20 ಲಕ್ಷ ಹಣ ಡ್ರಾ ಮಾಡಿಕೊಂಡು ಪರಾರಿಯಾದ ಪಿಡಿಓ ಪಂಚಾಯಿತಿ ಹಣವನ್ನ ನುಂಗಿ ನೀರು ಕುಡಿದ ಅಭಿವೃದ್ಧಿ ಅಧಿಕಾರಿ ಪಿಡಿಓ ದುರಾಳ ತಿಮ್ಮೇಶ್ ನನ್ನ ಸಸ್ಪೆಂಡ್ ಮಾಡಿ
ಗ್ರಾಮ ಪಂಚಾಯಿತಿ ಹಣ ದುರ್ಬಳಕೆ: ಪಿಡಿಓ
ಜಗಳೂರು: ತಾಲ್ಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿಯ ಹಣ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಗಳು ಕೇಳಿ ಬಂದಿವೆ.ಈ ಹಿನ್ನಲೆಯಲ್ಲಿ ಬಸವನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಸರ್ಕಾರಿ ಯೋಜನೆಗಳ ಹಣವನ್ನ ಬೇಕಾಬಿಟ್ಟಿ ಬಳಕೆ ಮಾಡಿಕೊಂಡು ಯಾವುದೇ ಕಾಮಗಾರಿ ಅನುಷ್ಠಾನ ಮಾಡದೇ ಕ್ರಿಯಯೋಜನೆ ತಯಾರಿಸದೆ 20 ಲಕ್ಷ ಪಂಚಾಯಿತಿ ಹಣವನ್ನ ತನ್ನ ಪತ್ನಿ ಖಾತೆಗೆ ಸೇರಿದಂತೆ ವಿವಿಧ ಬೇನಾಮಿ ಹೆಸರುಗಳಿಗೆ ವರ್ಗಾಯಿಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗ್ರಾಪಂ ಅಧ್ಯಕ್ಷರು ಸಹ ಶಾಮಿಲು ಆಗಿರುವ ವದಂತಿಗಳು ಸಹ ಕೇಳಿಬಂದಿವೆ . ಗ್ರಾಪಂ ಅದ್ಯಕ್ಷರಾದ ರೇಖಾ ತಿಮ್ಮೇಶಿ ಮತ್ತು ಪಿಡಿಓ ಬೆರಳುಚ್ಚು ನೀಡದೆ ಹಣ ಬೇರೋಬ್ಬರ ಖಾತೆಗೆ ವರ್ಗಾಯಿಸಲು ಸಾಧ್ಯವಿಲ್ಲ ಆದರೆ ಅಧ್ಯಕ್ಷರ ಪತಿ ನನಗೆ ಯಾವುದೆ ಹಣ ಡ್ರಾ ಮಾಡಿರುವುದು ನನಗೆ ಗೊತ್ತಿಲ್ಲ ಎಂದು ಬುರುಡೆ ಹೊಡೆಯುತ್ತಿದ್ದಾರೆ ,ಇದನ್ನೆಲ್ಲ ಕೇಳಿದರೆ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರು ನೋಡುವುದಿಲ್ಲ ಎಂಬ ಗಾದೆಯಂತೆಯಿದೆ. ಪಿಡಿಓ ಎಂಬ ದುರಾಳ ತಿಮ್ಮಶಿ ಸರ್ಕಾರಿ ನೀಯಮವನ್ನೆ ಗಾಳಿಗೆ ತೂರಿ ಸರ್ಕಾರದ ಅಧಿಕಾರವನ್ನ ಮನಬಂದಂತೆ ದುರುಪಯೋಗಪಡಿಸಿಕೊಂಡ ದುರಾಳ ಬುದ್ದಿ ಪಿಡಿಓ ನನ್ನ ಸಸ್ಪೆಂಡ್ ಯಾವಾಗ??.ಈ ಹಿಂದೆ ದೋಣಿಹಳ್ಳಿ ಗ್ರಾಪಂ ಕರ್ತವ್ಯ ನಿರ್ವಹಿಸಿದ ವೇಳೆಯಲ್ಲೂ ಸಹ ಪಂಚಾಯಿತಿ ಹಣವನ್ನ ದುರುಪಯೋಗಪಡಿಸಿಕೊಂಡು ಆನ್‌ಲೈನ್ ಗೇಮ್ ಆಟ ಹಾಡಿ ಸೋತು ಸುಣ್ಣಾಗಿದ್ದ ಸ್ವಲ್ಪ ದಿನ ಮಂಕಾಗಿ ಕಾಣದಂತೆ ಮಾಯವಾಗಿದ್ದ ಇದೀಗ ಪುನ ಮತ್ತೊಂದು ಅವಂತರ ಮಾಡಿ ಪಂಚಾಯಿತಿ ಹಣ ಡ್ರಾ ಮಾಡಿಕೊಂಡು ಮೊಬೈಲ್ ಪೊನ್ ಸುಚ್ಡಪ್ ಮಾಡಿಕೊಂಡು ತಲೆಮರೆಸಿಕೊಂಡು ಕರ್ತವ್ಯಲೋಪ ವೇಸಗಿದ್ದರು ಸಹ ಮೇಲಾಧಿಕಾರಿಗಳು ಈತನನ್ನ ಸಸ್ಪೆಂಡ್ ಮಾಡದೆ ಇರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಸಂಬಂಧಿಸಿದ ಮೇಲಾಧಿಕಾರಿಗಳೆ ಈತ ಮಾಡಿರುವ ಘನಂಧರಿ ಕೆಲಸವನ್ನ ಖಂಡಿಸಿ ಪಂಚಾಯಿತಿಯಲ್ಲಿ ಆಗಿರುವ ಹಣ ದುರುಪಯೋಗದ ಬಗ್ಗೆ ತನಿಖೆ ಮಾಡಿ ಸಸ್ಪೆಂಡ್ ಮಾಡಿ ಎಂದ ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಟ್ಟಾರೆ ಪಂಚಾಯಿತಿ ಹಣವನ್ನ ಈ ರೀತಿ ದುರ್ಬಳಕೆ ಮಾಡಿಕೊಂಡು ತನ್ನವರ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ತನ್ನ ತೆವಲಿನ ಸ್ವಾರ್ಥತೆಗೆ ಹಿಡಿ ಪಂಚಾಯಿತಿ ನೀಯಮಗಳೆ ಗಾಳಿಗೆ ತೂರಿರುವ ಪಿಡಿಓ ತಿಮ್ಮೇಶ್ ನಿಗೆ ಜಿಪಂ ಸಿಇಓ ಯಾವ ಶಿಕ್ಷೆ ವಿಧಿಸುವರು ಅಥವಾ ಪುನ ಇದೆ ರೀತಿ ಪಂಚಾಯಿತಿ ಹಣ ನುಂಗಿ ನೀರು ಕುಡಿ ಎಂದು ಬೇರೊಂದು ಪಂಚಾಯಿತಿಗೆ ನೇಮಕ ಮಾಡಿ ಇಂತ ಭ್ರಷ್ಟರಿಗೆ ಮತ್ತಷ್ಟು ಭ್ರಷ್ಟಾಚಾರ ಮಾಡು ಎಂದು ಸಹಕರಿಸುವರು ಎಂದು ಕಾದು ನೋಡಬೇಕಾಗಿದೆ. ಡ್ರಾ ಸಾರ್ವಜನಿಕರು ಆಗ್ರಹಿಸಿದ್ದಾರೆ.