ನವ ನಿರ್ಮಾಣ ಭಾರತ ದೇಶವನ್ನು ಕಟ್ಟುವ ಕೆಲಸ ಈಗಿನ ಯುವಕರು ಮಾಡಬೇಕು. ಅದೇ ಕೇಸರಿಯ ಶಕ್ತಿ :-ಮನೋಹರ್ ಮಠದ್
ಶುಕ್ರದೆಸೆ ನ್ಯೂಸ್: ಜಗಳೂರು ಸುದ್ದಿ-ತಾಲೂಕಿನ ಸಂತೆ ಮುದ್ದಾಪುರ ಗ್ರಾಮದಲ್ಲಿ ಶ್ರೀ ಹನುಮ ಸೇವಾ ಸಮಿತಿಯಿಂದ ಪ್ರಥಮ ವರ್ಷದ ಹನುಮ ಜಯಂತಿ ಮಹೋತ್ಸವ ಹಾಗೂ ಪವನ ಹೋಮ ಧರ್ಮ ಜನ ಜಾಗೃತಿ ಸಮಾವೇಶ ಮತ್ತು ನೂರಾರು ಮಹಿಳೆಯರಿಂದ ವೈಭವಯುತ ಕುಂಭೋತ್ಸವ ಕಾರ್ಯಕ್ರಮ ನೆರವೇರಿತು.
ತಾಯಿ ಭುವನೇಶ್ವರಿ ಫೋಟೋಗೆ ಹೂ ಹಾಕುವುದರ ಮೂಲಕ ದಿವ್ಯ ಸಾನಿಧ್ಯ ವಹಿಸಿದ್ದ ಹಲವಾರು ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಸ್ತಾವಿಕ ನುಡಿ ಮಾತನಾಡಿದ ದೇವಸ್ಥಾನಗಳ ಸಂವರ್ಧನ ಸಮಿತಿ ಪ್ರಾಂತ ಪ್ರಮುಖ ಶ್ರೀ ಮನೋಹರ್ ಮಠದ್ ಮಾತನಾಡಿ ಈ ದೇವಸ್ಥಾನ ನಮ್ಮ ತಾಲೂಕಿನಲ್ಲಿ ಇರುವುದು ಸಂತೋಷದ ವಿಷಯ ಈ ದೇವಸ್ಥಾನಕ್ಕೆ 400 ವರ್ಷಗಳ ಇತಿಹಾಸವಿದೆ. ಇಲ್ಲಿ ಮೊದಲು ವಾಣಿಜ್ಯ ನಗರವಾಗಿತ್ತು. ದೇವಸ್ಥಾನಕ್ಕೆ ಸೇರಿದ 28 ಎಕರೆ ಜಾಗ ಇತ್ತು. ಈ ದೇವರ ಹನುಮ ಶಕ್ತಿ ಇರುವ ಕಾರಣ ಈ ದೇವರು ಇಲ್ಲಿ ನೆಲೆಸಿದ್ದಾನೆ. ನಾನು ಹಲವಾರು ದೇಶಗಳನ್ನು ಸುತ್ತಿದ್ದೇನೆ. ಆದರೆ 6 ಅಡಿ ಎದುರುಮುಖ ಆಂಜನೇಯ ಬೇಡಿ ಆಂಜನೇಯ ಇಡೀ ಭಾರತ ದೇಶದಲ್ಲಿ ಎಲ್ಲಿಗೂ ಇಲ್ಲ ಇರುವುದೇ ಇಲ್ಲಿ. ಜಗಳೂರು ಬರಗಾಲ ಇರಬಹುದು ಆದರೆ ಇಲ್ಲಿ ಹೃದಯ ಶ್ರೀಮಂತಿಕೆಯಲ್ಲಿ ಬಹಳ ದೊಡ್ಡವರು. ಈಗಿನ ಯುವಕರು ನವ ಭಾರತ ನಿರ್ಮಾಣವನ್ನು ಮಾಡಬೇಕು ಹಿಂದೂ ಸಮಾಜವನ್ನು ಸೃಷ್ಟಿ ಮಾಡಬೇಕು. ದುಡ್ಡಿಗಾಗಿ ಯಾರು ಸೈನಿಕರಾಗಿ ಹೋಗಲ್ಲ ಅವರು ಹೋಗುವುದು ನಮ್ಮ ದೇಶವನ್ನು ಕಾಪಾಡಲು ನಮ್ಮನ್ನು ಕಾಪಾಡಲು. ಹಾಗೆ ನಾವುಗಳು ನಮ್ಮ ದೇಶಕ್ಕೆ ನಮ್ಮ ರಾಜ್ಯಕ್ಕೆ ನಮ್ಮ ಹಳ್ಳಿಗೆ ಏನಾದರೂ ಒಂದು ಒಳ್ಳೆ ಸಮಾಜ ಮುಖಿ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಚಿತ್ರದುರ್ಗದ ಶ್ರೀ ಕೃಷ್ಣ ಯಾದವನಂದ ಮಹಾಸ್ವಾಮಿಗಳು ಮಾತನಾಡಿ ಮುಂದಿನ ದಿನಗಳಲ್ಲಿ ಈ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ನೀವು ಹನುಮನ ಮಾಲೆ ಹಾಕಿದ್ದೀರಿ. ಹಾಗಾಗಿ ಹನುಮಂತ ಬಹಳ ಪ್ರಭಾವಶಾಲಿ. ಜಪತಪಗಳನ್ನು ಮಾಡಿ ನಿಮ್ಮ ಕೆಲಸಗಳಿಗೆ ಹೋಗಿ ಎಂದು ಮಾಲಾಧಾರಿಗಳಿಗೆ ತಿಳಿಸಿದರು.
ರಾಣಿಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಪ್ರಕಾಶನಂದಜೀ ಮಹಾರಾಜ್ ಮಾತನಾಡಿ ಈಗಿನ ಯುವಕರು ಮಾಲೆ ಹಾಕುವುದರಿಂದ ಆಂಜನೇಯನ ರೀತಿ ಬಲ, ಬುದ್ಧಿ, ತೇಜಸ್ಸು ಹೊಂದಿರುತ್ತಾರೆ. ಸಂತೆ ಮುದ್ದಾಪುರದ ಈ ಹನುಮ ಇರುವ ಸ್ಥಳದಲ್ಲಿ ಯಾವುದು ಊರಿಲ್ಲ ಇಲ್ಲಿ ಜನರು ಇಲ್ಲ ಆದರೆ ಇಷ್ಟು ಸಂಖ್ಯೆಯಲ್ಲಿ ಸೇರಿರುವುದಕ್ಕೆ ಕಾರಣ ಧರ್ಮ. ನಾವು ಪೂಜಿಸುವ ದೇವರು ಒಬ್ಬನೇ ಆದರೆ ಅದರ ನಾಮ ಹಲವಾರು. ನೀವು ಮಾಲೆಯನ್ನು ಬಿಟ್ಟ ನಂತರ ಮನೆಗೆ ಹೋದ ಮೇಲೆ ತಿಂಗಳಿಗೆ ಒಮ್ಮೆ ಇಲ್ಲ ಮೂರು ತಿಂಗಳಿಗೆ ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಬಂದು ಹೋಗಿ ಎಂದು ಮಾಲಾದಾರಿಗಳಿಗೆ ಕಿವಿ ಮಾತು ಹೇಳಿದರು.
ಹಿರೇ ಅಡಗಲಿ ಹಾಲಸ್ವಾಮಿ ಮಹಾಸಮ ಸ್ಥಾನ ಮಠದ ಶ್ರೀ ಅಭಿನವ ಹಾಲಶ್ರೀ ಮಹಾ ಸ್ವಾಮಿಗಳು ಮಾತನಾಡಿ ನೀವು ಮಾಲಾ ದಾರಿಗಳು ಕೇಸರಿಬಟ್ಟೆಯನ್ನು ಧರಿಸಿದ್ದೀರಿ. ಕೇಸರಿಯ ಮೂಲ ಕಿಚ್ಚು ಬೆಂಕಿ ಅದೇ ಕೇಸರಿ. ಈ ಊರಿಗೆ ಇತಿಹಾಸ ಇದೆ ಸಂತೆ ಅಂದರೆ ಗದ್ದಲ. ಮುದ್ದು ಅಂದರೆ ಮುದ್ದಾದ ಮಾತುಗಳನ್ನು ಹಾಡುವುದು ಹಾಗಾಗಿ ಇದನ್ನು ಸಂತೆ ಮುದ್ದಾಪುರ ಅನ್ನಬಹುದು. ಜಗತ್ತಿನಲ್ಲಿ ಹಲವಾರು ಧರ್ಮಗಳು ಇರಬಹುದು ಆದರೆ ಹಸಿದವರಿಗೆ ಅನ್ನ ನೀರು ನೀಡುವುದು ನಮ್ಮ ಹಿಂದೂ ಸನಾತನ ಧರ್ಮ ಎಂದು ತಿಳಿಸಿದರು.
ತಪೋ ಕ್ಷೇತ್ರ ಕಣ್ವ ಕುಪ್ಪೆ ಗವಿಮಠದ ಡಾಕ್ಟರ್ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ ಇರುವ ದೇಶ ಅಂದರೆ ಅದು ನಮ್ಮ ಭಾರತ ದೇಶ. ಪರರಿಗೆ ಉಪಕಾರ ಮಾಡುವುದು ಪುಣ್ಯದ ಕೆಲಸ. ವಿಷ ಕಾರುವುದು ಚೋಳಿನ ಗುಣ ಆದರೆ ಅದನ್ನು ರಕ್ಷಣೆ ಮಾಡುವುದು ನಮ್ಮ ಗುಣ. ನಾವು ಮಾಡಿದ ಪುಣ್ಯ ನಮ್ಮನ್ನು ಕಾಪಾಡುತ್ತದೆ. ನಾವು ಧರ್ಮಕಾರ್ಯ ಪುಣ್ಯಕಾರ್ಯ ಮಾಡಿದಾಗ ನಮ್ಮನ್ನು ವಜ್ರಕಾಯದಂತೆ ಆ ದೇವರು ಕೃಪೆ ನಮ್ಮ ಮೇಲೆ ಇರುತ್ತದೆ. ತಂದೆ ಋಣ, ತಾಯಿ ಋಣ, ದೈವ ಋಣ, ಗುರುಋಣ, ದೇಶ ಋಣ ಇವೆಲ್ಲವೂ ನಮ್ಮಲ್ಲಿ ನಾವು ಅಳವಡಿಸಿ ಕೊಂಡಾಗ ಮಾತ್ರ ಸೃಷ್ಟಿಕರ್ತ ಭಗವಂತ ನಮ್ಮ ಮೇಲೆ ಕೃಪೆ ತೋರಿಸುತ್ತಾನೆ ಎಂದು ಹೇಳಿದರು.
ವಾಲ್ಮೀಕಿ ಮಹಾಪೀಠದ ಶ್ರೀ ಪ್ರಸನ್ನ ನಂದಪುರಿ ಸ್ವಾಮಿಗಳು, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕರದಾಳ ಡಾಕ್ಟರ್ ಪ್ರಣವಾನಂದ ಸ್ವಾಮಿಗಳು, ಸೇವಾಲಾಲ್ ಮಹಾಪೀಠ ಚಿತ್ರದುರ್ಗ ಶ್ರೀ ಸೇವಾಲಾಲ್ ಮಹಾಸ್ವಾಮಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಮಾಜಿ ಶಾಸಕರಾದ ರಾಜೇಶ್, ನಿವೃತ್ತ ಡಿ ವೈ ಎಸ್ ಪಿ ಕಲೇಶಪ್ಪ, ಕಾಂಗ್ರೆಸ್ ಮುಖಂಡ ಕೀರ್ತಿಕುಮಾರ್, ಬಿದರಕೆರೆ ಪ್ರಕಾಶ್, ಹಳದಂಡಿ ಕರಿಬಸಯ್ಯ, ಎಎಂ ಮರುಳಾರಾಧ್ಯ, ಕೊರಟಿಕೆರೆ ಧನಂಜಯ್, ಬಿಸ್ತುವಳ್ಳಿ ಬಾಬು, ನಾಗೇಂದ್ರಪ್ಪ ಸೇರಿದಂತೆ ಹನುಮ ಸೇವಾ ಸಮಿತಿಯ ಸದಸ್ಯರು ಹಾಜರಿದ್ದರು.