ನೂತನ ಪ.ಪಂ ಅಧ್ಯಕ್ಷರಾಗಿ ನವೀನ್ ಕುಮಾರ್ ಉಪಾಧ್ಯಕ್ಷರಾಗಿ ಲೋಕಮ್ಮ ಅವಿರೋಧ ಆಯ್ಕೆ
ಜಗಳೂರು ಸುದ್ದಿ:ಪಟ್ಟಣದ ಪಟ್ಟಣಪಂಚಾಯಿತಿ ನೂತನ ಅಧ್ಯಕ್ಷನಾಗಿ ನವೀನ್ ಕುಮಾರ್ ಉಪಾಧ್ಯಕ್ಷೆಯಾಗಿ ಲೋಕಮ್ಮ ಓಬಳೇಶ್ ಅವಿರೋಧ ಆಯ್ಕೆಯಾಗಿದ್ದಾರೆ..
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ತೆರವಾಗಿ ಕಳೆದ ಒಂದು ವರ್ಷಕ್ಕಿಂತ ಅಧಿಕ ತಿಂಗಳುಗಳ ಕಾಲ ಆಡಳಿತಾಧಿಕಾರಿ ಕೈಯಲ್ಲಿದ್ದ ಪಟ್ಟಣ ಪಂಚಾಯಿತಿ ಆಡಳಿತ ಮೀಸಲಾತಿ ಹೊರಬಿದ್ದ ನಂತರ ಪುನಃ ಬಿಜೆಪಿ ತೆಕ್ಕೆಗೆ ಸೇರ್ಪಡೆಗೊಂಡಿತು.
‘ಸಾಮಾನ್ಯ ಅಧ್ಯಕ್ಷ ಮೀಸಲು ಸ್ಥಾನಕ್ಕೆ ನವೀನ್ ಕುಮಾರ್ ಅವರು ಹಾಗೂ ಸಾಮಾನ್ಯ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಲೋಕಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ಉಮೇದುವಾರಿಕೆ ದಾಖಲೆಗಳು ಊರ್ಜಿತವಾದ ಹಿನ್ನೆಲೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ’ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಸಯ್ಯದ್ ಕಲೀಂ ಉಲಾ ತಿಳಿಸಿದರು.
ನೂತನ ಅದ್ಯಕ್ಷ ಉಪಾಧ್ಯಕ್ಷರಿಗೆ ಶುಭಾ ಹಾರೈಸಿದ ಮಾಜಿ ಶಾಸಕರುಗಳಾದ ಹೆಚ್ ಪಿ.ರಾಜೇಶ್.ಹಾಗೂ ಎಸ್ ವಿ ರಾಮಚಂದ್ರ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,’ಬಹುದಿನಗಳಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಲ್ಲದೆ ಅಧಿಕಾರ ಗದ್ದುಗೆಗಾಗಿ ಕಾತುರದಲ್ಲಿ ಕಾಯುತ್ತಿದ್ದ ಆಕಾಂಕ್ಷಿಗಳಿಗೆ ಇದೀಗ ತೆರೆಬಿದ್ದಿದೆ.ಮತ್ತೊಮ್ಮೆ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಬಹುಮತ ಸಾಬೀತುಪಡಿಸಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೆವೆ.. ನಮ್ಮ ಸದಸ್ಯರು ಪಕ್ಷನಿಷ್ಟೆ,ಸಂಘಟನೆಯ ಒಗ್ಗಟ್ಟು ಪ್ರದರ್ಶಿಸಿರುವುದು ಸಂತಸ ತಂದಿದೆ.ಆಂತರಿಕ ವೈಮನಸ್ಸು ತೊರೆದು ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಸಂಕಲ್ಪಗೈಯೋಣ’ ಎಂದು ಕರೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,’ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಸದಸ್ಯರು ಆಕಾಂಕ್ಷಿಗಳಿದ್ದರು.ಪ್ರತಿಯೊಬ್ಬ ಆಕಾಂಕ್ಷಿಯು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದು ಹಂತಹಂತವಾಗಿ ಅವಕಾಶ ಸಿಗಲಿವೆ.ಈ ಬಾರಿ ಬಿಜೆಪಿ ಪಕ್ಷದ ವರಿಷ್ಠರು,ಜಿಲ್ಲಾ ಮುಖಂಡರುಗಳು ಗೊಂದಲ ಸರಿಪಡಿಸಿದ ಪರಿಣಾಮ ಅಧ್ಯಕ್ಷ ಉಪಾಧ್ಯಕ್ಷರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ’ ಎಂದರು.
‘ನೂತನ ಅಧ್ಯಕ್ಷರು ಉಪಾಧ್ಯಕ್ಷರುಗಳು ಪಕ್ಷಾತೀತವಾಗಿ ಸರ್ವಸದರಸ್ಯರ ವಿಶ್ವಾಸ ಗಳಿಸಿ ಪಟ್ಟಣದಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು.ಪಟ್ಟಣದಲ್ಲಿ ಜನಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು ರಸ್ತೆ ವಿಸ್ತರಣೆಗೆ ಸಹಕರಿಸಬೇಕು.ಮಾದರಿ ಪಟ್ಟಣವಾಗಲು ಸರ್ವರೂ ಸಹಕರಿಸಬೇಕು’ಎಂದರು.
ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ,ಜಿಲ್ಲಾ ಕಾರ್ಯದರ್ಶಿ ಧನಂಜಯ್ ಕಡ್ಲೆಬಾಳು,ಪ.ಪಂ ಸದಸ್ಯರಾದ ರೇವಣ್ಣ,ತಿಪ್ಪೇಸ್ವಾಮಿ,ನಿರ್ಮಲ,ಲಲಿತಮ್ಮ,ವಿಶಾಲಾಕ್ಷಿ,ಮಂಜಮ್ಮ,ಖಾಜುನ್ನಿಸಾ,ಲುಕ್ಮಾನ್ ಖಾನ್,ಸರೋಜಮ್ಮ,ಪಾಪಲಿಂಗಪ್ಪ,
ಮುಖಂಡರಾದ ಜೆ.ವಿ.ನಾಗರಾಜ್,ಎ.ಎಂ.ಮರುಳಾರಾಧ್ಯ,ಸುನಿಲ್ ನಾಯ್ಕ,ಓಬಳೇಶ್,ಹನುಮಂತಪ್ಪ,ಸೇರಿದಂತೆ ಇದ್ದರು.