“ಒಳಮೀಸಲಾತಿ ರಾಜ್ಯ ಸರ್ಕಾರಗಳಿಗೆ ಅದಿಕಾರ, ಸುಪ್ರೀಂ ಕೋರ್ಟ್ ತೀರ್ಪು” :
ಸ್ವಾಗತಿಸಿ ಲೋಕಿಕೆರೆಯಲ್ಲಿ ದಲಿತ,ಶೋಷಿತರ ಸಂಭ್ರಮಾಚರಣೆ.
ದಾವಣಗೆರೆ ಆ.3 ( ಲೋಕಿಕೆರೆ )
ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ಜನಸಂಖ್ಯಾ ಆಧರಿಸಿ ಎಲ್ಲಾ ಶೋಷಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬಹುದಾಗಿದೆ ಎಂದು ಐತಿಹಾಸಿಕ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ತೀರ್ಪನ್ನು ಸ್ವಾಗತಿಸಿದ ಲೋಕಿಕೆರೆ ಗ್ರಾಮದ ಎಲ್ಲಾ ಸಮುದಾಯದ ಶೋಷಿತ ದಲಿತ ಸಂಘಟನೆಗಳು, ಗ್ರಾಮದ ಪ್ರಮುಖ ವೃತ್ತದಲ್ಲಿ ನೂರಾರು ಜನರು ಸೇರಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಕಾಂಗ್ರೆಸ್ ಸಕಾ೯ರ 2023 ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವರ ಪ್ರಣಾಳಿಕೆಯಲ್ಲಿ ಹೇಳಿದ ಪ್ರಕಾರ ಕೇಂದ್ರವು ಅವಕಾಶ ಕಲ್ಪಿಸಿದರೇ ಒಳಮೀಸಲಾತಿ ಕಲ್ಪಿಸಲು ತಾನು ಸಿದ್ಧ ಎಂದು ಕೇಂದ್ರಕ್ಕೆ ಶಿಫಾರಸ್ಸು ಪತ್ರ ಕಳುಹಿಸಿತು.
*ಆದರೆ ಸುಪ್ರೀo ಕೋರ್ಟ್ ನ ತೀಪಿ೯ನಿoದ ಈಗ ಚೆಂಡು ಮತ್ತೆ ರಾಜ್ಯ ಸಕಾ೯ರದ ಅಂಗಳಕ್ಕೆ ಬಂದು ಬಿದ್ದಿರುವುದರಿಂದ ಸದಾಶಿವ ಆಯೋಗ ಮತ್ತು ಕಾಂತರಾಜು ಆಯೋಗದ ಡಾಟಾಗಳನ್ನಿಟ್ಟುಕೊಂಡು ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ತುತಾ೯ಗಿ ಒಳಮೀಸಲು ಜಾರಿ ಮಾಡಲು ಸಕಾ೯ರ ಮುoದಾಗಬೇಕಿದೆ ಎಂದು ದಲಿತ ಸಂಘದ ಯುವ ಮುಖಂಡ ಬಿಡಿ ಮಂಜುನಾಥ್
ಈ ಸಂದರ್ಭದಲ್ಲಿ ಆಗ್ರಹಪಡಿಸಿದರು.
ಬಾಬಾಸಾಹೇಬರು ನೀಡಿದ ಸಂವಿದಾನ ದಿಂದ ಇಂದು ಶೋಷಿತರು ಘನತೆ ಮತ್ತು ಗೌರವ ದಿಂದ ಬದುಕಲು ಸಾಧ್ಯವಾಗಿದೆ. ಸ್ವಾತಂತ್ರ ಬಂದು ಎಪ್ಪತ್ತೇಳು ವರ್ಷ ಕಳೆದರೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೋಷಿತರಿಗೆ ಇಂದಿಗೂ ಶೇ.2% ಕ್ಕಿಂತ ಹೆಚ್ಚಿನ ಜನರಿಗೆ ಮೀಸಲಾತಿ ಸಿಕ್ಕಿಲ್ಲ. ರಾಜಕೀಯ ವಾಗಿ ಸಿಕ್ಕರೂ ಅದೂ ಉಳ್ಳವರ ಹಾಗೂ ಬಾಯಿ ಕಟ್ಟಿದವರ ಪಾಲಾಗಿದೆ. ಹೀಗಿರ ಬೇಕಾದರೆ ಮೀಸಲಾತಿ ತೆಗೆಯುವ ಸಂಚು ತೆರೆಮರೆಯಲ್ಲಿ ನಡೆಯುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟು ಗಳ ನೇಮಕಾತಿ ಕೊಲೆಜಿಯಂ ಮೂಲಕ ಆಗುತ್ತಿರುವುದರಿಂದ ಅವು ಕೆಲವೇ ಕೆಲವು ಕುಟುಂಬಗಳ ಕಪಿಮುಷ್ಠಿ ಯಲ್ಲಿ ಸಿಲುಕಿವೆ.
ಮೀಸಲಾತಿ ಒದಗಿಸುವ ತೀರ್ಪಿನಲ್ಲಿ ಕ್ರಿಮಿ ಲೇಯರ್ ಅಳವಡಿಸುವ ಬಗ್ಗೆ ಹೇಳಿರುವುದು ದುರದೃಷ್ಟಕರ ದುಃಖಕರ ಖೇದಕರ ವಾಸ್ತವ ಸ್ಥಿತಿ ಗತಿಗಳನ್ನು ಅರಿಯದೆ ವಾಖ್ಯಾನಿಸಲಾಗಿದೆ ಎನ್ನಿಸುತ್ತಿದೆ. ಇದರ ಬಗ್ಗೆ ಸರ್ಕಾರ ಕಾನೂನು ತಜ್ಞರ ಸಲಹೆ ಪಡೆದು ಆ ಮೂಲಕ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ.
ಮೊನ್ನೆ ವಿಧಾನ ಸಭಾ ಅದಿವೇಶನ ದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ರವರು ಸುಪ್ರೀಂ ಕೋರ್ಟ್ ತೀರ್ಪಿನ್ನು ಸ್ವಾಗತಿಸಿ ಒಳಮೀಸಲಾತಿ ಜಾರಿ ಮಾಡುವ ಮೊದಲ ರಾಜ್ಯ ತೆಲಂಗಾಣ ವಾಗಲಿದೆ ಎಂದು ಹೇಳಿ ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಶ್ರೀ ದಾಮೋದರ ರಾಜ ನರಸಿಂಹ, ಮಾಜಿ ಉಪ ಮುಖ್ಯಮಂತ್ರಿಗಳು ಕಾಂಗ್ರೆಸ್ಸ್ ನ ಹಿರಿಯ ನಾಯಕರು ಹಾಗೂ ಹಾಲಿ ತೆಲಂಗಾಣ ರಾಜ್ಯದ ಕ್ಯಾಬಿನೆಟ್ ಸಚಿವರು ಮಾದಿಗ ಸಮಾಜ ಇವರ ಅದ್ಯಕ್ಷತೆ ಯಲ್ಲಿ ಸಮಿತಿಯನ್ನೂ ನೇಮಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಶ್ರೀ ನಾರಾ ಚಂದ್ರಬಾಬು ನಾಯ್ಡು ರವರು ತಮ್ಮ ಅವಧಿಯಲ್ಲೇ ಎಬಿಸಿಡಿ ವರ್ಗೀಕರಣ ಜಾರಿ ಯಾಗಿದ್ದು ಕೆಲವರು ಕೋರ್ಟ್ ಗೆ ಹೋಗಿದ್ದು ದುರದೃಷ್ಟ ಅದರೂ ನ್ಯಾಯಕ್ಕೆ ಜಯ ಸಿಕ್ಕಿದೆ ನಮ್ಮ ಸರ್ಕಾರ ಸಮಾಜಿಕ ನ್ಯಾಯದ ಪರವಾಗಿರುವುದರಿಂದ ಶೀಘ್ರದಲ್ಲಿ ಒಳ ಮೀಸಲಾತಿಯನ್ನು ಆಂಧ್ರ ಪ್ರದೇಶ ದಲ್ಲಿ ಮತ್ತೆ ಜಾರಿಗೆ ತರಲು ಬದ್ದ ರಾಗಿದ್ದೇವೆ ಎಂದು ಘೋಷಿಸಿದ್ದಾರೆ.
ಇನ್ನೂ ಶೋಷಿತರ ಪರ ಇರುವ ಶ್ರೀ ಸಿದ್ಧರಾಮಯ್ಯ ನವರ ಕನಾ೯ಟಕದ ಹಾಲಿ ಸಕಾ೯ರಕ್ಕೆ ಇನ್ಯಾವ ನೆಪಗಳನ್ನೂ ಹೇಳಿ ಕಾಲಹರಣ ಮಾಡಲು ಈಗ ದಾರಿ ಇಲ್ಲದಂತಾಗಿದೆ.
ಕಾನೂನಾತ್ಮಕವಾಗಿ ಎಲ್ಲಾ ದಾರಿ ತೆರದಿವೆ. ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಲೇಬೇಕು ಬೇರೆ ವಿಧಿಯೇ ಇಲ್ಲ.
ಕಾಲಹರಣ ಮಾಡಿದರೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಬರೀ ಓಟು ಬ್ಯಾಂಕ್ ರಾಜಕಾರಣ ಅಂತ ಸ್ಪಷ್ಟವಾಗಿ ಗೋಚರಿಸುತ್ತದೆ.
ದಯವಿಟ್ಟು ಯಾವುದಕ್ಕೂ ಆವಕಾಶ ನೀಡದೆ ತಕ್ಷಣ ಶ್ರೀ ಸಿದ್ಧರಾಮಯ್ಯ ನವರು ಯಥಾವತ್ ಶ್ರೀ ಸದಾಶಿವ ಆಯೋಗದ ವರದಿಯನ್ನು ಸಂಪುಟ ಸಭೆಯಲ್ಲಿ ಜಾರಿಗೆ ಮಾಡಲು ಸಮಗ್ರ ಶೋಷಿತ ಸಮುದಾಯದ ಪರವಾಗಿ ಒತ್ತಾಯಿಸುತ್ತೇವೆ.
ಮೂವತ್ತು ವರ್ಷಗಳ ಕಾಲ ಸುದೀರ್ಘ ಹೋರಾಟ ಮಾಡಿದ ಇತಿಹಾಸ ಸಾಮಾನ್ಯವಲ್ಲ ಇದಕ್ಕೆಲ್ಲಾ ಇಷ್ಟೂ ವರ್ಷಗಳ ಕಾಲ ಯಾಮಾರಿಸಿ ಕಾಲಯಾಪಾನ ಮಾಡಿ ಆಡಳಿತ ನಡೆಸಿದ ಸರ್ಕಾರಗಳು ಕಾರಣ/ಜವಾಬ್ದಾರರು.
ಸೋಲು ಅನಾಥ ಅದರೆ ಗೆಲುವಿಗೆ ವಾರಸುದಾರರು ಜಾಸ್ತಿ.
*ಶಾಂತಿಯುತ ಹೋರಾಟ ಹಾಗೂ ಬಹಳಷ್ಟು ಜನರ ತ್ಯಾಗ ಮತ್ತು ಬಲಿದಾನ ದಿಂದ ಪಡೆದ ಈ ತೀರ್ಪು ಅವರೆಲ್ಲರಿಗೂ ಅಂಕಿತ.
ಲೋಕಿಕೆರೆ ಗ್ರಾಮದ ಎಸ್ ಸಿ .ಎಸ್. ಟಿ. ಒ. ಬಿ. ಸಿ .ಎಲ್ಲಾ ಸಮುದಾಯದವರು ಹಾಗೂ ಮುಖಂಡರುಗಳಾದ ಡಿ.ಡಿ ಹನುಮಂತಪ್ಪ .ಬಲ್ಲೂರು ಹನುಮಂತಪ್ಪ . ದಲಿತ ಸಂಘದ ಮುಖಂಡ ಕೆಎನ್.ತಿಪ್ಪೇಶ್,. ಬೇಕರಿ ಹನುಮಂತಪ್ಪ. ಹಿರಿಯ ಮಾಧ್ಯಮ ವರದಿಗಾರ ಪುರಂದರ, ದಾಸಪ್ಪನವರ ತಿಪ್ಪಣ್ಣ ಯುವ ಮುಖಂಡರಾದ ನಾಗೇಂದ್ರಪ್ಪ ಭೀಮಪ್ಪ ಮಂಜುನಾಥ ಸಿದ್ದೇಶ ಇನ್ನು ಮುಂತಾದ ಎಲ್ಲಾ ಸಮುದಾಯದ ಮುಖಂಡರು ಪಾಲ್ಗೊಂಡು ಶೋಷಿತ ಸಮುದಾಯದ ದಾರ್ಶನಿಕ ವಾಲ್ಮೀಕಿ, ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪಟಾಕಿ ಸಿಡಿಸಿ
ಸಂಭ್ರಮಾಚರಣೆ ನಡೆಸಿದರು.