ಸಾಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಿದ,ದೇವರಾಜ್ ಅರಸು ಅವರ ಆದರ್ಶಗಳು ಯುವ ಪೀಳಿಗೆಗೆ ತಲುಪಲಿ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ.
ಜಗಳೂರು ಸುದ್ದಿ:’ಸಂಪತ್ತು,ಅಧಿಕಾರ,ಅವಕಾಶಗಳ ಸಮಾನಹಂಚಿಕೆಯ ದೂರದೃಷ್ಠಿ ಪರಿಕಲ್ಪನೆ ಹೊಂದಿದ ಹಾಗೂ ಸಾಮಾಜಿಕನ್ಯಾಯಕ್ಕೆ ಅಡಿಪಾಯ ಹಾಕಿದ ದೂರದೃಷ್ಠಿಯ ನಾಯಕ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಆದರ್ಶಗಳು ಪೀಳಿಗೆಯಿಂದ ಪೀಳಿಗೆಗೆ ತಲುಪಲಿ’ಎಂದು ಶಾಸಕ.ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ,ತಾಲೂಕು ಪಂಚಾಯಿತಿ,ಪಟ್ಟಣಪಂಚಾಯಿತಿ,ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ದೇವರಾಜ್ ಅರಸು ಅವರ 109ನೇ ಜನ್ಮದಿನಾಚರಣೆ’ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಸ್ತರದಲ್ಲಿ ಶೋಷಿತ ಮತ್ತು ಮೇಲ್ವರ್ಗದವರ ಮಧ್ಯೆ ಅಸಮಾನತೆ,ಶೋಷಣೆ,ಅಸ್ಪೃಶ್ಯತೆ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಶೋಷಿತ,ಹಿಂದುಳಿದ ವರ್ಗದವರಿಗೆ ಸಮಾನತೆ,ಮೀಸಲಾತಿ ಒದಗಿಸಿದ
ಧೀಮಂತ ರಾಜಕಾರಣಿ ದೇವರಾಜ್ ಅರಸು ಅವರ ಕೊಡುಗೆಯನ್ನು ಭಾಷಣದಲ್ಲಿ ಆಲಿಸಿ ಮರೆತರೆ ಪ್ರಯೋಜನವಿಲ್ಲ.ಪ್ರತಿನಿತ್ಯ ಸ್ಮೃತಿ ಪಟಲದಲ್ಲಿ ಪುನರಾವರ್ತಿತಗೊಳ್ಳಬೇಕಿದೆ’ಎಂದರು.
‘ಕಳೆದ 50 ವರ್ಷಗಳಹಿಂದೆ ತಾಲೂಕಿನಲ್ಲಿ ಜೀವಂತವಾಗಿದ್ದ ಮನುಕುಲವೇ ತಲೆತಗ್ಗಿಸುವಂತಹ ದಲಿತರು ಮಲಹೋರುವ ಪದ್ದತಿಯನ್ನು ನಾನು ಬಾಲ್ಯಾವಸ್ಥೆಯಲ್ಲಿ ಕಣ್ಣಾರೆ ಕಂಡಿರುವೆ.ಇಂತಹ ಅನಿಷ್ಠ ಪದ್ದತಿ ನಿಷೇಧಗೊಳಿಸಿದ ದೇವರಾಜ್ ಅರಸು ಅವರ ಆಡಳಿತ ವೈಖರಿಯನ್ನು ಮನಗಂಡು.ಪ್ರಸಕ್ತ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಲಿತ,ಹಿಂದುಳಿದ ಸಮುದಾಯಗಳು ಜಾಗೃತರಾಗಿ ಮೀಸಲಾತಿ ಸದುಪಯೋಗಪಡೆದುಕೊಂಡು ಭವಿಷ್ಯರೂಪಿಸಿಕೊಳ್ಳಬೇಕು.ಹಟ್ಟಿಗಳ ಗುಡಿಸಲುಗಳಿಗೆ ಮುಕ್ತಿನೀಡಿ,ಹೈಟೆಕ್ ಬಡಾವಣೆಗಳಲ್ಲಿ ನಿವಾಸಿಗಳಾಗಬೇಕಿದೆ’ಎಂದು ಕರೆ ನೀಡಿದರು.
ಖಡ್ಗಕ್ಕಿಂತ ಲೇಖನಿ ಹರಿತವಾದದ್ದು:’ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಡಿ ಲೇಖನಿಯಿಂದ ಗುರಿ ಸಾಧಿಸಬೇಕಿದೆ.ಬಡತನದಲ್ಲಿ ಜನಿಸಿದ ನಾನು ಪ್ರೌಢಹಂತದಲ್ಲಿರುವಾಗ ಹಾಸ್ಟೆಲ್ ನಲ್ಲಿ 15ದಿನಗಳಕಾಲ ಗೋಣಿಚೀಲವನ್ನೇ ಹಾಸಿಗೆ,ಹೊದಿಕೆಯನ್ನಾಗಿಸಿಕೊಂಡು ಮಲಗಿದ್ದೆ.ಖಡ್ಗಕ್ಕಿಂತ ಹರಿತವಾದ ಲೇಖನಿ ನನ್ನನ್ನು ಶಾಸಕನನ್ನಾಗಿ ಆಯ್ಕೆಗೊಳಿಸಿತು’ ಎಂದು ಮಾರ್ಮಿಕವಾಗಿ ನುಡಿದರು.
ಜಗಳೂರು ಉತ್ಸವ ಆಚರಣೆ:’ಐತಿಹಾಸಿಕ ಜಗಳೂರು ಕೆರೆ 50ವರ್ಷದ ಹಿಂದೆ ಕೋಡಿಬಿದ್ದಿದ್ದ ನೆನಪಿದೆ.ಇದೀಗ ಕೋಡಿ ಬೀಳುವ ಹಂತದಲ್ಲಿದೆ.ಕೋಡಿ ಬಿದ್ದ ನಂತರ ಸ್ಮರಣೆಗಾಗಿ ಜಗಳೂರು ಉತ್ಸವ ಆಚರಿಸಲಾಗುವುದು’ ಎಂದರು.
ಇದೇ ವೇಳೆ ಹಿರಿಯ ಪತ್ರಕರ್ತ ಹಾಗೂ ವಕೀಲ ಡಿ.ಶ್ರೀನಿವಾಸ್ ಉಪನ್ಯಾಸ ನೀಡಿದರು ಇಂದಿರಾ ಗಾಂಧಿಯವರಿಗೆ ರಾಜಕೀಯ ಭವಿಷ್ಯಕ್ಕೆ ಮರುಜನ್ಮ ನೀಡಿದ ಏಕೈಕ ನಾಯಕ ದೇವರಾಜ್ ಅರಸು .ಭೂಸುಧಾರಣೆ ಕಾಯ್ದೆ .ಮಲಹೊರುವ ಪದ್ದತಿ ನಿಷೇಧ.ಜೀತ ಪದ್ದತಿ ನಿಷೇಧ ಮಾಡಲು .ಬಿ.ಬಸವಲಿಂಗಪ್ಪರವರ ಜೊತೆಗುಡಿ ಜಾರಿಗೆ ತಂದರು ಋಣಪರ್ಯಾಯ ಕಾಯ್ದೆ ಕ್ರಾಂತಿಕಾರಿ ನಿಲುವಿನ ಹೋರಾಟದ ರಾಜಕೀಯ ಪಟು ಆಗಿದ್ದರು .ವಿದ್ಯಾವಂತ ಯುವಕರಿಗೆ ವಿದ್ಯಾರ್ಥಿ ವೇತನ ಜಾರಿಗೆ ತಂದರು .ಹಿಂದೂಳಿದ ವರ್ಗದವರು ಮೀಸಲಾತಿ ಜಾರಿಗೆ ಮಾಡಿದರು ಇವರು ‘ಮೈಸೂರು ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿದ ದೇವರಾಜ್ ಅರಸು ಅವರು ಮೈಸೂರು ಅರಸರ ಸಂಬಂಧಿಗಳಾಗಿದ್ದರೂ ಕೂಡ ವೈಭೋಗದ ಜೀವನ ಸಾಗಿಸದೆ ಸರಳ,ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೊತೆಗೆ ಬಿಎಸ್ ಸಿ ಕೃಷಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರೈಸಿದರು.ರಾಜಕೀಯ ಭವಿಷ್ಯ ಪರಿಪಕ್ವಗೊಂಡು ಅವರ ಜಾತ್ಯಾತೀತ,ನಿಷ್ಪಕ್ಷಪಾತ ಸೇವೆಯನ್ನು ಗುರುತಿಸಿ ಅವಿರೋಧವಾಗಿ ಶಾಸಕರಾಗಿ ಆಯ್ಕೆಯಾದರು.ನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮುತ್ಸದ್ದಿ ರಾಜಕಾರಣಿ’ ಎಂದು ಪ್ರಶಂಸಿದರು.
‘ನಂತರ ಕೆಲವರ ರಾಜಕೀಯ ಕುತಂತ್ರದಿಂದ ಇಂದಿರಾಗಾಂಧಿ ಅಸ್ತಿತ್ವ ಕಳೆದುಕೊಂಡ ಸಂದರ್ಭದಲ್ಲಿ ದೇವರಾಜ್ ಅರಸು, ರಾಜಕೀಯ ಪುನರ್ಜನ್ಮನೀಡಿದರು.ಅಂತೆಯೇ ಶೋಷಿತ ಸಮುದಾಯದವರನ್ನು ಸಂಘಟಿಸಿ ವೀರಪ್ಪಮೋಯ್ಲಿ,ಮಲ್ಲಿಕಾರ್ಜುನ್ ಖರ್ಗೆ,ಎಚ್.ವಿಶ್ವನಾಥ್,ಜಾಫರ್ ಷರೀಫ್,ಸೇರಿದಂತೆ ಅಹಿಂದ ವರ್ಗದವರನ್ನು ರಾಜಕೀಯ ಮುನ್ನಲೆಗೆ ತಂದರು.ರಾಜ್ಯದಲ್ಲಿ ಭೂಸುಧಾರಣೆ,ಜೀತಪದ್ದತಿ ನಿರ್ಮೂಲನೆ,ಮಲಹೋರುವ ಪದ್ದತಿ ನಿಷೇಧ,ಋಣಪರಿಹಾರ ಕಾಯ್ದೆಗಳನ್ನು ಜಾರಿಗೊಳಿಸಿದರು.ಎಲ್.ಜಿ.ಹಾವನೂರು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ,ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅನುಷ್ಠಾನಗೊಳಿಸಿದ ಕೀರ್ತಿ ಸಲ್ಲುತ್ತದೆ’ಎಂದು ರಾಜಕೀಯಇತಿಹಾಸ ಸ್ಮರಿಸಿದರು.
ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,ತಾ.ಪಂ ಇಓ ಕೆಂಚಪ್ಪ,ಪ.ಪಂ.ಸದಸ್ಯರಾದ ರಮೇಶ್ ರೆಡ್ಡಿ,ಲಲಿತಶಿವಣ್ಣ,ನಿರ್ಮಲಕುಮಾರಿ,ಲುಕ್ಮಾನ್ ಖಾನ್,ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್,ನಾಯಕಸಮಾಜದ ತಾಲೂಕು ಅಧ್ಯಕ್ಷ ಬಡಯ್ಯ,ಮುಖಂಡರಾದ ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ಶಂಭುಲಿಂಗಪ್ಪ,ಕುಬೇಂದ್ರಪ್ಪ,ಇಂದಿರಾ, ಹಿಂದುಳಿದ ವರ್ಗಗಳಕಲ್ಯಾಣ ಅಧಿಕಾರಿ ಶಿವಬಸಪ್ಪ ಬಳ್ಳಾರಿ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪೋಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ,ನಿಲಯಮೇಲ್ವಿಚಾರಕ ದೇವೇಂದ್ರಪ್ಪ,ಸೇರಿದಂತೆ ಉಪಸ್ಥಿತರಿದ್ದರು.

