ಶುಕ್ರದೆಸೆ ನ್ಯೂಸ್: ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ. ಪ್ರವೀಣ್ ಕುಮಾರ್ ಎಚ್ ಎಲ್

  ದಿನಾಂಕ 05.04.2023 ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ " ಪ್ರಸ್ತುತ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಯುವ ಜನತೆಯ ಪಾತ್ರ " ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಪ್ರವೀಣ್ ಕುಮಾರ್ ಎಚ್ ಎಲ್ ,ಸಹಾಯಕ ಪ್ರಾಧ್ಯಾಪಕರು,  ಹೊಳಲ್ಕೆರೆ ಇವರು ಯುವಶಕ್ತಿ ರಾಷ್ಟ್ರದ ಒಂದು ದೊಡ್ಡ ಮಾನವ ಸಂಪನ್ಮೂಲ ಇದರ ಸದ್ಬಳಕೆಯನ್ನು ಮಾಡಿಕೊಂಡಾಗ ರಾಷ್ಟ್ರ ನಿಜವಾದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬಹುದು, ಅದಕ್ಕಾಗಿ ವಿದ್ಯಾರ್ಥಿಎಂಬ ಯುವಶಕ್ತಿಯು ಪ್ರಜ್ಞಾವಂತರಾಗಬೇಕು ನೈತಿಕತೆ ರೂಡಿಸಿಕೊಳ್ಳಬೇಕು, ಬುದ್ಧಿವಂತಿಕೆ-ಕೌಶಲ್ಯತೆಗಳನ್ನ ರೂಡಿಸಿಕೊಳ್ಳಬೇಕು

.ಎಂದು ತಿಳಿಸುತ್ತಾ ರಾಷ್ಟ್ರಕಟ್ಟುವ ಕನಸು ಯುವಕರದ್ದಾಗ ಬೇಕು 15ನೇ ವಯಸ್ಸಿನಿಂದ 29ನೇ ವಯೋಮಿತಿಯುವಶಕ್ತಿಯು ಭಾರತದಲ್ಲಿ ಪ್ರಸ್ತುತ ಭಾರತದಲ್ಲಿ ಶೇಕಡ 39 ರಷ್ಟು ಇದ್ದಾರೆ . ಇವರುಗಳು 34% ರಷ್ಟು ಒಟ್ಟು ರಾಷ್ಟ್ರೀಯ ವರಮಾನದ ಕೊಡುಗೆಯನ್ನ ನೀಡಿದ್ದಾರೆ . ಇಂತಹ ಸಂದರ್ಭದಲ್ಲಿ ಏನನ್ನು ಹೂಡಿಕೆಯನ್ನು ಮಾಡಬೇಕು, ಹೇಗೆ ಹೂಡಿಕೆ ಮಾಡಬೇಕು ,ಯಾರಿಗಾಗಿ ಹೂಡಿಕೆ ಮಾಡಬೇಕು ,ಯಾವುದನ್ನ ಹಂಚಿಕೊಳ್ಳಬೇಕು, ರಾಷ್ಟ್ರಪ್ರಜ್ಞೆ ,ರಾಷ್ಟ್ರೀಯ ಭಾವೈಕ್ಯತೆ ,ಸಮಾನತೆ, ಭ್ರಾತೃತ್ವ ಗುಣಗಳು ಯುವ ಜನತೆಯಲ್ಲಿ ಮೂಡಬೇಕು ಒಟ್ಟು ದೇಶಿಯ ಉತ್ಪನ್ನದ ಜೊತೆಗೆ ಮಾನವ ಸಂಪನ್ಮೂಲದ ಸದ್ಬಳಕೆ ಮಾನವ ಅಭಿವೃದ್ಧಿ ಸಂರಚನೆಯನ್ನ ಅರ್ಥ ಮಾಡಿಕೊಳ್ಳಬೇಕು, ಸುಸ್ಥಿರ ಅಭಿವೃದ್ಧಿ ಬಗ್ಗೆ ಯುವಶಕ್ತಿಯು ಯಾವಾಗಲೂ ಜಾಗೃತರಾಗಿರಬೇಕು ಹಾಗೂ ಸಾಮಾಜಿಕ ಚೌಕಟ್ಟು, ರಚನಾತ್ಮಕ ಬದಲಾವಣೆ ಸಾಮಾಜಿಕ ಮೌಲ್ಯ ಉತ್ಪಾದಕ ಉತ್ಪಾದಕತೆಯ ಪ್ರಯೋಜನ ಇವುಗಳನ್ನು ಅರಿತು ಯುವಶಕ್ತಿಯು ಮುನ್ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಜೇಶ್ವರಿಪೂಜಾರ್ ವಹಿಸಿದ್ದರು,ಈ ಕಾರ್ಯಕ್ರಮದಲ್ಲಿ ಐಕ್ಯಸಿ ಸಂಚಾಲ ಶ್ರೀಮತಿ ಸಲ್ಮಾ ತಾಜ್ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಕೆ ಮಹೇಶ್ , ಡಾಕ್ಟರ್ ಇಳಿಯರಾಜ ಕೆ ಉಪಸ್ಥಿತರಿದ್ದರು . ವಿದ್ಯಾರ್ಥಿನಿ ಕುಮಾರಿ ಮಾತಾಜಿ ಸ್ವಾಗತಿಸಿದರು ಮತ್ತು ವಂದಿಸಿದರು.

Leave a Reply

Your email address will not be published. Required fields are marked *

You missed

error: Content is protected !!