ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕೆರೆಗೆ ಈಜಲು ಹೋಗಿ ಪ್ರಾಣ ಕಳೆದುಕೊಂಡ ಯುವಕರು ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಈಜಲು ಕೆರೆಗೆ ಹೋದ ಯುವಕರು ಸಾವು ರಾಜು 19 ವಿಜಯ್ ಎಂಬ 19 ವರ್ಷದ ಯುಕರು ಕುರಿ ಕಾಯಲು ಹೋದ ಇವರು ಕೆರೆಯಲ್ಲಿ ಈಜಲು ಪ್ರಯತ್ನಿಸಿದ್ದಾರೆ ಆದರೆ ಈಜು ಬಾರದೆ ಪ್ರಾಣ ಕಳೆದುಕೊಂಡಿದ್ದಾರೆ.ಕೂಡ್ಲಿಗಿ ತಾಲ್ಲೂಕಿನ ಆಲೂರು ಗ್ರಾಮದ ರಾಜು ಪಿಯುಸಿ ಪರೀಕ್ಷೆ ಬರೆದಿದ್ದ ಬೇಸಿಗೆ ರಜ ಅವಧಿಯಲ್ಲಿ ತನ್ನ ಸಂಬಂಧಿಕರ ಊರಿಗೆ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮಕ್ಕೆ ತನ್ನ ಚಿಕ್ಕಮ್ಮನ ಊರಿಗೆ ಬಂದ ಸಂದರ್ಭದಲ್ಲಿ ವಿಜಯ್ ಜೊತೆ ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಗ್ರಾಮದಲ್ಲಿ ಎರಡು ಮೃತ ಕುಟುಂಬದ ಗೋಳಿನ ಆಕ್ರಂದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ಪಿ ಎಸ್ ಐ ಸಾಗರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.