ಶುಕ್ರದೆಸೆ ನ್ಯೂಸ್: ಸಂಜೀವಿನಿ ಮೂರ್ತಿ ಹನುಮ ಮಾಲಾಧಾರಿಗಳಿಂದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಾರಿಕಾಂಬ ದೇವಸ್ಥಾನದವರೆಗು ಹನುಮ ಮಾಲಾಧಾರಿಗಳಿಂದ ಜೈ ಹನುಮ ಎಂದು ಜೈಘೋಷಣೆಗಳು ಕೂಗುವುದರ ಮೂಲಕ ಅದ್ದೂರಿ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆ ಯಾತ್ರೆಯನ್ನು ಸರ್ವಧರ್ಮ ಸಮಿತಿ ಪ್ರಾಂತ ಸಂಚಾಲಕ ಮುನಿಯಪ್ಪ ಚಾಲನೆ ನೀಡಿದರು. ನಂತರ ಬೆಳಗ್ಗೆ ಸಂತೆ ಮುದ್ದಾಪುರ ಬಳಿಯಿರುವ ಸಂಜೀವಿನಿ ಮೂರ್ತಿ ದೇವಾಸ್ಥಾನದ ಆವರಣದಲ್ಲಿ ವಿವಿಧ ಸ್ವಾಮಿಜಿಗಳಿಂದ ಧರ್ಮಸಭೆಯಿದ್ದು ಮಾಲಾಧಾರಿಗಳು ವ್ರತಚಾರಣೆ ಧ್ಯಾನದ ಮೂಲಕ ಪೂಜೆ ಕೈಂಕಾರ್ಯಗಳು ಮೂಲಕ ಭಕ್ತಿ ಭಾವ ಮೆರೆಯುವಂತೆ ಮಾಲಾಧಾರಿಗಳಿಗೆ ತಿಳಿಸಿದರು. ಮೆರವಣಿಗೆಯಲ್ಲಿ ಶಾಸಕ ಎಸ್ ವಿ ರಾಮಚಂದ್ರ ಸೇರಿದಂತೆ ನಿವೃತ್ತ ಡಿ ವೈ ಎಸ್ ಪಿ ಕಲೇಶಪ್ಪ.ಹಾಗೂ .ಪಪಂ ಮಾಜಿ ಅಧ್ಯಕ್ಷ ಜೆ ವಿ ನಾಗರಾಜ್.ಮುಖಂಡ ಕರಿಬಸಣ್ಣ.ಮಾಜಿ ತಾಪಂ ಸದಸ್ಯ ಇ ಪ್ರಕಾಶ್.ಮುಖಂಡ ಮರುಳಾರಾಧ್ಯ.ಸೇರಿದಂತೆ ಮುಂತಾದವರು ಹಾಜರಿದ್ದರು.