‘ಇದು ಮದರಸಾ ಅಲ್ಲ, ಕಾಲೇಜು’ ಗಡ್ಡ ಬಿಟ್ಟ ವಿದ್ಯಾರ್ಥಿಯನ್ನು ಹೊರದಬ್ಬಿದ ಪ್ರಾಂಶುಪಾಲ
| Updated on: Aug 03, 2024 | 5:32
“ಇದು ಮದರಸಾ ಅಲ್ಲ,ಕಾಲೇಜು. ಯಾವುದೇ ಪಂಗಡದ ಮಗುವಾಗಿದ್ದರೂ ಗಡ್ಡ ಬೆಳೆಸಿ ವಿದ್ಯಾಸಂಸ್ಥೆಗೆ ಬರಬಾರದು” ಎಂದು ಪ್ರಾಂಶುಪಾಲರು ಹೇಳಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿಯ ಹಿರಿಯ ಸಹೋದರ ಜಾತಿ ಆಧಾರದ ಮೇಲೆ ನಿಂದಿಸಿದ್ದಾರೆ ಎಂದು ಪ್ರಾಂಶುಪಾಲರ ವಿರುದ್ಧ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯಮಂತ್ರಿ ಪೋರ್ಟಲ್‌ಗೆ ದೂರು ನೀಡಿದ್ದಾರೆ.

ಇದು ಮದರಸಾ ಅಲ್ಲ, ಕಾಲೇಜು ಗಡ್ಡ ಬಿಟ್ಟ ವಿದ್ಯಾರ್ಥಿಯನ್ನು ಹೊರದಬ್ಬಿದ ಪ್ರಾಂಶುಪಾಲ

ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಇದಲ್ಲದೇ ವಿದ್ಯಾರ್ಥಿಯನ್ನು ಜಾತಿ ಆಧಾರದ ಮೇಲೆ ಅಂದರೆ ‘ಇದು ಮದರಸಾ ಅಲ್ಲ, ಕಾಲೇಜು’ ಎಂದು ನಿಂದಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ವಿದ್ಯಾರ್ಥಿಯ ಹಿರಿಯ ಸಹೋದರ ಪ್ರಾಂಶುಪಾಲರ ವಿರುದ್ಧ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯಮಂತ್ರಿ ಪೋರ್ಟಲ್‌ಗೆ ದೂರು ನೀಡಿದ್ದಾರೆ.

ಆಜಾದ್ ನೌರಂಗ್ ಇಂಟರ್ ಕಾಲೇಜ್ ಸೈಂಥಲ್ ನಲ್ಲಿ ವಿದ್ಯಾರ್ಥಿ ಫರ್ಮಾನ್ ಅಲಿ ಓದುತ್ತಿದ್ದು, ಕೆಲ ದಿನಗಳ ಹಿಂದೆ ಫರ್ಮಾನ್ ಅಲಿಗೆ ಗಡ್ಡ ಬೋಳಿಸಿಕೊಂಡು ಬರುವಂತೆ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಗಡ್ಡ ಬೋಳಿಸಿಕೊಂಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಫರ್ಮಾನ್ ಅಲಿಗೆ ಶಾಲೆಗೆ ಬರದಂತೆ ಪ್ರಾಂಶುಪಾಲರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ವೈರಲ್​​​​

“ಇದು ಮದರಸಾ ಅಲ್ಲ,ಕಾಲೇಜು. ಯಾವುದೇ ಪಂಗಡದ ಮಗುವಾಗಿದ್ದರೂ ಗಡ್ಡ ಬೆಳೆಸಿ ಶಾಲೆಗೆ ಬರಬಾರದು ಎಂಬ ಸರ್ಕಾರಿ ಆದೇಶವಿದೆ” ಎಂದು ಪ್ರಾಂಶುಪಾಲರು ಹೇಳಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿಯ ಸಹೋದರ “ಇಂಟರ್ ಕಾಲೇಜಿನ ಪ್ರಾಂಶುಪಾಲ ಹುದ್ದೆಯಲ್ಲಿರುವ ರಾಮ್ ಅಚಲ್ ಖಾರ್ವಾರ್ ಅವರ ಈ ನಡವಳಿಕೆ ತಾರತಮ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುತ್ತದೆ” ಎಂದು ಇಡೀ ವಿಷಯದ ಬಗ್ಗೆ ಡಿಎಂ ಮತ್ತು ಮುಖ್ಯಮಂತ್ರಿ ಪೋರ್ಟಲ್‌ನಲ್ಲಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

You missed

error: Content is protected !!