ಸನ್ಮಾನ ಕಾರ್ಯಕ್ರಮ
JLR 1 Aug26

ಜಗಳೂರು.
ಶ್ರೀ ಮಾರುತಿ ಮಲ್ಟಿ ಜಿಮ್ ವತಿಯಿಂದ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ದೇಹದಾರ್ಡ್ಯ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪ್ರೌಢ ಶಾಲಾ ಶಿಕ್ಷಕ ಆರ್.ಎಸ್.ಓಬಳೇಶ್ ರವರಿಗೆ ಸನ್ಮಾನಿಸಲಾಯಿತು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸೋಮವಾರ ಸನ್ಮಾನ ಕಾರ್ಯಕ್ರಮದಲ್ಲಿ ತಪಸ್ಸು ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಮಂಜುನಾಥ್ ಗುರುಜಿ ಮಾತನಾಡಿದ ಅವರು, ನಮ್ಮ ತಾಲೂಕಿನ ಸಣ್ಣ ಗ್ರಾಮವಾದ ಖಿಲಾ ಕಣ್ವಕುಪ್ಪೆ ಗ್ರಾಮದ ರೈತರ ಮಗನಾಗಿ ಬಡತನ ಕುಟುಂಬದಲ್ಲಿ ಬೆಳೆದು ಪ್ರೌಢ ಶಾಲೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆಯುತ್ತಾ ಬಿಡುವಿನ ಸಮಯದಲ್ಲಿ ದೇಹಕ್ಕೆ ಕಸರತ್ತು ಮಾಡಿ ದೇಹವನ್ನು ಉರಿಗೊಳಿಸಿ ದೇಹದಾಢ್ಯ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿಯೇ ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಪ್ರಥಮ ಸ್ಥಾನ ಪಡೆದು ಈಗಿನ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ. ಮುಂದೆ ರಾಷ್ಟ್ರಮಟ್ಟ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಸ್ಪರ್ಧೆಯಲ್ಲಿ ಗೆಲುವು ಕಾಣಲಿ ಎಂದು ಆಶಿಸಿದರು.

ಉಪ ಪ್ರಾಂಶುಪಾಲ ಡಿ.ಡಿ.ಹಾಲಪ್ಪ ಮಾತನಾಡಿ, ಆರ್.ಓಬಳೇಶ್ ರವರು ನಮ್ಮ ಶಾಲಾ ವತಿಯಿಂದ ಪ್ರತಿನಿಧಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಹಾಗೂ ಇದು ನಮ್ಮ ಶಾಲೆಗೂ ಕೀರ್ತಿ ತಂದಿದೆ. ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಗೆ ತಯಾರಿ ನಡೆಸಲು ನಮ್ಮಿಂದ ಸಂಪೂರ್ಣ ಸಹಕಾರ ಇರುತ್ತದೆ ಎಂದರು. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆಂಬ ವಾಣಿಯಂತೆ ವಿದ್ಯಾರ್ಥಿಗಳು ಹಾಗೂ ಯುವಕರು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಹದಾಢ್ಯ ಜಿಮ್ ಟ್ರೈನರ್ ಜಗದೀಶ್ ಕೆಳಗೋಟೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಜನತೆ ದುಶ್ಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದಾರೆ. ದುಶ್ಚಟ ಹಾಗೂ ವ್ಯಸನಗಳಿಂದ ದೂರವಾಗಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ ಇದನ್ನು ಎಲ್ಲರೂ ಅನುಸರಿಸಬೇಕು. ಜಿಮ್ ಮಾಡಿದರೆ ಹೃದಯಘಾತ ಸಂಭವಿಸುತ್ತದೆ ಎಂಬ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ, ವ್ಯಾಯಾಮವು ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ. ಯಾವುದೋ ಕೆಲ ಪ್ರಕರಣಗಳಿಂದ ಜಿಮ್ ಮಾಡುವುದರಿಂದಲೇ ಹೃದಯಾಘಾತ ಆಗುತ್ತದೆ ಎಂಬುದು ಶುದ್ಧ ಸುಳ್ಳು. ಉತ್ತಮ ಪೌಷ್ಟಿಕ ಆಹಾರ ಬಳಕೆ ಮತ್ತು ವ್ಯಾಯಾಮ ಮಾಡುವುದರಿಂದ ಆರೋಗ್ಯಯುತವಾಗಿರಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಮ್ ನ ತಾಲೀಮು ಪಟುಗಳಾದ ಮಲೆಮಾಚಿಕೆರೆ ಬಿ.ಸತೀಶ್, ಜಗಜೀವನ್ ರಾಮ್ ಆರ್.ಎಲ್, ದರ್ಶನ್ ಸಂಗೊಳ್ಳಿ, ಚಂದ್ರು ರೂಢಪಲ್, ಮುರುಗೇಶ್, ನಾಗರಾಜ್, ಸಂದೀಪ್, ಶೋಖತ್, ಪಾತಲಿಂಗ ಹಾಗೂ ಶಿಕ್ಷಕರಾದ ಆರ್.ರಮೇಶ್, ಎನ್ ಸುರೇಶ್, ಆರ್.ರಾಣಿ, ಮಹಮದ್ ಶರೀಫ್, ಜೆ.ಎಂ.ಮುನ್ನಾಸಾಬ್, ಜಾತಪ್ಪ, ಸಿ.ಮಹೇಶ್, ಬಿ.ಟಿ. ಶೋಭಾ, ಸೇರಿದಂತೆ ಶಿಕ್ಷಕರ ವರ್ಗ, ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!