ಕೊಲ್ಕತ್ತಾ ವೈದ್ಯ ಅತ್ಯಾಚಾರ ಕೊಲೆ, ಖಂಡಿಸಿ ಸ್ವಾಭಿಮಾನಿ ಬಳಗ-
ಕ್ಯಾಂಡಲ್ ಲೈಟ್ ಮೌನ ಪ್ರತಿಭಟನೆ…..
ದಾವಣಗೆರೆ ಆ.18
ಕೊಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ದಾವಣಗೆರೆ ಸ್ವಾಭಿಮಾನಿ ಬಳಗದ ಕಾರ್ಯಕರ್ತರು, ಮುಸ್ಲಿಂ ಸಮಾಜದ ಮುಖಂಡರು,
ಮಹಿಳೆಯರು ಸೇರಿದಂತೆ ನೂರಾರು ಜನ ಆರೋಪಿಗಳನ್ನು ಕೂಡಲೆ ಬಂಧಿಸಿ ಶಿಕ್ಷೆಗೆ ಒಳಪಡಿಸುವoತೆ
ಆಗ್ರಹಿಸಿ ಮೇಣದಬತ್ತಿ ಹಚ್ಚಿ
ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮೂಲಕ ಮೌನ ಮೆರವಣಿಗೆ ನಡೆಸಿದರು.
ನಿನ್ನೆ ಸಂಜೆ ಬಿಡುವಿಲ್ಲದ ಮಳೆಯಲ್ಲೂ ಕೂಡ ಅಂಬೇಡ್ಕರ್ ವೃತ್ತದಲ್ಲಿ ಸೇರಿದ
ಸ್ವಾಭಿಮಾನಿ ಬಳಗದ ಯುವಕರು, ಕಾರ್ಯಕರ್ತರು,
ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ಮೇಣದ ದೀಪ ಹಚ್ಚಿ, ಕೈಯಲ್ಲಿ ಹಿಡಿದು “ಬೇಟಿ ಬಚಾವೋ ಬೇಟಿ ಪಡಾವೋ “
ಬರೀ ಸ್ಲೋಗನಿಗೆ ಮಾತ್ರ ಸೀಮಿತ ಗೊಂಡಿದೆ , ಗಾಂಧಿ ಕಂಡ ಕನಸು ನುಚ್ಚುನೂರಾಗಿ
ನಡುರಾತ್ರಿಯಲ್ಲಿ ಒಂಟಿ ಮಹಿಳೆ ಸ್ವತಂತ್ರವಾಗಿ ಧೈರ್ಯದಿಂದ ಓಡಾಡಿದೆ ಮಾತ್ರ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಎಂದಿದ್ದು ಹುಸಿ ಯಾಗಿದೆ, ಈ ದೇಶದ ಯುವತಿಯರಿಗೆ ರಕ್ಷಣೆ ಇಲ್ಲ,
ಕಠಿಣ ಕಾನೂನು ಬಳಸಿ,
ಅತ್ಯಾಚಾರಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು
ವೈದ್ಯಕೀಯ ವೃತ್ತಿ ನೀಡುತ್ತಾ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಅತಿಯಾದ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ ಕೇಂದ್ರ ಸರ್ಕಾರ,
ಪಶ್ಚಿಮ ಬಂಗಾಳ ಸರ್ಕಾರ ಕೂಡ ಸೂಕ್ತ ಪರಿಹಾರ ನೀಡಬೇಕು, ಇಂಥ ಘಟನೆಗಳು ಬರಕಳಿಸದಂತೆ ಕಟ್ಟುನಿಟ್ಟಿನ ಬಿಗಿ ಕಾನೂನು ರಕ್ಷಣೆ ಒದಗಿಸುವಂತೆ ಪ್ರತಿಭಟನಾಕಾರರು ಅಗ್ರಹ ಪಡಿಸಿದರು,
ಕ್ಯಾಂಡಲ್ ಹಚ್ಚಿ ಕೆಲ ನಿಮಿಷ ಮೌನ ಸಂತಾಪ ನಡೆಸಿದ ಪ್ರತಿಭಟನಾಕಾರರು, ಅಲ್ಲಿಂದ ನೇರ ಕಾಲ್ನಡಿಗೆ ಮೂಲಕ ಜಯದೇವ ವೃತ್ತದಲ್ಲಿ ಸೇರಿ
ವೈದ್ಯ ವಿದ್ಯಾರ್ಥಿನಿ ಡಾ. ಮೌನಿತ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕುಟುಂಬಕ್ಕೆ ನ್ಯಾಯ ಒದಗಿಸಿ ಸೂಕ್ತ ಪರಿಹಾರ ನೀಡಲೇಬೇಕೆಂದು
ಸ್ವಾಭಿಮಾನಿ ಬಳಗದ ಯುವ ಮುಖಂಡ ಸಾಧಿಕ್, ಮಸ್ತಾನ್,
ಆಫ್ನಾ ನ್, ಮುಸ್ಲಿಂ ಸಂಘಟನೆಯಾದ ಎ ಐ ಎ ಐ.ಎಂ ಮಹಮ್ಮದ್ ಆಲಿ ಶೇಕ್ , ಮಾನವ ಬಂಧುತ್ವ ವೇದಿಕೆ ಅಂಜಿನಪ್ಪ ಲೋಕಿಕೆರೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ವಾಭಿಮಾನಿ ಬಳಗದ ಮುಖಂಡರಾದ ಶಿವಕುಮಾರ ಸಾಂಬಲೆ, ಪುರಂದ ಲೋಕಿಕೆರೆ, ಅಯ್ಯಪ್ಪ ಹುನಕಲ್, ನಾಗರಾಜ್, ಧನ್ಯ ಕುಮಾರ್ ಕತ್ತಲಗೆರೆ ,
ಈ ಸಂದರ್ಭದಲ್ಲಿ ಅಂಜಿನಪ್ಪ ಲೋಕಿಕೆರೆ ಹೋರಾಟ ಗೀತೆಯ ನಂತರ ಅತಿಯಾದ ವೈದ್ಯ ವಿದ್ಯಾರ್ಥಿನಿ ಭಾವಚಿತ್ರ ಮುಂದೆ ಕ್ಯಾಂಡಲ್ ಹಚ್ಚಿ ಮೌನ ಪ್ರತಿಭಟನೆ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
