ಚನ್ನಗಿರಿ )ಆ.4 ಚನ್ನಗಿರಿ ಸುದ್ದಿ

ದಾವಣಗೆರೆ ಜಿಲ್ಲೆ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಆಗಸ್ಟ್ 4

ಸಾಮಾಜಿಕ ನ್ಯಾಯದ ಹರಿಕಾರ ಸಿ ಎಂ ಸಿದ್ದರಾಮಯ್ಯ ರನ್ನು ಹತ್ತಿಕ್ಕುವ ಹುನ್ನಾರ – ಅಹಿಂದ ಅಧ್ಯಕ್ಷ ಸಿದ್ದಪ್ಪ ಆಕ್ರೋಶ. ದಾವಣಗೆರೆ (ಚನ್ನಗಿರಿ )ಆ.4
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ದೂರುತ್ತಿರುವವರು ರಾಜ್ಯದ ದೊಡ್ಡ ಭ್ರಷ್ಟಾಚಾರಿಗಳು, ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಸಿ. ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು,
ರಾಜ್ಯ ಕಂಡ ಅಪ್ರತಿಮ ಸ್ವಚ್ಛ ರಾಜಕಾರಣಿ ಸಿದ್ದರಾಮಯ್ಯ ನವರು ,ಬಡವರು ದೀನದಲಿತರ ಏಳಿಗೆಗಾಗಿ ಶ್ರಮೀಸುತ್ತಿರುವ ಏಕೈಕ ವ್ಯಕ್ತಿ, ಅವರ ಏಳಿಗೆಯನ್ನು ಸಹಿಸದ ಕೋಮುವಾದಿ ರಾಜಕಾರಣಿಗಳು ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ.
ಭ್ರಷ್ಟಾಚಾರದಡಿಯಲ್ಲಿ ಸಿದ್ದರಾಮಯ್ಯನವರನ್ನು ಹತ್ತಿಕ್ಕುವ ಹುನ್ನಾರ: ರಾಜಕೀಯ ವ್ಯವಸ್ಥೆಯಲ್ಲಿ ಬಲಿಷ್ಠರಾಗಿರುವ ಸಿದ್ದರಾಮಯ್ಯ ನವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸುವ ದೊಡ್ಡ ಷಡ್ಯಂತ್ರ ರೂಪಿಸಲಾಗುತ್ತಿದೆ. ಸಿಎಂ ವಿರುದ್ಧ ಹೋರಾಟಕ್ಕೀಳಿದವರಲ್ಲಿ ಬಹುತೇಕರು ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದವರೇ , ಅಂತವರಿಗೆ ಹೋರಾಟ ನಡೆಯಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು. ಒರ್ವ ಸಾಮಾಜಿಕ ಹರಿಕಾರ ಅಹಿಂದ ವರ್ಗದ ನಾಯಕನನ್ನು ಬಲಿಪಶು ಮಾಡಲು ಯತ್ನಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮೂಲಕ ನಮ್ಮ ಶಕ್ತಿ ಏನೆ೦ದು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೇಡಿನ ರಾಜಕಾರಣ ಮಾಡುವ ಕೋಮುವಾದಿಗಳು ಭ್ರಷ್ಟಾಚಾರದ ವಿರುದ್ಧ ಇರುವ ಸಿಎಂ ವಿರುದ್ಧ ಕಳಂಕ ತರಲು ವ್ಯವಸ್ಥೆತ ಪಿತೂರಿ ಮಾಡಿ ಅವರನ್ನು cm ಕುರ್ಚಿ ಯಿಂದ ಕೆಳಗೆ ಇಳಿಸುವ ಹುನ್ನಾರ ಮಾಡುವುದು ಇದನ್ನು ಖಂಡಿಸಿ ಹಿಂದುಳಿದ ವರ್ಗಗಳ ಹೋರಾಟ ಸಮಿತಿ ಮುಂದೆ ಪಟ್ಟ ಭದ್ರ ಹಿತಾಸಕ್ತಿ ಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಿದ್ದಪ್ಪ ಎಚ್ಚರಿಸಿದ್ದಾರೆ.
– ಸಿ. ಸಿದ್ದಪ್ಪ ಹಿಂದುಳಿದ ವರ್ಗಗಳ ಹೋರಾಟ ಸಮಿತಿ ಅಧ್ಯಕ್ಷ ಚನ್ನಗಿರಿ

Leave a Reply

Your email address will not be published. Required fields are marked *

You missed

error: Content is protected !!