Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಆಗಸ್ಟ್ 4

ಮನುಷ್ಯನ ನೆಮ್ಮದಿ ಜೀವನಕ್ಕೆ ಸಂಗೀತ ದಿವ್ಯ ಔಷಧಿ: ಶಾಸಕ ದೇವೇಂದ್ರಪ್ಪ ಅಭಿಮತ

ಜಗಳೂರು:’ಸಂಗೀತ ಸಾಹಿತ್ಯ ಮನುಷ್ಯನ ನೆಮ್ಮದಿ ಬದುಕಿಗೆ ಉತ್ತೇಜನ ನೀಡುತ್ತದೆ’ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿಕೆ ನೀಡಿದರು.

ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಕಲಾ ಸ್ಪಂದನ ಸಾಂಸ್ಕೃತಿಕ ಕಲಾ ಸಂಘ ಜಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ದಾವಣಗೆರೆ ಇವರ ಸಹಯೋಗದೊಂದಿಗೆ ಡಾ ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

‘ಸಂಗೀತ ಗಾಯನವು ಮನುಷ್ಯನ ಮಲೀನವಾದ ಮನಸ್ಥಿತಿಯನ್ನು ತಿಳಿಗೊಳಿಸಿ ಮಾನಸಿಕ ಆರೋಗ್ಯವನ್ನು ಸುಸ್ಥಿತವಾಗಿಡುತ್ತದೆ ಅಲ್ಲದೆ ಆರೋಗ್ಯಕರ ಜೀವನಕ್ಕೆ ಸಾಹಿತ್ಯ ಸಂಗೀತ ಜೌಷಧಿಯಿದ್ದಂತೆ’ಎಂದು ಹೇಳಿದರು.

‘ಪುಟ್ಟರಾಜ ಕವಿಗವಾಹಿಗಳು ಹುಟ್ಟುನಿಂದಲ್ಲೆ ದೃಷ್ಟಿ ಕಳೆದುಕೊಂಡವರು, ತಂದೆ ತಾಯಿಯನ್ನು ಕಳೆದುಕೊಂಡರು ಆದರೂ ಎಂಟು ವರ್ಷದ ಬಾಲ್ಯದಲ್ಲಿಯೇ ಸಂಗೀತ ವಿದ್ವಾಂಸರಾದವರು ಅಲ್ಲದೆ ಹುಟ್ಟು ಅಂಧರಾದರು ಸಂಗೀತದಲ್ಲಿ ಸಪ್ತ ಸ್ವರಗಳಿಗೆ ರಾಜರಾದವರು ಕಣ್ಣಿದ್ದವರಿಂದ ಆಗದ ಸಾಧನೆಯನ್ನು ಮಾಡಿ ಯಾರು ಬೇಕಾದರೂ ಸಾಧನೆ ಮಾಡಬಹುದು ಎಂದು ತೊರಿಸಿಕೊಟ್ಟು ಇತರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ’ಎಂದು ಸ್ಮರಿಸಿಸದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ, ಸಂಗೀತ ಸಾಹಿತ್ಯವನ್ನು ಮೆಚ್ವಿದವರಿಗೆ ಎಂದು ಕೈಬಿಟ್ಟಿಲ್ಲ ಕಲೆಯನ್ಮು ಆಸರೆಯಾಗಿ ಜೀವಿಸಿದ ಕಲಾವಿದರು ಆ ಕಲೆಗೆ ಜೀವ ಕೊಟ್ಟು ಉಳಿಸಿಕೊಂಡು ಹೋಗುತ್ತಾರೆ. ಇಂತಹ ಸಂಗೀತವು ಸ್ಥಗಿತವಾಗಿ ನಿರಂತರವಾಗಿ ಪೀಳಿಗೆಯಿಂದ ಪೀಳಿಗೆಗೆ ಸಾಗಬೇಕಾದರೆ ಕಲಾವಿದರಿಂದ ಮಾತ್ರ‌ ಸಾಧ್ಯ ಎಂದರ ಅಲ್ಲದೆ ಪುಟ್ಟರಾಜ ಕವಿಗವಾಯಿಗಳು ಸಂಗೀತದಿಂದಲೇ ಇತರರ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಬಹುದು ಅನೇಕ ಅಂಧರಿಗೆ ಸಂಗೀತದಿಂದಲ್ಲೆ ಬೆಳಕು ನೀಡಿದವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ದೇವೇಂದ್ರಪ್ಪ ಕಲಾತಂಡದವರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಕಲಾವಿಧರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೂರಾರ್ಜಿ, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ, ಶಂಭುಲಿಂಗಪ್ಪ, ಗ್ಯಾಸ್ ಓಬ್ಬಣ, ನಾಗಲಿಂಗಪ್ಪ, ಲಕ್ಷ್ಮಣ್ಣ ,ಹಟ್ಟಿ ತಿಪ್ಪೇಸ್ವಾಮಿ,ಕಲಾ ಸ್ಪಂದನಾ ಬಳಗದ ಬಸವರಾಜ್,ಮಾರುತಿ,ಸೇರಿದಂತೆ ಅನೇಕ ಕಲಾವಿಧರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!