ಬಹು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿಗೆ ಸುಪ್ರೀಂ ಕೋರ್ಟ್ ನಿಂದ ಸಂತಸದ ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ: ಸಿಹಿ ಹಂಚಿ ಸಂಭ್ರಮ
ಕೂಡ್ಲಿಗಿ: ಒಳ ಮೀಸಲಾತಿಗಾಗಿ ಬಹು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿಗೆ ಸುಪ್ರೀಂ ಕೋರ್ಟ್ ನಿಂದ ಸಂತಸದ ಸುದ್ದಿ ವರ ಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಯ ಮುಖಂಡರು ಗಳು, ಪದಾಧಿಕಾರಿಗಳು, ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿಯೇ ಅತ್ಯಂತ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೈಕೆ ಆರು ನ್ಯಾಯಮೂರ್ತಿಗಳು ಒಳಮೀಸಲಾತಿಯ ಪರವಾಗಿ ತೀರ್ಪು ನೀಡಿದ್ದು, ಒಬ್ಬರು ಮಾತ್ರ(ನ್ಯಾ. ಬೇಲಾ ತ್ರಿವೇದಿ) ಒಳ ಮೀಸಲಾತಿ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಹಾಗಾಗಿ 6:1 ರ ಅನುಪಾತದಡಿ, ಉಪವರ್ಗೀಕರಣ ಆಧಾರಿತ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೆಚ್ಚು ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಎಸ್‌ಸಿ ಮತ್ತು ಎಸ್‌ಟಿಗಳಲ್ಲಿಯೇ ಒಳ ಮೀಸಲಾತಿ ನೀಡಬಹುದು ಮತ್ತು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಜಾರಿಗೆ ತರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಜಾತಿಯ ಜನರು ಸಂತಸದಿಂದ ನಿಟ್ಟುಸಿರು ಬಿಟ್ಟು ಸಂಭ್ರಮಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಟಿ ಗಂಗಾಧರ ಹಾಗೂ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಟಿ.ಗುದ್ದಿ ದುರುಗೇಶ್ ಸುಪ್ರೀಂಕೋರ್ಟಿನ ತೀರ್ಪಿಗೆ ಅಭಿನಂದನೆ ಸಲ್ಲಿಸಿ ಅನೇಕ ಹೋರಾಟಗಳ ಮೂಲಕ ಹೋರಾಟ ಮಾಡಿದಂತ ರಾಜ್ಯದ ಮುಖಂಡರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಎಸಿ ಚೇತನ್, ಗ್ರಾ.ಪಂ ಸದಸ್ಯ ಹೊನ್ನೂರಪ್ಪ, ಶಿವಕುಮಾರ್, ಡಿ.ಎಂ.ಈಶ್ವರಪ್ಪ, ಶಿಕ್ಷಕರು ಮಾಂತೇಶ್, ಕರಿಬಸಪ್ಪ ಲೋಕಿಕೆರೆ, ದುರುಗಪ್ಪ ಕಾನಮಡಗು, ಎನ್. ಪಕೀರಪ್ಪ ಕಾನಮಡಗು, ಸೂರ್ಯಪ್ರಕಾಶ್, ಹೆಚ್ ಬಿ ಸತೀಶ್, ಮಾದಿಗ ದಂಡೂರ ಹೋಬಳಿ ಅಧ್ಯಕ್ಷ ಎಂ ಬಸವರಾಜ್, ಸುರೇಶ್, ತಿಪ್ಪೇಶ್, ಮಂಜುನಾಥ ಹೊಸಹಳ್ಳಿ, ಬೋರಣ್ಣ, ಮಾಳೆಹಳ್ಳಿ ಮಂಜಣ್ಣ, ಓಬಳೇಶ್ ಕೆಂಚಮ್ಮನಹಳ್ಳಿ, ನಾಗರಾಜ್ ಎ, ತಾಯಕನಹಳ್ಳಿ ಬಸವರಾಜ್, ರಜಿನಿ ಸೇರಿದಂತೆ ದಲಿತ ಮುಖಂಡರು, ಯುವಕರು ಉಪಸಿತರಿದ್ದರು.