ಕ್ರೀಡೆಗಳಲ್ಲಿ ಸೋಲುಗೆಲುವಿಗಿಂತ ಆರೋಗ್ಯಕರ ಸ್ಪರ್ಧೆ ಮುಖ್ಯ:ಶಾಸಕ.ಬಿ.ದೇವೇಂದ್ರಪ್ಪ ಸಲಹೆ.
ಜಗಳೂರು ಸುದ್ದಿ:’ಕ್ರೀಡೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ ಆರೋಗ್ಯಕರ ಸ್ಪರ್ಧೆಮುಖ್ಯ’ ಎಂದು ಶಾಸಕ.ಬಿ.ದೇವೇಂದ್ರಪ್ಪ ಸಲಹೆ ನೀಡಿದರು.
ತಾಲೂಕಿನ ಮುಗ್ಗಿದ ರಾಗಿಹಳ್ಳಿ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸರ್ಕಾರಿ ಪದವಿಪೂರ್ವಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಪದವಿಪೂರ್ವಕಾಲೇಜುಗಳ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಶಾಲಾಕಾಲೇಜುಗಳಲ್ಲಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರದಲ್ಲಿ ಪ್ರತಿಭೆಅನಾವರಣಕ್ಕೆಸಹಕಾರಿಯಾಗಲಿವೆ.ಕ್ರೀಡೆಗಳುದೈಹಿಕ ಮತ್ತು ಮಾನಸಿಕ ಸದೃಢತೆಗೆ ಪೂರಕವಾಗಲಿವೆ.ಪ್ರತಿಯೊಬ್ಬ ವ್ಯಕ್ತಿಗೆ ಹಣಕ್ಕಿಂತ ಆರೋಗ್ಯವೇ ಸಂಪತ್ತು’ಎಂದು ತಿಳಿಸಿದರು.
‘ಇಂದಿನ ಕ್ರೀಡಾಕೂಟದ ಉದ್ಘಾಟನೆಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ.ವರುಣನ ಸಿಂಚನದಿಂದ ವಿನೂತನವಾಗಿ ಶುಭಸಂಕೇತ ಸಿಕ್ಕಿದೆ.ಎರಡು ದಿನಗಳಕಾಲನಡೆಯುವ ಕ್ರೀಡಾಕೂಟದಲ್ಲಿ ತೀರ್ಪುಗಾರರು ಪಾರದರ್ಶಕ ತೀರ್ಪು ನೀಡಬೇಕು. ನೈಜ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಹೊರಹೊಮ್ಮಿ ತಾಲೂಕಿನ ಕೀರ್ತಿ ಪತಾಕಿ ಹಾರಿಸಬೇಕು’ ಎಂದು ಶುಭಹಾರೈಸಿದರು.
ಪದವೀಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ,ಗ್ರಾ.ಪಂ.ಅಧ್ಯಕ್ಷೆ ಚಂದ್ರಮ್ಮಮಚ್ಚೇಂದ್ರಪ್ಪ,ಸದಸ್ಯರಾದ ಆಜಾಮುಲ್ಲಾ,ಮುಖಂಡರಾದ ಬಿ.ಮಹೇಶ್ವರಪ್ಪ,ಓಮಣ್ಣ,ಪಲ್ಲಾಗಟ್ಟೆಶೇಖರಪ್ಪ,ಪ್ರಾಂಶುಪಾಲರಾದ ಪ್ರಕಾಶ್,ಎ.ಎಲ್.ತಿಪ್ಪೇಸ್ವಾಮಿ,ಬಿ.ಎನ್.ಎಂ. ಸ್ವಾಮಿ,ಉಪನ್ಯಾಸಕರು,ಇದ್ದರು.