ಜನಸ್ತೋಮದ ನಡುವೆ ಜರುಗಿದ ಕೊನೆಯ ಸೋಮವಾರದ ಪೂಜೆ
ಶ್ರಾವಣದ ಕೊನೆಯ ಸೋಮವಾರ ತಾಲೂಕಿನ 25 ಗೊಲ್ಲರಹಟ್ಟಿ ಜನರು ಅಣಬೂರು ಗೊಲ್ಲರಹಟ್ಟಿಯ ನೇತೃತ್ವದಲ್ಲಿ ನೂರಾರು ಎತ್ತಿನ ಗಾಡಿ ಮುಖಂತಾರ ಆಗಮಿಸಿ ಬೊಮ್ಮಕಾಟ್ಟಜ್ಜನಿಗೆ ವಿಶೇಷ ಪೂಜೆ ಸಲ್ಲಿಸುತಾರೆ
ಜಗಳೂರು ತಾಲೂಕು ಕಲ್ಲೇದೇವರಪುರ ಹಾಗೂ ಬೆಣ್ಣೆಹಳ್ಳಿ ಮದ್ಯ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಬೊಮ್ಮಗಟ್ಟೆ ಕಾಟ್ಟಜ್ಜಗೆ ವಿಶೇಷ ಪೂಜೆ ಸಲ್ಲಿಸಲಾಯಿತು
ತಾಲೂಕಿನ ಅಣಬೂರು ಗೊಲ್ಲರಹಟ್ಟಿಗೆ ಸೇರಿದ ಮಹಾತ್ಮ ಪವಾಡಪುರಷ ಶ್ರೀ ಬೊಮ್ಮಗಟ್ಟ ಕಾಟಜ್ಜನಿಗೆ ಅಣಬೂರಿನಿಂದ ಮೀಸಲು ಹಾಲು ಮೀಸಲು ಅನ್ನ ಎಡೆಯನ್ನ ಮಾಡಿಕೊಂಡು ಬಂದು ಅಣಬೂರಿನ ಪಟ್ಟದ ಪೂಜಾರಿಗಳು ಪೂಜೆ ಮಾಡಿದ ನಂತರ ತಾಲೂಕಿನ 25ಗೊಲ್ಲರಹಟ್ಟಿಯ ಜನರು ಮಡಿ ಮೈಲಿಗೆಯಲ್ಲಿ ಬಂದು ಅಜ್ಜನಿಗೆ ತಮ್ಮ ಭಕ್ತಿ ಸಮರ್ಪಣೆ ಮಾಡುವುದು ವಾಡಿಕೆ
ರಾಷ್ಟ್ರೀಯ ಹೆದ್ದಾರಿ ಆಗಲಿಕರಣ ಮಾಡುವ ಸಂದರ್ಭದಲ್ಲಿ ಎಷ್ಟೆ ಪ್ರಯತ್ನ ಮಾಡಿದರು ಸಮಾದಿಯನ್ನ ಬೇರೆಯ ಕಡೆ ಸ್ಥಾಳಾಂತರ ಮಾಡಲು ಸಾದ್ಯವಾಗಿಲ್ಲ ಎನ್ನುತ್ತಾರೆ ಊರಿನ ಗೌಡ ಯಜಮಾನ್ ಅಜ್ಜಪ್ಪ
ಪೂಜಾ ಕಾರ್ಯಕ್ರಮಕ್ಕೆ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಹೆಚ್ ಪಿ ರಾಜೇಶ್ ಕೆ ಪಿ ಸಿ ಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮುಂತಾದವರು ಆಗಮಿಸಿ ಆಶಿರ್ವಾದ ಪಡೆದರು