ಉದ್ಗಟ್ಟ ಕೆ.ಆರ್.ಸಿ.ಆರ್.ಶಾಲೆಯಲ್ಲಿ ವಲಯಮಟ್ಟದ ಕ್ರೀಡಾಕೂಟ.
ಜಗಳೂರು ಸುದ್ದಿ:ತಾಲೂಕಿನ ಉದ್ಗಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಸಂಯುಕ್ತಾಶ್ರಯದಲ್ಲಿ ಹನುಮಂತಾಪುರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಕೂಟ ಜರುಗಿದವು.
‘ತಾಲೂಕಿನಅಣಬೂರು,ಹಿರೇಮಲ್ಲನಹೊಳೆ,ಹನುಮಂತಾಪುರ,ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಬ್ಬಡ್ಡಿ,ಖೋಖೋ,ವಾಲಿಬಾಲ್,ಥ್ರೋಬಾಲ್,ಬಾಲಕ ಮತ್ತು ಬಾಲಕೀಯರ ವಿಭಾಗದಲ್ಲಿ ಗುಂಪು ಆಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಮಧ್ಯೆ ತೀವ್ರ ಪೈಪೋಟಿ ನಡೆದವು’.
‘ಬಾಲಕೀಯರ ವಿಭಾಗದ ಗುಂಪು ಆಟಗಳಾದ ಖೋ-ಖೋ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆ ತಮಲೇಹಳ್ಳಿ ಪ್ರಥಮ,ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ ದ್ವಿತೀಯ ಸ್ಥಾನ,ಕಬ್ಬಡ್ಡಿ ಪಂದ್ಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಥಮ,ಸ.ಹಿ.ಪ್ರಾ.ಶಾಲೆ ಕಾನನಕಟ್ಟೆ ದ್ವಿತೀಯ ಸ್ಥಾನ,ವಾಲಿಬಾಲ್ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆ ಸಿ.ಎಂ.ಹೊಳೆ ಪ್ರಥಮ,ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ದ್ವಿತೀಯ ಸ್ಥಾನ,ಥ್ರೋಬಾಲ್ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆ ಹುಚ್ಚವ್ವನಹಳ್ಳಿ ಪ್ರಥಮ,ಜಗಳೂರು ಗೊಲ್ಲರಹಟ್ಟಿ ದ್ವಿತೀಯ, ಸ್ಥಾನ ಗಳಿಸಿದರು’.
‘ಗುಂಪು ಆಟದ ಬಾಲಕರ ವಿಭಾಗದಲ್ಲಿ ಖೋ-ಖೋ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆತಮಲೇಹಳ್ಳಿ ಪ್ರಥಮ,ಸ.ಹಿ.ಪ್ರಾ.ಶಾಲೆ ಹನುಮಂತಾಪುರ ದ್ವಿತೀಯಸ್ಥಾನ,ಕಬ್ಬಡ್ಡಿ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆ ದೊಡ್ಡಬೊಮ್ಮನಹಳ್ಳಿ ಪ್ರಥಮ,ವಾಲಿಬಾಲ್ ಸ.ಹಿ.ಪ್ರಾ.ಶಾಲೆ ಭರಮಸಮುದ್ರ ಪ್ರಥಮ,ಸ.ಹಿ.ಪ್ರಾ.ಶಾಲೆ ಸಿ.ಎಂ.ಹೊಳೆ ದ್ವಿತೀಯ ಸ್ಥಾನ,ಥ್ರೋಬಾಲ್ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆ ಜಗಳೂರು ಗೊಲ್ಲರಹಟ್ಟಿ ಪ್ರಥಮ,ಸ.ಹಿ.ಪ್ರಾ.ಶಾಲೆ ಹುಚ್ಚವ್ವನಹಳ್ಳಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಉಳಿದ ಅಥ್ಲೆಟಿಕ್ಸ್ ವೈಯಕ್ತಿಕ ಆಟಗಳು ಮುಂದುವರೆಯಲಿವೆ’.ಎಂದು ಕ್ರೀಡಾಕೂಟ ನಿರ್ವಹಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಶಶಿಕಿರಣ್ ಅವರು ಮಾಹಿತಿ ನೀಡಿದರು.
ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ,ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕರಾದ ಶ್ರೀನಿವಾಸ್,ನೇತ್ರಾವತಿ,ಸಾಧಿಕ್,ನವೀನ್,ಬೊಮ್ಮಯ,ನಾಗೇಶ್,ಪ್ರಕಾಶ್,ಲಕ್ಷ್ಮಿ,ದೈಹಿಕ ಶಿಕ್ಷಕಿ ಮಲ್ಲಮ್ಮ,ನಿಲಯ ಮೇಲ್ವಿಚಾರಕಿ ಸಂಕ್ರಾಂತಿ,ಸೇರಿದಂತೆ ವಿವಿಧ ಶಾಲೆ ದೈಹಿಕಶಿಕ್ಷಕರುಗಳು,ವಸತಿ ಶಾಲೆ ಡಿಗ್ರೂಪ್ ಸಿಬ್ಬಂದಿಗಳು ಇದ್ದರು.