ಸುದ್ದಿ ಜಗಳೂರು

ಜಗಳೂರು ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕಳಸಾರೋಹಣ
ಕಾರ್ಯಕ್ರಮ ಜರುಗಲಿದೆ.
Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on august 6

ಗ್ರಾಮದ ಹೃದಯ ಭಾಗದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ಕರೆಗಲ್ಲು ಸ್ಥಾಪನೆ ಕಾರ್ಯಕ್ರಮ ದಿ.ಆಗಸ್ಟ್ 7 ರಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ಜರುಗಲಿದ್ದು ದಿವ್ಯ ಸಮಾರಂಭದಲ್ಲಿ ವಿವಿಧ ಗಣ್ಯಮಾನ್ಯರು .ಸ್ವಾಮೀಜಿ ಗಳು ಭಾಗವಹಿಸಲಿದ್ದಾರೆ .
ಶ್ರೀ ಶ್ರೀ ಕಣ್ವಕುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿದ್ಯ.ಹಾಗೂ ಶ್ರೀ ಶ್ರೀ ಪ್ರಸನ್ನನಂದಪುರಿ ಮಹಾಸ್ವಾಮಿಗಳು ವಾಲ್ಮೀಕಿ ಮಠ ರಾಜನಹಳ್ಳಿ .ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ. ರಾಮಘಟ. ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರಿಮುನಿ ಸ್ವಾಮೀಜಿ ಭಾಗವಹಿಸುವರು .ಗ್ರಾಮದಲ್ಲಿ ನೂತನ ಆಂಜನೇಯಸ್ವಾಮಿ ಕಳಸಾರೋಹಣ ಮತ್ತು ಕರೆಗಲ್ಲು ಪ್ರತಿಷ್ಠಾಪನೆ ಕಾರ್ಯ ವಿಧಿವಿಧಾನಗಳಿಂದ ಜರುಗುವುವು.
ಕ್ಷೇತ್ರದ ಶಾಸಕ ಬಿ .ದೇವೇಂದ್ರಪ್ಪ ಕಾರ್ಯಕ್ರಮ ಉದ್ಗಾಟನೆ ಮಾಡಲಿದ್ದು ಮುಖ್ಯ ಅತಿಥಿಗಳು ಮಾಜಿ ಶಾಸಕ ಹೆಚ್ ಪಿ ರಾಜೇಶ್.ಎಸ್ ವಿ ರಾಮಚಂದ್ರಪ್ಪ. ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷರು ಪಿ .ಎಸ್ ಸುರೇಶಗೌಡ್ರು . ಕಾಂಗ್ರೆಸ್ ರಾಜ್ಯ ಎಸ್ ಟಿ ಘಟಕದ ಅಧ್ಯಕ್ಷ ಕೆ ಪಿ. ಪಾಲಯ್ಯ.. ರಾಜ್ಯ ಎಸ್ ಟಿ ಘಟಕದ ಪ್ರಧಾನಕಾರ್ಯಧರ್ಶಿ ಕೀರ್ತೀಕುಮಾರ್ .ಮುಖಂಡ ಬಿಸ್ತುವಳ್ಳಿ ಬಾಬಣ್ಣ.ಬಿಸ್ತುವಳ್ಳಿ ಗ್ರಾಪಂ ಅಧ್ಯಕ್ಷೆ ಮಣಿ ಶಶಿ ಸೇರಿದಂತೆ ವಿವಿಧ ಗಣ್ಯ ಮಾನ್ಯರು ಭಾಗವಹಿಸುವರು.
ಗ್ರಾಮದ ಹೃದಯ ಭಾಗದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ಮತ್ತು ಕರೆಗಲ್ಲು ಸ್ಥಾಪನೆ ನಡೆಯಲಿದೆ.

ಭಕ್ತರ ಉದಾರ ದೇಣಿಗೆಯಿಂದ ಆಂಜನೇಯಸ್ವಾಮಿಗೆ ಕಳಸ ರೋಹಣ ನೇರವೇರಲಿದ್ದು ನೂತನ ಗೋಪುರ ನಿರ್ಮಿಸಲಾಗಿದೆ ಇದರ ಪ್ರಯುಕ್ತ ಬೆಳ್ಳಿಗ್ಗೆ ಗಂಗೆ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.ಎಂದು ಗ್ರಾಮದ ಮುಖಂಡರಾದ ದಳಪತಿ ಮೋಟೆಗೌಡ್ರು. ರಾಮಣ್ಣ.ಕಂಪಳೇಶ್.ರಂಗಪ್ಪ.ಬಾಬಣ್ಣ.ಎಸ್ ಡಿ ಎಂ ಸಿ ಅದ್ಯಕ್ಷ ಚೌಡೇಶಿ .ಗ್ರಾಪಂ ಸದಸ್ಯರಾದ ಕೃಷ್ಣಪ್ಪ.ನಾಗರಾಜ್.ರೇವಣ್ಣ.ನಾಗಪ್ಪ.ಲಕ್ಷ್ಮಣ ಸೇರಿದಂತೆ ಇತರರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!