ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಉಜ್ವಲ ಭವಿಷ್ಯಕ್ಕೆ ಪೂರಕ:ಬಿಇಓಹಾಲಮೂರ್ತಿ
ಜಗಳೂರು ಸುದ್ದಿ:’ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಲಿವೆ’ ಎಂದು ಬಿಇಓ ಹಾಲಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೆದಕೇರನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ.ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಬಾಲ್ಯಾವಸ್ಥೆಯಲ್ಲಿಯೇ ಪಠ್ಯದಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಭವಿಷ್ಯದಲ್ಲಿ ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಧನೆಗೈಯಲು ಪೂರಕವಾಗಲಿವೆ’ ಎಂದರು.
‘ಪ್ರತಿಭಾಕಾರಂಜಿ ಕಾರ್ಯಕ್ರಮ ಗ್ರಾಮೀಣ ಕಲೆ,ಸಂಸ್ಕೃತಿ ಉಳಿವಿಗೆಸಹಕಾರಿಯಾಗಲಿವೆ.ಭಾಷಣ,ರಸಪ್ರಶ್ನೆ,ಏಕಪಾತ್ರಾಭಿನಯ,ಕವಾಲಿ,ಕಂಠಪಾಠ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯುವ ಸ್ಪರ್ಧೆಗಳಲ್ಲಿ ತೀರ್ಪುಗಾರರು ಪಾರದರ್ಶಕ ತೀರ್ಪು ನೀಡಬೇಕು’ ಎಂದು ಕಿವಿಮಾತು ಹೇಳಿದರು.
ಡಯಟ್ ನ ನಿವೃತ್ತ ಪ್ರಾಂಶುಪಾಲ ಲಿಂಗರಾಜ್ ಮಾತನಾಡಿ,’ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಿಕ್ಷಕರಿಗೆ ನಿರಂತರ ಅಭ್ಯಾಸ,ಶ್ರದ್ದೆ,ಪ್ರಾಮಾಣಿಕತೆ,ವೃತ್ತಿ ಬದ್ದತೆಹೊಂದಿದರೆ ಸಾಧನೆ ಸಾಧ್ಯ.ಸೋಮಾರಿ ಶಿಕ್ಷಕರಿಂದ ಶೈಕ್ಷಣಿಕ ಪ್ರಗತಿ ಸಾಧ್ಯವಿಲ್ಲ.ವಿದ್ಯಾರ್ಥಿಗಳಿಗೆ ವಿಶ್ವ ಒಲಂಪಿಕ್ ನಲ್ಲಿ ಸಾಧನೆಗೈದ ಉಸೇನ್ ಬೋಲ್ಟ್ ಅವರ ಶ್ರಮ,ಅಭ್ಯಾಸ ಸ್ಪೂರ್ತಿಯಾಗಬೇಕಿದೆ’ ಎಂದು ತಿಳಿಸಿದರು.
ಸಂದರ್ಭದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವಣ್ಣ,ವಿರೇಶ,ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವಪ್ಪ,ಬಿಆರ್ ಸಿ ಡಿಡಿ ಹಾಲಪ್ಪ,ಬಿಆರ್ ಪಿ ಗಳಾದ ಲತಾ,ರಮೇಶ್,ಸಿ ಆರ್ ಪಿ ಆಂಜನೇಯ,ಇಸಿಓ ಬಸವರಾಜಪ್ಪ,ಪ್ರೌಢಶಾಲೆ ಮುಖ್ಯ ಶಿಕ್ಷಕ ಅರುಣ್ ಕುಮಾರ್,ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಪಿ.ಟಿ.ಬಸವರಾಜ್,ಸೇರಿದಂತೆ ಇದ್ದರು.