ಕತ್ತಲಗೆರೆ ಕೃಷಿ ವಿವಿ ಸಂಶೋಧನಾ ಕೇಂದ್ರದಲ್ಲಿ
ಜೇನು ಕೃಷಿ ತರಬೇತಿ…
ಪ್ರಕೃತಿಯಲ್ಲಿ ಜೇನಿಲ್ಲದೆ ನಾವಿಲ್ಲ – ಜೇನು ತಜ್ಞ ಕೆಂಚ ರೆಡ್ಡಿ ಅಭಿಮತ.
ದಾವಣಗೆರೆ ಆ. 21
ಈ ಪ್ರಕೃತಿ ಸಸ್ಯ ಸಂಕುಲದಲ್ಲಿ ಜೇನು ಮತ್ತು ದುಂಬಿಗಳಿಂದ ಗಿಡ ಸಸ್ಯಗಳ ಸದ್ದಾಳಾಭಿವೃದ್ಧಿ ಆಗುತ್ತಿದೆ,
ಹಾಗಾಗಿ ಜೇನು ಇಲ್ಲದೆ ನಾವಿಲ್ಲ, ಪ್ರಕೃತಿ ಕೂಡ ಇಲ್ಲ ಎಂದು ಜೇನು ಕೃಷಿಯನ್ನು ನಾವು ಉಳಿಸಿಕೊಳ್ಳಲೇ ಬೇಕಾಗಿದೆ ಎಂದು ರೈತರಿಗೆ ಮಡಿಕೇರಿ ಕೃಷಿ ಸಂಶೋಧನಾ ಕೇಂದ್ರದ ಜೇನು ಕೃಷಿ ತಜ್ಞ ಡಾಕ್ಟರ್ ಕೆಂಚ ರೆಡ್ಡಿ ಅಭಿಮತ ವ್ಯಕ್ತಪಡಿಸಿದರು.
ಚನ್ನಗಿರಿ ತಾಲೂಕಿನ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಎರಡು ದಿನಗಳ ರೈತರಿಗೆ ಜೇನು ಕೃಷಿ ತರಬೇತಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಿತಿಮೀರಿದ ವೈಜ್ಞಾನಿಕ ಕೃಷಿಯಿಂದ ಜೇನು ಸಂತತಿ ನಶಿಸುತ್ತಿದೆ, ಹಾಗಾಗಿ ರೈತರು ಹವ್ಯಾಸವಾಗಿ ಪ್ರಾಯೋಗಿಕವಾಗಿಯೂ ತಮ್ಮ ಮನೆ ಹಿತ್ತಲು, ತೋಟಗಳಲ್ಲಿ ಜೇನು ಸಾಕಾಣಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ಕೃಷಿ ವಿವಿ ಕತ್ತಲಗೆರೆ ಆವರಣದ ಮುಖ್ಯಸ್ಥರಾದ ಡಾ. ಬಿ ಎಂ ಆನಂದ್ ಕುಮಾರ್ ರವರು ಜೇನು ಇಲ್ಲದೆ ಜಪಾನ್ ನಲ್ಲಿ ಜೀವದವೇ ಇಲ್ಲ, ಪ್ರತಿಯೊಬ್ಬರೂ ಉತ್ಕೃಷ್ಟ ಜೇನುತುಪ್ಪ ಸೇವಿಸುವುದರಿಂದ ಅವರ ಬುದ್ಧಿಮಟ್ಟ ಹೆಚ್ಚಾಗುತ್ತಿದೆ ಎಂದು ಜೇನು ಕೃಷಿ ಮಹತ್ವ ಬಗ್ಗೆ ತಿಳಿಸಿದರು.
ಕೃಷಿ ವಿ ವಿ ವಿಸ್ತರಣಾಧಿಕಾರಿ ಗಂಗಾಧರ್ ಗೌಡ ಬಿರಾದರ್
ರೈತರು ತಮ್ಮ ತೋಟಗಳಲ್ಲಿ ಹೊಲಗಳಲ್ಲಿ ಹಾಗೂ ಮನೆ ಹಿತ್ತಲುಗಳಲ್ಲಿ ಜೇನು ಪೆಟ್ಟಿಗೆ ಇಟ್ಟು ಜೇನು ಸಾಕುವುದರಿಂದ ವರ್ಷಕ್ಕೆ ಕನಿಷ್ಠ 50 ಸಾವಿರ ರೂ ಆದಾಯ ಪಡೆಯಬಹುದು,
ಅಷ್ಟೇ ಅಲ್ಲ ತಮ್ಮ ಬೆಳೆ ಹೊಸಲುಗಳು 30ರಷ್ಟು ರಾಗ ಸ್ಪರ್ಶ ಕ್ರಿಯೆ ಹೊಂದಿ ಇಳುವರಿ ಹೆಚ್ಚಾಗುವುದು, ರಕ್ತದ ಒತ್ತಡ ಹತೋಟಿಗೆ ಬರುವುದು, ಜೇಬ ಬಳಕೆಯಿಂದ ಬುದ್ಧಿಮತ್ತೆ ಹೆಚ್ಚಾಗುವುದು, ರಕ್ತಶುದ್ಧಿ ಮೆದುಳು ಚುರುಕು ಕೊಳ್ಳುವುದು, ಜೇನು ಕೃಷಿ ಮಾಡುವ ರೈತರಿಗೆ ಮಧುವನ ಯೋಜನೆ ಅಡಿಯಲ್ಲಿ ತರಬೇತು ಪ್ರಮಾಣ ಪತ್ರ ದಿಂದ ಸರ್ಕಾರದ ಹಲವು ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಜೇನು ಕೃಷಿ ತರಬೇತಿ ಕಾರ್ಯಕ್ರಮದ ಅತಿಥಿಗಳಾಗಿ ಆವರಣದ ವಿಜ್ಞಾನಿಗಳಾದ ಡಾ. ಸರ್ವಜ್ಞ ಸಾಲಿ ಮಟ್, ಡಾ. ಸಣ್ಣ ತಿಮ್ಮಪ್ಪ ಡಾ. ನಿರಂಜನ್, ಡಾ.ಶರಣಪ್ಪ ಹಣಮಂತ್ ನಾಯಕ್, ಡಾ. ಮಂಜುನಾಥ್ ಮಾತನಾಡಿದರು.
ಡಾ. ಪ್ರಕಾಶ್ ಪೆಮಾಡಿ,
ಕತ್ತಲಗೆರೆಯ ರೈತ ರುದ್ರೇಶ್,
ಸೇರಿದಂತೆ 50 ಕ್ಕೂ ಹೆಚ್ಚು ಜನ ರೈತರು ಜೇನು ಕೃಷಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.