೆ ಹುಚ್ಚಪ್ಪ.ದಾಕ್ಷಾಯಣಮ್ಮ.ಡಿ ಎಚ್ ಬಸವರಾಜ್ .ರೇಣುಕಮ್ಮ.ಅಂಜಿನಮ್ಮ ನಾಗರಾಜ್.ಪಿ.ಸುಧಾ.ಹನುಮಂತಪ್ಪ. ರೇವಣಸಿದ್ದಪ್ಪ.ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!